Advertisement

ಆಂತರಿಕ ಮನಸ್ಸಿನಶುದ್ಧೀಕರಣಕ್ಕೆ ಈ ಪಾದಯಾತ್ರೆ

12:23 PM Jun 10, 2017 | |

ಶ್ರೀ ರಾಮಾನುಜಾ ಚಾರ್ಯರು ಒಬ್ಬ ಸಂತರು, ವಿದ್ವಾಂಸರು ಹಾಗೂ ದಾರ್ಶನಿಕರು. ವೇದಾಂತದ ಪ್ರಸಿದ್ಧ ಸಿದ್ಧಾಂತಗಳಲ್ಲೊಂದಾದ ವಿಶಿಷ್ಟಾದ್ವೈತದ ಪ್ರತಿಪಾದಕರು. ಶ್ರೀಗಳ ಜನ್ಮ ಸಹಸ್ರಮಾನೋತ್ಸವ ವರ್ಷವಿದು. ಅದರ ಪ್ರಯುಕ್ತ ಶ್ರೀಕ್ಷೇತ್ರ ಕೈವಾರದ ಶ್ರೀಯೋಗಿ ನಾರೇಯಣ ಮಠ ವರ್ಷಪೂರ್ತಿ ಆಚರಿಸಿದ ಸಂಸ್ಮರಣ ಕಾರ್ಯಕ್ರಮದ ಸಂಕೀರ್ತನಾ ಪಾದಯಾತ್ರೆ ಅಂತಿಮ ಅರ್ಪಣೆಯಾಗಿ ದಕ್ಷಿಣ ಭಾರತದ ಆಧ್ಯಾತ್ಮಿಕ ಪುಣ್ಯಕ್ಷೇತ್ರ ತಿರುಪತಿಯ ಶ್ರೀನಿವಾಸ ಮಂಗಾಪುರದ ಶ್ರೀನಿವಾಸನ ಸನ್ನಿಧಿಯಲ್ಲಿ ಸಮಾಪ್ತಿಗೊಂಡಿದೆ.

Advertisement

    ಈ ಬೃಹತ್‌ ಸಂಕೀರ್ತನಾ ಪಾದಯಾತ್ರೆಯ ನೇತೃತ್ವವನ್ನು  ಶ್ರೀ ಯೋಗಿ ನಾರೇಯಣ ಮಠದ ಧರ್ಮದರ್ಶಿಗಳು ಹಾಗೂ ಗೋಕುಲ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ರಾದ ಡಾ. ಎಂ.ಆರ್‌. ಜಯರಾಂ ಅವರು ವಹಿಸಿದ್ದರು. ಏ.20 ರಂದು ಕೈವಾರದಿಂದ ಆರಂಭಿಸಿದ ಪಾದಯಾತ್ರೆಯಲ್ಲಿ  ಬಿಸಿಲ ತಾಪವನ್ನೂ ಲೆಕ್ಕಿಸದೆ 117 ಗ್ರಾಮಗಳ ಹಾದು ಹೋದ ತಂಡ ಹಾದಿಯುದ್ದಕ್ಕೂ ಭಜನೆ, ಕೀರ್ತನೆ, ಪ್ರವಚನ, ಜಪ  ಮಾಡುತ್ತಾ ಮೇ 1ರಂದು ತಿರುಪತಿಯನ್ನು ಸೇರಿದೆ. ಸಂಕೀರ್ತನಾ ಪಾದಯಾತ್ರೆಯೊಂದಿಗೆ ಸಹಸ್ರಮಾನೋತ್ಸವ ಅಂತಿಮಗೊಳಿಸಿದ ಎಂ.ಆರ್‌. ಜಯರಾಂ ಅವರು ಆಧ್ಯಾತ್ಮಿಕ ಅನುಭವಗಳನ್ನು ಉದಯವಾಣಿಯೊಂದಿಗೆ ಹಂಚಿಕೊಂಡಿದ್ದು ಹೀಗೆ…

    ‘ಎಲ್ಲಿಯವರೆಗೂ ಯಾವುದೇ ಸ್ವಾರ್ಥವಿಲ್ಲದೆ ನಿಷ್ಕಾಮದಿಂದ ಕರ್ಮ ಮಾಡುತೀ¤ರೋ ಅಲ್ಲಿಯವರೆಗೆ ಜಯವಿರುತ್ತದೆ. ನಿಮ್ಮ ನಿಷ್ಕಾಮ ಕರ್ಮವೇ ಚೈತನ್ಯ’ ಎನ್ನುವ ಮಾತಿನಿಂದ ಆರಂಭಿಸಿದ ಎಂ.ಆರ್‌. ಜಯರಾಂ ಅವರು ನಿಷ್ಕಾಮ ಸೇವೆ ಪರಮಶಕ್ತಿಯಾಗಿ ಯಾವುದೇ ಕೆಲಸವನ್ನಾದರೂ ನಿಭಾಯಿಸುವ ಚೇತನ ಶಕ್ತಿಯಾಗುತ್ತದೆ. ಅಂತಹ ಕಾರ್ಯ ಆಗಿದೆ. ಅದುವೇ  ಬೃಹತ್‌ ಸಂಕೀರ್ತನಾ ಪಾದಯಾತ್ರೆ.

