Advertisement

ಸಂಜು ವೆಡ್ಸ್‌ ಚಾರುಲತಾ

06:50 AM Dec 23, 2018 | Team Udayavani |

ತಿರುವನಂತಪುರ: ವಿಕೆಟ್‌ ಕೀಪರ್‌-ಬ್ಯಾಟ್ಸ್‌ಮನ್‌ ಸಂಜು ಸ್ಯಾಮ್ಸನ್‌ ಶನಿವಾರ ಗೆಳತಿ ಚಾರುಲತಾ ಜತೆ ವೈವಾಹಿಕ ಜೀವನಕ್ಕೆ ಕಾಲಿರಿಸಿದರು. ತಿರುವನಂತಪುರ ಸಮೀಪದ ಕೋವಳಂ ರೆಸಾರ್ಟ್‌ ಒಂದರಲ್ಲಿ ಮದುವೆ ಸಮಾರಂಭ ಏರ್ಪಟ್ಟಿತು.

Advertisement

ಶನಿವಾರ ಬೆಳಗ್ಗೆ ನಡೆದ ಸರಳ ಸಮಾರಂಭದಲ್ಲಿ ಎರಡೂ ಕುಟುಂಬಗಳ ಕೇವಲ 30 ಮಂದಿಯಷ್ಟೇ ಉಪಸ್ಥಿತರಿದ್ದರು. ಸಂಜೆ ಆರತಕ್ಷತೆ ಕಾರ್ಯಕ್ರಮ ಜರಗಿತು.

ಇವರದು ಕಾಲೇಜು ಜೀವನದ ಮೊದಲ ನೋಟದ ಪ್ರೇಮಾಂಕುರ. 2013ರ ಆಗಸ್ಟ್‌ 22ರಂದು ಪರಸ್ಪರ ನೋಡಿದಾಗಲೇ ಕಣ್ಣುಗಳು ಮಾತಾಡಿಕೊಂಡಿದ್ದವು. ಕಳೆದ ಸೆಪ್ಟಂಬರ್‌ನಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ಕೆಲವು ಚಿತ್ರಗಳನ್ನು ಪೋಸ್ಟ್‌ ಮಾಡುವ ಮೂಲಕ ತಾವು ಮದುವೆ ಆಗುತ್ತಿರುವುದಾಗಿ ಘೋಷಿಸಿದ್ದರು. ಆರಂಭದಿಂದಲೂ ತಮ್ಮ ಸಂಬಂಧವನ್ನು ಬೆಂಬಲಿಸುತ್ತಲೇ ಬಂದ ಕುಟುಂಬದವರಿಗೆ, ಹಿತೈಷಿಗಳಿಗೆ ಸಂಜು ಸ್ಯಾಮ್ಸನ್‌ ಕೃತಜ್ಞತೆ ಸಲ್ಲಿಸಿದ್ದಾರೆ.

ಕೇರಳದ ಪ್ರತಿಭಾನ್ವಿತ ವಿಕೆಟ್‌ ಕೀಪರ್‌, 24ರ ಹರೆಯದ ಸಂಜು ಸ್ಯಾಮ್ಸನ್‌ 2015ರ ಜುಲೈಯಲ್ಲಿ ಜಿಂಬಾಬ್ವೆ ವಿರುದ್ಧದ ಹರಾರೆ ಟಿ20 ಪಂದ್ಯದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. ಇದು ಅವರ ಏಕೈಕ ಅಂತಾರಾಷ್ಟ್ರೀಯ ಪಂದ್ಯವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next