Advertisement

ಎಸ್ಎಸ್ಎಲ್ ಸಿಯಲ್ಲಿ ಶೇ. 48.64 ಅಂಕ ಪಡೆದ ವಿದ್ಯಾರ್ಥಿಗೆ ಬಣ್ಣ ಎರಚಿ ಸನ್ಮಾನ!ವಿಡಿಯೋ ವೈರಲ್

03:13 PM Aug 11, 2020 | keerthan |

ಬೆಳಗಾವಿ: ನಗರದ ಬಾಂಧುರ ಗಲ್ಲಿಯ ಸಮರ್ಥ ಗೋವಿಲಕರ್ ಎಂಬ ವಿದ್ಯಾರ್ಥಿ ಎಸ್ಎಸ್ಎಲ್ ಸಿ ಪರೀಕ್ಷೆಯಲ್ಲಿ ಶೇ.‌ 48.64 ಅಂಕ ಗಳಿಸಿ ಉತ್ತೀರ್ಣ ಆಗಿದ್ದಕ್ಕೆ ಸ್ಥಳೀಯರು ಗುಲಾಲು ಎರಚಿ, ಶಾಲು ಹೊದಿಸಿ ಸನ್ಮಾನಿಸಿದರು.

Advertisement

ಬಾಂಧುರ ಗಲ್ಲಿಯ ಮರಗಾಯಿ ಗ್ರೂಪ್ ನೇತೃತ್ವದಲ್ಲಿ ಸ್ಥಳೀಯರು ಸೋಮವಾರ ರಾತ್ರಿ ವಿದ್ಯಾರ್ಥಿಗೆ ಗುಲಾಲು ಎರಚಿ, ಶಾಲು ಹೊದಿಸಿ ಸನ್ಮಾನ ಮಾಡಿದರು. ವಿದ್ಯಾರ್ಥಿಯ ಫೋಟೊ ಸಹಿತ ಕಟೌಟ್ ಹಾಕಿ ಶುಭಾಶಯ ಕೋರಿದ್ದಾರೆ.

ವಿದ್ಯಾರ್ಥಿಗೆ ಶುಭಾಶಯ ಕೋರುವ ಬ್ಯಾನರ್ ನಲ್ಲಿ ವಿದ್ಯಾರ್ಥಿಯ ಫೋಟೊ ಹಾಕಿ, ಶೇ. 48 ಚಿಕ್ಕ ಅಕ್ಷರದಲ್ಲಿ ಬರೆದು, .64 ಅತಿ ದೊಡ್ಡದಾಗಿ ಬರೆದು ವ್ಯಂಗ್ಯ ಕೂಡ ಮಾಡಲಾಗಿದೆ. ಗಲ್ಲಿಯ ಈ ಗ್ರೂಪ್ ನ ಸುಮಾರು 30ಕ್ಕೂ ಹೆಚ್ಚು ಜನ ಸೇರಿ ವಿದ್ಯಾರ್ಥಿ ಪರ ಘೋಷಣೆ ಕೂಗಿ ಸಂಭ್ರಮಿಸಿದ್ದಾರೆ. ಈ ಸಂಭ್ರಮದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Advertisement

Udayavani is now on Telegram. Click here to join our channel and stay updated with the latest news.

Next