    ಬಹುದೊಡ್ಡ ಸಂತರು, ವಿದ್ವಾಂಸರು ಹಾಗೂ ದಾರ್ಶನಿಕರಾಗಿದ್ದ ಶ್ರೀರಾಮಾನುಜಾಚಾರ್ಯರು ಪ್ರಾಚೀನ ಅದ್ವೈತ ವೇದಾಂತ ಸನ್ಯಾಸ ಸಂಪ್ರದಾಯದ ಭಾಗವಾಗಿದ್ದರು. ಶ್ರೀ ರಾಮಾನುಜರನ್ನು ತಮ್ಮ ಗುರುಗಳೆಂದು ಸೀÌಕರಿಸಿದ್ದ ಯೋಗಿ ನಾರೇಯಣರು ಕಲಿಯುಗ ಕೊನೆ ಆಚಾರ್ಯ ಗುರುಗಳಾಗಿದ್ದಾರೆ. ಅವರನ್ನು ಕೈವಾರ ತಾತಯ್ಯ ಎಂತಲೂ ಕರೆಯುತ್ತಾರೆ.

    ಕೈವಾರ ನಾರಾಯಣಪ್ಪ (ನಾರೇಯಣ) ಯತೀಂದ್ರರ ವಚನಗಳು ಅನುಭಾವಿತ ಅಮೂಲ್ಯ ಸತ್ಯಯುಕ್ತವಾದವುಗಳು ಅವರ ಪದ್ಯಗಳನ್ನು ಹಾಗೂ ಕೀರ್ತನೆಗಳನ್ನು ಓದಿ, ಹಾಡಿ ಅಷ್ಟಕ್ಕೆ ತೃಪ್ತಿಪಟ್ಟುಕೊಳ್ಳದೆ ಅವುಗಳಲ್ಲಿ ಅಡಗಿರುವ ಭಕ್ತಿಯಿಂದ ತತ್ತÌಗಳನ್ನು ಓದಿ, ಅರ್ಥ ಮಾಡಿಕೊಂಡು ಮನನಮಾಡಿಕೊಂಡು ಅನುಷ್ಠಾನ ಮಾಡಬೇಕಾದವುಗಳು.    

Advertisement

ಇಂತಹ ಕಾರ್ಯಕ್ರಮ ಪ್ರತಿವರ್ಷವಿರುತ್ತದೆಯೇ?
ಶ್ರೀ ರಾಮಾನುಜಾ ಚಾರ್ಯರು ಸಹಸ್ರಮಾನೋತ್ಸವ ಆಚರಣೆಯ ಸಮಾರೋಪ ಸಮಾರಂಭ. ಇದು ಪ್ರತಿ ವರ್ಷ ಮಾಡುವಂತ ಕಾರ್ಯಕ್ರಮವಲ್ಲ. ಆಚಾರ್ಯರ ಸಾವಿರ ವರ್ಷದ ಜಯಂತಿ ಇದು. ಆಚಾರ್ಯ ಪಂಥದಲ್ಲಿ ಶಂಕರಚಾರ್ಯ, ಮಧ್ವಚಾರ್ಯ ಹಾಗೂ ರಾಮಾನುಜಾಚಾರ್ಯ, ವಲ್ಲಭಾಚಾರ್ಯರು ಬಂದಿದ್ದಾರೆ. ಇವರು ಒಂದೊಂದು ರೀತಿ ಸಿದ್ಧಾಂತ ಕೊಟ್ಟಿದ್ದಾರೆ. ಅವರುಗಳು ನೀಡಿದ ಸಿದ್ಧಾಂತದಿಂದ ಮೋಕ್ಷ ಪಡೆದಿದ್ದಾರೆ. 

