Advertisement

ಶಂಕರನಾರಾಯಣ : ವಾರಾಹಿ ಕಾಲುವೆಗೆ ಬಿದ್ದು ವಿದ್ಯಾರ್ಥಿ ಸಾವು

06:00 AM Mar 21, 2018 | Team Udayavani |

ಸಿದ್ದಾಪುರ: ಶಂಕರನಾರಾಯಣ ಸಮೀಪದ ಅಬ್ಯಾಡಿ ಬಳಿಯ ವಾರಾಹಿ ಕಾಲುವೆಗೆ ಆಕಸ್ಮಿಕವಾಗಿ ವಿದ್ಯಾರ್ಥಿಯೋರ್ವ ಬಿದ್ದು ಮೃತಪಟ್ಟ ಧಾರುಣ ಘಟನೆ ಮಾ.ಸೋಮವಾರ ರಾತ್ರಿ ಸಂಭವಿಸಿದೆ. 

Advertisement

ಶಂಕರನಾರಯಣ ಗ್ರಾಮದ ನಿವಾಸಿ ಗಣೇಶ್‌ ನಾಯಕ್‌ ಹಾಗೂ ಮಮತಾ ದಂಪತಿಯ ಪುತ್ರ ಅಜಿತ್‌ ನಾಯಕ್‌ (18) ಮೃತಪಟ್ಟ ವಿದ್ಯಾರ್ಥಿ. ಅಜಿತ್‌ ಶಂಕರನಾರಾಯಣ ಪ್ರಥಮ ದರ್ಜೆ ಕಾಲೇಜಿನಲ್ಲಿ ಪ್ರಥಮ ಬಿಕಾಂ ವ್ಯಾಸಂಗ ಮಾಡುತ್ತಿದ್ದು, ಅಬ್ಯಾಡಿ ದೇವಸ್ಥಾನದ ಜಾತ್ರೆ ಮುಗಿಸಿ ಒಬ್ಬನೇ ಹಿಂದಿರುಗಿ ಬರುವಾಗ ರಾತ್ರಿ ಸುಮಾರು 9 ಗಂಟೆ ವೇಳೆ ಆಕಸ್ಮಿಕವಾಗಿ ಕಾಲು ಜಾರಿ ವಾರಾಹಿ ಕಾಲುವೆಗೆ ಬಿದ್ದು ಮೃತಪಟ್ಟಿದ್ದಾರೆ.

 ಕಾಲುವೆಗೆ ಬೀಳುವ ಮೊದಲು ತಾನು ಮನೆಗೆ ಹೊರಟಿರುವುದಾಗಿ ತಮ್ಮ ಸ್ನೇಹಿತರಿಗೆ ಫೋನ್‌ ಮಾಡಿ ತಿಳಿಸಿದ್ದರು. ಆತ ಕಾಲುವೆಗೆ ಬೀಳುತ್ತಿರುವುದನ್ನು ದೂರದಲ್ಲಿದ್ದ ಸ್ನೇಹಿತರು ನೋಡಿದ್ದು, ಕೂಡಲೇ ಸ್ಥಳೀಯರಿಗೆ ಮಾಹಿತಿ ನೀಡಿದರು. ಅಗ್ನಿಶಾಮಕ ದಳದ ಸಿಬಂದಿ, ಶಂಕರನಾರಾಯಣ ಪೊಲೀಸರು ಸ್ಥಳಕ್ಕೆ ಆಗಮಿಸಿ, ಸುಮಾರು 2 ಗಂಟೆ ಕಾಲ ಕಾರ್ಯಾಚರಣೆ ನಡೆಸಿ ಮೃತದೇಹವನ್ನು ಮೇಲಕ್ಕೆ ಎತ್ತಿದರು. 

ಅಪಾಯಕಾರಿ ಕಾಲುವೆ
 ಅಬ್ಯಾಡಿ ದೇವಸ್ಥಾನದ ಬಳಿ ಎರಡು ಗುಡ್ಡಗಳ ನಡುವೆ ಕಾಂಕ್ರಿಟ್‌ ಪಿಲ್ಲರ್‌ ಮೂಲಕ ವಾರಾಹಿ ಕಾಲುವೆ ನಿರ್ಮಿಸಿ, ಬದಿಯಲ್ಲಿ ಕಾಲು ದಾರಿ ಮಾಡಲಾಗಿದೆ. ಎರಡು ಬದಿಯಲ್ಲಿ ಕಾಲುವೆಗೆ ಕೈಪಟ್ಟಿ ನಿರ್ಮಿಸಿದ್ದರೂ, ಕಾಲುವೆಯ ಕೊನೆಯಲ್ಲಿ ಮಾತ್ರ ಕೈ ಪಟ್ಟಿ ಇಲ್ಲ. ಅಜಿತ್‌ ಕೈ ಪಟ್ಟಿ ಇಲ್ಲದ ಭಾಗದಲ್ಲಿ ಕಾಲು ಜಾರಿ ಕಾಲುವೆಗೆ ಬಿದ್ದು ಮೃತ ಪಟ್ಟಿದ್ದು,  ಕಾಲು ಜಾರಿ ಬಿದ್ದ ಪ್ರದೇಶವು ಆಳವಿದ್ದು, ಇದು ಅಪಾಯಕಾರಿ ಕಾಲುವೆಯಾಗಿದೆ.  ಈತ ತಂದೆ, ತಾಯಿ ಹಾಗೂ ಸಹೋದರಿಯನ್ನು ಅಗಲಿದ್ದಾರೆ, ಶಂಕರನಾರಾಯಣ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮನೆ-ಮನೆಗೆ ಪತ್ರಿಕೆ ಹಾಕಿ ವ್ಯಾಸಂಗ
ಅಜಿತ್‌ ಚುರುಕಿನ ಸ್ವಭಾವದವನಾಗಿದ್ದು, ಕಾಲೇಜಿನಲ್ಲಿ ಎಲ್ಲ ಚಟುವಟಿಕೆಯಲ್ಲಿ ಮುಂಚೂಣಿಯಲ್ಲಿರುತ್ತಿದ್ದ. ಶ್ರಮ ಜೀವಿಯಾಗಿದ್ದು, ಬೆಳಗ್ಗೆ ಮನೆ – ಮನೆಗೆ ದಿನಪತ್ರಿಕೆ  ಹಾಕಿ, ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದರು. ಸಾವಿನ ಸುದ್ಧಿ ತಿಳಿಯುತ್ತಿದ್ದಂತೆ. ಕಾಲೇಜಿನ ಎಲ್ಲ ವಿದ್ಯಾರ್ಥಿಗಳು ಹಾಗೂ ಪ್ರಾಧ್ಯಾಪಕ ವೃಂದ ಅಜಿತ್‌ ಮನಗೆ ಆಗಮಿಸಿ, ಅಂತೀಮ ದರ್ಶನ ಪಡೆದು, ಮನೆಯವರಿಗೆ ಸಾಂತ್ವನ ಹೇಳಿದರು. ಅಜಿತ್‌ ಸಾವಿನ ಗೌರವಾರ್ಥ ಮಂಗಳವಾರ ಕಾಲೇಜಿಗೆ ರಜೆ ಸಾರಿ, ಸಂತಾಪ ಸೂಚಿಸಲಾಯಿತು. 

Advertisement
Advertisement

Udayavani is now on Telegram. Click here to join our channel and stay updated with the latest news.

Next