Advertisement

ಸಂಸ್ಕಾರವೇ ಧರ್ಮದ ಧ್ಯೇಯ: ಶ್ರೀಶೈಲ ಶ್ರೀ

12:43 PM Jul 18, 2017 | Team Udayavani |

ಕಲಬುರಗಿ: ಸಂಸ್ಕಾರವಿಲ್ಲದ ಜೀವನದ ಅಧೋಗತಿಗೆ ಹೋಗುವುದರಿಂದ ಬದುಕನ್ನು ಉನ್ನತಗೊಳಿಸಬೇಕಾದರೆ ಬದುಕಿಗೆ ಸಂಸ್ಕಾರ ಅಗತ್ಯವಾಗಿದ್ದು, ಬದುಕಿಗೆ ಸಂಸ್ಕಾರ ನೀಡುವುದೇ ಧರ್ಮದ ಗುರಿಯಾಗಿದೆ ಎಂದು ಶ್ರೀಶೈಲ ಜಗದ್ಗುರು ಡಾ| ಚನ್ನಸಿದ್ಧರಾಮ ಪಾಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮೀಜಿ ಹೇಳಿದರು.

Advertisement

ನಗರದ ಶಾಂತಲಿಂಗೇಶ್ವರ ಕಲ್ಯಾಣ ಮಂಟಪದಲ್ಲಿ ಸಿದ್ಧಾಂತ ಶಿಖಾಮಣಿ ಪ್ರವಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡುತ್ತಾ, ಪ್ರತಿಯೊಬ್ಬರು ಮನಸ್ಸಿನಲ್ಲಿ ಅದ್ಭುತವಾದ ಶಕ್ತಿಯಿರುವುದರಿಂದ ಇದಕ್ಕೆ ಸರಿಯಾದ ತರಬೇತಿ ನೀಡಬೇಕು ಎಂದರು.
ನೀರು ಕೆಳಮುಖವಾಗಿ ಹರಿಯುವಂತೆ ಮನಸ್ಸು ಯಾವಾಗಲೂ ವಿಷಯಗಳತ್ತ ಮುಖಮಾಡಿ ಅಧೋಗತಿಯತ್ತ ಸಾಗುತ್ತಿರುತ್ತದೆ. ನೀರಿಗೆ ಉಷ್ಣತೆಕೊಟ್ಟು ಆವಿಯಾಗಿ ಮೇಲ್ಮುಖವಾಗಿ ಹೋಗುವಂತೆ ಮಾಡಲು ಸಾಧ್ಯವಾಗುವಂತೆ ಮನಸ್ಸಿಗೆ ಧರ್ಮದ ಸಂಸ್ಕಾರ ನೀಡುವ ಮೂಲಕ ಭಗವಂತನೆಡೆಗೆ ಸಾಗುವಂತೆ ಮಾಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.

ಕಡಗಂಚಿಯ ವೀರಭದ್ರ ಶಿವಾಚಾರ್ಯರು ನೇತೃತ್ವ ವಹಿಸಿದ್ದರು. ಚಿಮ್ಮಾಇದ್ಲಾಯಿ ಶ್ರೀಗಳು, ರಾಯಚೂರ ಶ್ರೀಗಳು, ಪಂಪಾವತಿ ದೇವಸು ಸುಲೆಪೇಟ್‌, ವೀರಣ್ಣ ಮಂಗಾಣಿ, ಬಸವರಾಜ ಪಾಟೀಲ್‌ ಗೋಳಾ, ಸೋಮಶೇಖರ ಮಠಪತಿ, ಸಿದ್ದಣಗೌಡ ಪಾಟೀಲ್‌
ಕಡಣಿ, ಕರಿಸಿದ್ದಪ್ಪ ಪಾಟೀಲ್‌ ಹರಸೂರ, ಸಿದ್ರಾಮಪ್ಪ ಆಲಗೂಡಕರ್‌, ವೀರಣ್ಣ ಧುತ್ತರಗಾಂವ, ಬಸವರಾಜ ಶೀಲವಂತ ಅಂಬಲಗಿ, ಶಿವಾನಂದ ಮಠಪತಿ, ಸಂಗಮನಾಥ ಬಿರಾದಾರ ಇದ್ದರು. 

ಇದಕ್ಕೂ ಗಂಜ ಹನುಮಾನ ಮಂದಿರದಿಂದ ಸಾರೋಟಿಯಲ್ಲಿ ಶ್ರೀಶೈಲ ಜಗದ್ಗುರುಗಳ ಭವ್ಯವಾದ ಮೆರವಣಿಗೆಯಲ್ಲಿ ಸುಮಂಗಲಿಯರು ಶ್ರೀ ಸಿದ್ಧಾಂತ ಶಿಖಾಮಣಿ ಧರ್ಮಗ್ರಂಥವನ್ನು ಆನೆಯ ಮೇಲೆ ಅಂಬಾರಿ ಆರತಿ, ಪುರವಂತರು ಒಂಟೆ, ಕುದುರೆ
ಮೂಲಕ ಶ್ರೀಶಾಂತಲಿಂಗೇಶ್ವರ ಕಲ್ಯಾಣ ಮಂಟಪಕ್ಕೆ ಬರಮಾಡಿಕೊಳ್ಳಲಾಯಿತು. ಶರಣಯ್ಯ ಬೀದಿಮನಿ ಅವರಿಂದ ಸಂಗೀತ ಜರುಗಿತು. ಶಿವಶರಣಪ್ಪ ಸರಸಂಬಾ ನಿರೂಪಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next