    ಸಾಮಾನ್ಯವಾಗಿ ಸಂಸಾರಸ್ಥರಾಗಿದ್ದವರು ಸಾಧನೆ ಮಾಡಿ, ಗುರುಗಳಾಗಿ, ಸದ್ಗುರುಗಳಾಗಿ ಅವರೇ ಬ್ರಹ್ಮವೂ ಆಗಿದ್ದಾರೆ. ಕಬೀರದಾಸರು, ಸೂರದಾಸರು, ಮೀರಾಬಾಯಿ, ತುಳಸಿದಾಸರು, ಜ್ಞಾನದೇವ, ಸಂತ ತುಕಾರಾಂ, ಸಮರ್ಥ ರಾಮದಾಸು, ಕನಕದಾಸರು, ಪುರಂದರದಾಸರು, ಯೋಗಿ ನಾರೇಯಣರು (ತಾತಯ್ಯ), ಪೋತನ ಬ್ರಹೆ¾àಂದ್ರರು ಇವರೆಲ್ಲರೂ ಕೂಡ ಸಾಮಾನ್ಯ ಜನರಂತೆ ಸಂಸಾರಸ್ಥರೇ ಇವರೆಲ್ಲರೂ ಒಂದು ಸಿದ್ಧಾಂತವನ್ನು ಇಟ್ಟುಕೊಂಡು ಸಾಧನೆ ಮಾಡಿ ಕೈವಲ್ಯ ಅಥವಾ ವೈಕುಂಠವನ್ನು ಮುಟ್ಟಿ ಸಮಾಜಕ್ಕೆ ಸಂದೇಶ ನೀಡಿದ್ದಾರೆ. ಅವರೆಲ್ಲರೂ ಇಟ್ಟುಕೊಂಡಿದ್ದ ಅಮೂಲ್ಯ ಸಿದ್ಧಾಂತ ಈ ಸಾವಿರ ವರ್ಷದಲ್ಲಿ ಬೆಳವಣಿಗೆಯಾಗುತ್ತ ಬಂತು. ಅದರಲ್ಲೂ ರಾಮಾನುಜರ ಸಿದ್ಧಾಂತ ಬಹಳಷ್ಟು ಬೆಳವಣಿಗೆಯಾಯ್ತು. ಭಕ್ತಿಪಂಥದಿಂದ ದಾಸಪಂಥವಾಯ್ತು, ದಾಸಪಂಥದಿಂದ ಪ್ರಪತ್ಯಕ್ಕೆ ಬಂತು ಹೀಗೆ ಬೆಳವಣಿಗೆಯಾಯ್ತು. 

    ಇಲ್ಲಿ ರಾಮಾನುಜರನ್ನು ಮಾತ್ರವೇ ನೋಡುತ್ತಿಲ್ಲ. ಆದರೆ, ರಾಮಾನುಜರ ವಿಶಿಷ್ಟಾದ್ವೈತ ಸಿದ್ಧಾಂತವೇ ಪ್ರಮುಖವಾದದ್ದು. ಅದನ್ನು ಜಗತ್ತಿಗೆ ಸಾರುವ ಉದ್ದೇಶ ಹಾಗೂ ಅದರಲ್ಲಿರುವ ಎಲ್ಲರಲ್ಲೂ ನೆನಪು ಮಾಡುವ ಸಾವಿರ ವರ್ಷ ಈ ವರ್ಷ ಬಂದಿದ್ದರಿಂದ ಶ್ರೀ ರಾಮಾನುಜ ಚಾರ್ಯರ ಜನ್ಮ ಸಹಸ್ರಮಾನೋತ್ಸವ ಆಚರಿಸುವ ಮಹತ್ವ ಬಂದಿತು. ಅದಕ್ಕೋಸ್ಕರ ಈ ಬೃಹತ್‌ ಸಂಕೀರ್ತನಾ ಪಾದಯಾತ್ರೆಯನ್ನು ಹಮ್ಮಿಕೊಳ್ಳಲಾಗಿತ್ತು.

ಕೈವಾರದಲ್ಲೇ ಏಕೆ?
ರಾಮಾನುಜರ ಜನ್ಮ ಸಹಸ್ರಮಾನೋತ್ಸವ ಕೈವಾರದಲ್ಲೇ ಏಕೆ ಹಮ್ಮಿಕೊಳ್ಳಲಾಯಿತು ಎಂದರೆ, ದಾಸಪರಂಪರೆಗೆ ಮೂಲ ಪ್ರೇರಕರಾದ ರಾಮನುಜಾಚಾರ್ಯರ ಸಿದ್ಧಾಂತದಿಂದ ತಾತಯ್ಯನವರು ಪ್ರೇರಿತರಾಗಿದ್ದರು. ಅವರ ಸಿದ್ಧಾಂತವನ್ನು ಒಪ್ಪಿಕೊಂಡು ಗುರುಗಳಾಗಿ ಸೀÌಕಾರ ಮಾಡಿದ್ದಾರೆ. ‘ತಿರುಮಂತ್ರಮು ಜೀವನಮು ಪಾವನಮು ಈ ದಿನಮು. ರಾಮಾನುಜ ಗುರುವಿಚ್ಚುರಾ ನೀ..ಕಿ ಮೋಕ್ಷಮು. ರಾಮಾನುಜ ನಾರೇಯಣಾಚಾರ್ಯ ಈ ಮತಮು ಘನಮು’ ಎಂದು ರಾಮಾನುಜಾಚಾರ್ಯರನ್ನು ಕೊಂಡಾಡಿದ್ದಾರೆ. ಆಚಾರ್ಯರ ಸಿದ್ಧಾಂತಕ್ಕೆ ತಾತಯ್ಯನವರು ಕೂಡ ಬೇಕಾದಷ್ಟು ಕೊಡುಗೆ ನೀಡಿದ್ದಾರೆ. ಅಲ್ಲದೆ, ಅದನ್ನು ಮತ್ತಷ್ಟು ಬಲಾಡ್ಯಗೊಳಿಸಿದ್ದಾರೆ. ರಾಮಾನುಜಾಚಾರ್ಯ ಸಿದ್ಧಾಂತ ಮತಕ್ಕೆ ನಾರೇಯಣಾಚಾರ್ಯರು ಸಾಧನೆ ಮಾರ್ಗದತ್ತ ಕೊಂಡೊಯ್ದಿದ್ದಾರೆ. ಸಾಧನೆ ಮಾಡುವ ಕಾರ್ಯಕ್ರಮಗಳನ್ನು ಕೈವಾರ ನಾರೇಯಣ ಯತೀಂದ್ರ ಮಠದ ಮೂಲಕ ಹಮ್ಮಿಕೊಳ್ಳಲಾಗಿತ್ತು.

ಮಾನವ ಜನ್ಮ ಶ್ರೇಷ್ಠ ಹೇಗೆ?
ಮಾನವ ಜನ್ಮ ಬಹಳ ಶ್ರೇಷ್ಠ ಎಂಬುದು ತಿಳಿದಿದೆ. ಹುಟ್ಟು ಸಾವಿನ ಮರ್ಮ ಅರಿತವರು ಬಹಳ ಕಡಿಮೆ. ಹುಟ್ಟು ಸಾವಿನ ಚಕ್ರದಿಂದ ಹೊರಬರುವುದೇ ಜ್ಞಾನ. ಆ ಮರ್ಮ ಅರಿತವನೇ ಜ್ಞಾನಿ. ಇದಕ್ಕೆ ಎಲ್ಲ ಗುರುಗಳು ಸಾಧನೆ ಮಾಡಿ, ಇದು ಆಚಾರವಲ್ಲ ಎಂಬುದನ್ನು ತಿಳಿಸಿಕೊಟ್ಟವರೆ ಗುರುಗಳು. ಸಾಧನೆ ಎಂದರೆ purification of oneself. That means internal purification.

ಸಂಕೀರ್ತನಾ ಪಾದಯಾತ್ರೆ ಬಗ್ಗೆ ತಿಳಿಸಿ.
ಶ್ರೀ ರಾಮಾನುಚಾರ್ಯರ ಜನ್ಮ ಸಹಸ್ರಮಾನೋತ್ಸವ ಆಚರಿಸುವ ಕಾರ್ಯಕ್ರಮ 2016-17ರಿಂದಲೇ ಹಾಕಿಕೊಂಡಿದ್ದೇವು. ಅದರ ಭಾಗವಾಗಿ ಕೈವಾರ ಕ್ಷೇತ್ರದ ಯೋಗಿ ನಾರೇಯಣ ಮಠದಿಂದ ತಿರುಪತಿ ಶ್ರೀನಿವಾಸ ಮಂಗಾಪುರದವರೆಗೆ ಸಂಕೀರ್ತನಾ ಪಾದಯಾತ್ರೆ ಇಟ್ಟುಕೊಂಡಿದ್ದೇವು. ಪಾದಯಾತ್ರೆ ಏಪ್ರಿಲ್‌ 20 ರಿಂದ ಮೇ 1 ರವರೆಗೆ ಸಾಗಿತು. ಈ ಸಾಧನಾ ಹಂತದ ಹಿಂದೆ 15 ವರ್ಷಗಳ ಆಧ್ಯಾತ್ಮಿಕ ಶ್ರಮ ಅಡಗಿದೆ. ಆಂತರಿಕ ಮನಸ್ಸಿನ ಶುದ್ಧಿಯಾಗಬೇಕಾದರೆ ಏನು ಮಾಡಬೇಕಿಲ್ಲ. ಕೇವಲ, ರಾಮ ನಾಮ ಭಜನೆಯಿಂದ ಮಾತ್ರ ಸಾಧ್ಯ ಎಂದಿದ್ದಾರೆ ತಾತಯ್ಯನವರು. ಒಟ್ಟಾರೆ, ಅಜ್ಞಾನದಿಂದ ಪಾರಮಾರ್ಥಿಕದೆಡೆಗೆ ಸಾಗುವ ದಾರಿ ಯೋಗಿ ನಾರೇಯಣ ಗುರುಗಳು ತೋರಿಸಿದ್ದಾರೆ. ದಾರಿಯುದ್ಧಕ್ಕೂ ನಿಷ್ಕಾಮದಿಂದ ಕೇವಲ ಹಾಡುತ್ತಾ ಅಥವಾ ಹೇಳುತ್ತಾ ಹೋಗು. ನಿನ್ನಲ್ಲಿ ಆಂತರಿಕ ಶುದ್ಧತೆ ಬರುತ್ತದೆ. ನೀನು ಜೋರಾಗಿ ಹಾಡುತ್ತಾ ಹೋಗುತ್ತಿದ್ದರೆ ಒಬ್ಬ ನೋಡುತ್ತಾನೆ, ಮತ್ತೂಬ್ಬ ನಗುತ್ತಾನೆ, ಇನ್ನೊಬ್ಬ ಅರೇ ಯಾರೋ ರಾಮ ನಾಮ ಭಜನೆ ಮಾಡುತ್ತಿದ್ದಾರೆ ಎಂದು ಸಂತೋಷಿಸುತ್ತಾನೆ. ಹೀಗೆ ನಾನಾ ರೀತಿ ಪ್ರತಿಕ್ರಿಯೆಗಳು ಬರುತ್ತವೆ. ಆದರೂ ವಿಚಲನಾಗಬೇಡ. ನಿನ್ನಲ್ಲಿರುವ ಆಹಂಕಾರ ಎಂಬ ಆನೆಯನ್ನು ಬಗ್ಗಿಸು. ನೀನು ಹಾಡುವುದನ್ನು ಕೇಳಿ ಯಾರಾದರೂ ಸಂತೋಷಪಟ್ಟು ಅವರೂ ಕೂಡ ರಾಮ ರಾಮ ಎಂದಲ್ಲಿ ಅವರಿಗೂ ಮೋಕ್ಷದ ದಾರಿ ಸಿಕ್ಕಂತಾಗುತ್ತದೆ. ಇದೇ ನಮ್ಮ ಉದ್ದೇಶವಾಗಿತ್ತು. ಅದೇ ರೀತಿ ನಾವು 117 ಗ್ರಾಮಗಳ ಮೂಲಕ ಈ ಯಾತ್ರೆಯಲ್ಲಿ ಸಾಗಿ ಅಂತಿಮವಾಗಿ ತಿರುಪತಿ ತಲುಪಿದೆವು.

ರಾಮದಂಡು ರಚನೆ ಹೇಗೆ?
ಕಳೆದ 18 ವರ್ಷಗಳಿಂದ ಯೋಗಿ ನಾರೇಯಣ ಮಠದ ಸೇವೆಯಲ್ಲಿ ತೊಡಗಿಸಿಕೊಂಡು 4000 ಹಳ್ಳಿಗಳನ್ನು ಸುತ್ತಿ ಅಲ್ಲೆಲ್ಲ ಒಂದು ಭಜನಾ ಮಂದಿರ ಸ್ಥಾಪಿಸಲಾಯಿತು. ರಾಮ ದಂಡು ಭಜನೆ ತಂಡಗಳನ್ನು ರಚಿಸಲಾಯಿತು. ಪ್ರತಿದಿನ ರಾಮನಾಮ ಸ್ಮರಣೆ ಮಾಡುವಂತ ಬೀಜ ಬಿತ್ತಲಾಯಿತು. ಆ ಮೂಲಕ 5000 ಭಜನ ಮಂಡಳಿಗಳನ್ನು ರಚಿಸಲಾಯಿತು.

    ಕಷ್ಟದಲ್ಲಿರುವ ಜನರಿಗೆ ಮಾರ್ಗ ತೋರಿಸುವ ರಾಮದಂಡು ಭಜನಾ ತಂಡಗಳು ಬೇರೆ ಬೇರೆ ಊರುಗಳಿಗೆ ತೆರಳಿ ಭಜನೆ ಮಾಡುವ ಮೂಲಕ ಭಕ್ತಿ ಮಾರ್ಗದಲ್ಲಿ ಕೊಂಡೊಯ್ಯುವ ಕೆಲಸ ಮಾಡಲಾಗುತ್ತಿದೆ. ಇದ್ಯಾವುದು ಹೊಸದಲ್ಲ. ಎಲ್ಲವೂ ಹಿಂದಿನಿಂದಲೂ ಬಂದಂತಹದ್ದೇ. ಕೈವಾರ ಮಠದ ಭಜನಾ ತಂಡಗಳು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳ ಹಳ್ಳಿ-ಹಳ್ಳಿಗಳಿಗೆ ಹೋಗಿ ಸಂಕೀರ್ತನೆ ಮಾಡಿಕೊಂಡು ಬರುತ್ತಿದ್ದೇವು. ರಾಮದಂಡು 15 ವರ್ಷದಲ್ಲಿ 10 ರಾಮದಂಡು ತಂಡಗಳನ್ನು ರಚಿಸಿದ್ದೇವೆ. 

ಯೋಗಿ ನಾರೇಯಣರು ಆಚಾರ್ಯರೆೇಗಾದರು?
ಒಂದು ಸಾವಿರ ವರ್ಷದ ಹಿಂದೆ ರಾಮಾನುಜಾಚಾರ್ಯರು ಭಕ್ತಿಪಂಥವನ್ನು ತೋರಿಸಿದ್ದರು. ಆಗಿನ ಕಾಲದಲ್ಲಿ ಭಕ್ತಿಯೇ ಪ್ರಧಾನ ಪದ್ಧತಿ. ಅಂದು ಅವರು ಮೂರು ಮಂತ್ರಗಳನ್ನು ಕೊಟ್ಟರು. ಓ ನಮೋ ನಾರಾಯಣಾಯ, ಸೀಮತೆ ನಾರಾಯಣಾಯ ನಮಃ ಮತ್ತು ಶ್ರೀಮನ್ನಾರಾಯಣ ಶರಣಂ ಶರಣಂ ಪ್ರಪದ್ಯೆà. ಈ ಮೂರರಲ್ಲಿ ಯಾವುದನ್ನಾದರೂ ಭಜಿಸು ಎಂದರು. ಆದರೆ, ಯೋಗಿ ನಾರೇಯಣಾಚಾರ್ಯರು ಈ ಮೂರರಲ್ಲಿ ಯಾವುದಾದರೂ ಒಂದು ತೆಗೆದುಕೋ. ಗೊಂದಲಬೇಡ. ಆದರೆ, ಈ ಮೂರೂ ಮಂತ್ರಗಳಲ್ಲಿ ಬಿಗಿ ಇಲ್ಲ. ಆದ್ದರಿಂದ ‘ಓಂ ನಮೋ ನಾರೇಯಣಾಯ’ ಎಂದು ಭಜಿಸು. ಅದರಲ್ಲಿ ಬಿಗಿ ಇದೆ. ಆ ಬಿಗಿಯಲ್ಲಿ ಮಹಾಶಕ್ತಿ ಅಡಗಿದೆ. ನಾರೇಯಣ ಎಂದರೆ ಬೀಜಾಕ್ಷರವಾಗುತ್ತದೆ ಎಂದು ತಾತಯ್ಯನವರು ಹೇಳಿದ್ದಾರೆ.

‘ಪಂಚಾಕ್ಷರ ಮಂತ್ರ ಮದಿಲೋಕ …’
    ವಿಶಿಷ್ಟಾದ್ವೈತ ಸಿದ್ಧಾಂತದ ಮೂಲ ವೈಷ್ಣವ ಮತ. ವಿಷ್ಣು ಪೂಜೆಗೆ ಇಲ್ಲಿ ಪ್ರಾಮುಖ್ಯತೆ. ವಿಷ್ಣು ಮಂತ್ರ ಪಠಣೆಗೆ ಆದ್ಯಯತೆ. ಆದರೆ, ತಾತಯ್ಯನವರು ‘ಪಂಚಾಕ್ಷರ ಮಂತ್ರಂ ಮದಿಲೋಕವಿಡೊಕ ಪಠಿಂಚುಟನ ದೆನ್ನಟಿಗೊ..’ ಇಲ್ಲಿ ವಿಷ್ಣುವು ಅವನೇ, ಶಿವನು ಅವನೇ ಎಲ್ಲವೂ ನಾರೇಯಣನನೇ, ಅವನೇ ಪರಮಾತ್ಮ ಹೋಗು. ಈ ಸಿದ್ಧಾಂತವನ್ನು ಮತ್ತಷ್ಟು ಸುಲಭಗೊಳಿಸಿ ಯಾವ ಭೇದಭಾವ ಇಲ್ಲದೆ ಎಕ್ಕಡ ಚೂಸಿನ ಒಕ್ಕಡೆ ದೈವಂ. ವೈಷ್ಣವ ಮತ, ಶೈವ ಮತಕ್ಕೂ ಮೀರಿ ಒಂದು ಮತವಿದೆ ಅದೇ ಯೋಗಿ ಮತ. ಆದ್ದರಿಂದ ಓ ನಮೋ ನಾರೇಯಣಾಯ ಮಂತ್ರವನ್ನು ಪಠಿಸು ಸಾಕು. ಇದರಲ್ಲಿ ಎಲ್ಲವೂ (ಮತಗಳು) ಅಡಗಿದೆ ಎಂದಿದ್ದಾರೆ.

    ತಾತಯ್ಯನವರು ಮತ್ತಷ್ಟು ಸ್ಪಷ್ಟತೆ ನೀಡಿ, ಶ್ರೀ ವೈಷ್ಣವ ನಾನು ಮುದ್ರೆ ಹಾಕಿಕೊಳ್ಳಬೇಕು ಎಂದರೆ, ನಾಮದಲ್ಲಿ ಏನು ಅಡಗಿದೆ ಬಿಡಯ್ಯ. ಯಾರು ಮುದ್ರೆ ಹಾಕಿಕೊಳ್ಳಬೇಕೋ ಅವರು ಮೊದಲು ಮಾನಸಿಕ ಮುದ್ರೆ ಹಾಕಿಕೊಂಡು ಧ್ಯಾನ ಮಾಡಲಿ. ಮೊದಲು ನೀನು ಉದ್ಧಾರವಾಗು ಎಂದರು. ಆದರೆ, ರಾಮಾನುಜರು ಮಾನಸಿಕ ಪೂಜೆ ಮಾಡು, ಮಾನಸಿಕ ಅಷ್ಟೋತ್ತರ ಭಜಿಸು, ಬಹಿರಂಗವಾಗಿ ಸ್ನಾನ ಮಾಡಿಸು, ಅಷ್ಟೋತ್ತರ ಮಂತ್ರಗಳನ್ನು ಹೇಳು., ಒಂದು ರೀತಿಯಲ್ಲಿ ಅರ್ಧ ಆಂತರಿಕ ಮತ್ತು ಅರ್ಧ ಬಾಹ್ಯ ಪೂಜೆ ಮಾಡು ಎಂದರು. ಆದರೆ, ತಾತಯ್ಯನವರು ಎಲ್ಲವನ್ನೂ ಬಿಟ್ಟುಬಿಡು. ಸ್ನಾನ ಮಾಡದಿದ್ದರೂ ಬೇಡ. ಅಂತರಂಗ ಶುದ್ಧಿಯಿಂದ ಓಂ ನಮೋ ನಾರೇಯಣಾಯ ಎಂದು ಸದಾ ಮನಸ್ಸಿನಲ್ಲಿ ಭಜಿಸು ಸಾಕು ಪರಿಶುದ್ಧವಾಗುತೀ¤ಯ ಎಂದು ಎಲ್ಲವನ್ನೂ ಬದಲಾಯಿಸಿದರು. ಆ ಮೂಲ ಯೋಗಿ ನಾರೇಯಣರು ನಾರೇಯಣಾಚಾರ್ಯರಾಗಿ ಪ್ರಚಲಿತಕ್ಕೆ ಬಂದರು.

-ತಾತಯ್ಯನವರು ತೋರಿದ ಆಧ್ಯಾತ್ಮಿಕ ದಾರಿ ಸಹಸ್ರಮಾನೋನತ್ಸವಾಯಿತೆೆ?
ತಾತಯ್ಯನವರು ಸಮಾಜವನ್ನು ಬದಲಾಯಿಸಿ ನಾಲ್ಕು ಭಾಗಗಳನ್ನು ಮಾಡಿದರು. ಅವರ ದಾಸ ಪಂಥದಲ್ಲಿದ್ದಾಗ ನಾಲ್ಕು ಆಧ್ಯಾತ್ಮಿಕ ದಾರಿ ತೋರಿಸಿದರು. ಜಪ, ಭಜನೆ, ಭಾಗವತ ಮತ್ತು ವಿಚಾರಧಾರೆ. ಇವುಗಳನ್ನು ವರ್ಷಪೂರ್ತಿ ರಾಮಾನುಜಾಚಾರ್ಯರ ಜನ್ಮ ಸಹಸ್ರಮಾನೋತ್ಸವ ಕಾರ್ಯಕ್ರಮ ಆಚರಿಸಲು ಬಳಸಿಕೊಂಡೆವು.

    ಈ ನಾಲ್ಕು ಆಧ್ಯಾತ್ಮಿಕ ದಾರಿಗಳನ್ನು ಕಾರ್ಯಕ್ರಮಗಳಾಗಿ ಬದಲಾಯಿಸಿಕೊಂಡು ಪ್ರತಿ ತಿಂಗಳ ಮೊದಲ ಶನಿವಾರ ಜಪ (ಜಪಯಜ್ಞ), ಎರಡನೇ ಶನಿವಾರ ಊರಿಂದ ಊರಿಗೆ ಭಜನೆ ಮಾಡುತ್ತ ಸಾಗುವ ರಾಮದಂಡು, ಮೂರನೇ ಶನಿವಾರದಿಂದ ಒಂದು ವಾರ ಒಂದು ತಾಲ್ಲೂಕು ಕೇಂದ್ರದಲ್ಲಿ ಪೋತನ ಭಾಗವತ ಸಪ್ತಾಹ (ಭಾಗವತ ಗುರು ಪರಂಪರೆ- ಮೋಕ್ಷದ ದಾರಿಗೆ ಕಥೆಗಳ ಮೂಲಕ ಪರಮಾತ್ಮನ ಸೇರುವುದು) ಹಾಗೂ ನಾಲ್ಕನೇ ಶನಿವಾರ ರಾಮಾನುಜರ ಸಿದ್ಧಾಂತ (ತತ್ತÌ) ಕುರಿತು ಕೈವಾರದಲ್ಲಿ ವಿಚಾರಧಾರೆ, ಪ್ರವಚನಗಳನ್ನು ಏರ್ಪಡಿಸಿದ್ದೇವು.ಅದರಂತೆ 12 ವಾರ ಭಜನೆ, 12 ರಾಮದಂಡು ಕಾರ್ಯಕ್ರಮ, 12 ಪೋತನ ಭಾಗವತ ಸಪ್ತಾಹ ಹಾಗೂ 12 ಪ್ರವಚನಗಳು ನಡೆದಿವೆ. ವರ್ಷ ಪೂರ್ತಿ ನಡೆದ ಕಾರ್ಯಕ್ರಮದಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು. ಅಂತಿಮವಾಗಿ ಏನು ಮಾಡುವುದು ಎಂದು ಯೋಚಿಸಿ, ರಾಮಾನುಜಾಚಾರ್ಯರು ಕೊಡುಗೆ ನೀಡಿರುವ ತಿರುಪತಿ ಶ್ರೀನಿವಾಸನ ಸನ್ನಿಧಿಗೆ ಸಂಕೀರ್ತನೆ ಹಾಡುತ್ತಾ ಪಾದಯಾತ್ರೆ ತೆರಳುವುದು ಎಂದು ತೀರ್ಮಾನಿಸಿ ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವು.

11 ದಿನಗಳ ಸಂಕೀರ್ತನ ಪಾದಯಾತ್ರೆ
    ಕಲಿಯುಗ ಕೊನೆ ಆಚಾರ್ಯ ಗುರು ತಾತಯ್ಯನವರು ಅವರ ಕೈವಾರ ಕ್ಷೇತ್ರದಿಂದ ತಿರುಪತಿವರೆಗೆ ಸತತವಾಗಿ 11 ದಿನಗಳ ಕಾಲ ಕೀರ್ತನೆ, ಭಜನೆ, ಕಥೆಗಳನ್ನು ಕೇಳುತ್ತಾ ಪಾದಯಾತ್ರೆಯಲ್ಲಿ ಶ್ರೀ ರಾಮಾನುಜ ಚಾರ್ಯರು ಜನಿಸಿದ ಮೇ 1ರ ತಿರುನಕ್ಷತ್ರ ದಿನದಂದು ಶ್ರೀನಿವಾಸ ಮಂಗಾಪುರ ತಲುಪಿ ಆ ದೇವದೇವನ ಸನ್ನಿಧಿಯಲ್ಲಿ ಸಮರ್ಪಣೆಗೊಳಿಸಿದೆವು.

ಪ್ರತಿನಿತ್ಯ 17 ಕಿ.ಮೀ. ನಡಿಗೆ
    ಪ್ರತಿ ತಾಲ್ಲೂಕಿಗೆ ನೂರು ಜನರಂತೆ 12 ತಾಲ್ಲೂಕುಗಳಿಂದ 1000 ರಿಂದ 1100 ಜನರು ಒಗ್ಗೂಡಿ ಕಾರ್ಯಕ್ರಮ ರೂಪಿಸಿದೆವು. ಪ್ರತಿ ನಿತ್ಯ ಬೆಳಗ್ಗೆ 3 ಗಂಟೆ ಏಳುವುದು, ನಿತ್ಯಕರ್ಮ, ಸ್ನಾನ ಮುಗಿಸಿ 5-5.30 ವರೆಗೆ ಹೊರಡುವುದು. ಪ್ರತಿ ಹೆಜ್ಜೆಗೂ ಭಜನೆ ಮಾಡುತ್ತಾ ಸಾಗುತ್ತಿದ್ದೆವು. 9 ಗಂಟೆಗೆ ಊಟ ಮಾಡಿ ಮಲಗುವುದು. ನಂತರ 4.00 ಗಂಟೆ ಎದ್ದು ಮತ್ತೆ ಪ್ರಯಾಣ, ರಾತ್ರಿ 10 ಗಂಟೆಗೆ ಊಟ ಮಾಡಿ ಮಲಗುವುದು. ಈ ರೀತಿ ಪ್ರತಿ ದಿನ 17 ಕಿ.ಮೀ. ದಾರಿ ಸಾಗುತ್ತಿದ್ದೇವು. 

ಭಕ್ತಿಯನ್ನು ಒಂದು ಪದದಲ್ಲಿ ಹೇಳುವುದು, ವ್ಯಕ್ತಪಡಿಸುವುದಾಗಲಿ ಸಾಧ್ಯವಿಲ್ಲ. ವಿವಿಧ ರೀತಿಗಳಲ್ಲಿ ಭಕ್ತಿಯನ್ನು ವ್ಯಕ್ತಪಡಿಸಬಹುದು. ಯಾವುದೇ ರೀತಿಯಾದರೂ ನಮಗೆ ನಾವೇ ಹಾಕಿಕೊಂಡಿರುವ ಸೀಮೆ ದಾಟಿ, ಭಾವನೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದಾಗ ಮಾತ್ರ ಮುಕ್ತಿ ಸಾಧ್ಯ. ಷರತ್ತು ಬದ್ಧ ಪೀÅತಿ, ಅರ್ಧಂಬರ್ಧ ನಂಬಿಕೆ, ಅರೆಮನಸ್ಸಿನ ದಾನಧರ್ಮಗಳು ಭಕ್ತಿಯಾಗಲಾರವು. ಕಾಯೇನ, ವಾಚಾ, ಮನಸಾ ಗುರುಗಳ ಸೇವೆಯನ್ನು ಮಾಡಿದರೆ ಶ್ರೀಹರಿಯಲ್ಲಿ ಮನಸ್ಸ ಕೇಂದೀÅಕರಿಸುವ ಶಕ್ತಿ ಲಭಿಸುತ್ತದೆ.
-ಡಾ. ಎಂ.ಆರ್‌. ಜಯರಾಂ, ಧರ್ಮದರ್ಶಿಗಳು, ಶ್ರೀಕ್ಷೇತ್ರ ಕೈವಾರ

-ಗೋಪಾಲ್‌ ತಿಮ್ಮಯ್ಯ

Advertisement

Udayavani is now on Telegram. Click here to join our channel and stay updated with the latest news.

Next