Advertisement

Sanju Samson ಒಳ್ಳೆಯ ವ್ಯಕ್ತಿ, ಆದರೆ…: ವಿಶ್ವಕಪ್ ತಂಡದ ಬಗ್ಗೆ ಅಶ್ವಿನ್ ಮಾತು

06:01 PM Aug 08, 2023 | Team Udayavani |

ಮುಂಬೈ: ಐಸಿಸಿ ಏಕದಿನ ವಿಶ್ವಕಪ್ ಗೆ ಇನ್ನು ಕೇವಲ ಎರಡು ತಿಂಗಳು ಬಾಕಿ ಉಳಿದಿದೆ. ಆದರೆ ಟೀಂ ಇಂಡಿಯಾದ ಕಾಂಬಿನೇಶನ್ ಇನ್ನೂ ಅಂತಿಮವಾಗಿಲ್ಲ. ಟೀಂ ಇಂಡಿಯಾದಲ್ಲಿ ಮಧ್ಯಮ ಕ್ರಮಾಂಕದಲ್ಲಿ ಯಾರು ಆಡುತ್ತಾರೆ? ವಿಕೆಟ್ ಕೀಪರ್ ಗಳು ಯಾರು ಎನ್ನುವ ಸ್ಪಷ್ಟತೆ ಸಿಕ್ಕಿಲ್ಲ. ಇದೇ ವೇಳೆ ಟೀಂ ಇಂಡಿಯಾದ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಅವರು ಸಂಜು ಸ್ಯಾಮ್ಸನ್ ಬಗ್ಗೆ ಮಾತನಾಡಿದ್ದಾರೆ.

Advertisement

ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ಆಡಿದ್ದ ಸಂಜು ಅರ್ಧಶತಕ ಬಾರಿಸಿದ್ದರು. ಆದರೆ ಬಳಿಕದ ಟಿ20 ಸರಣಿಯ ಮೊದಲೆರಡು ಪಂದ್ಯಗಳಲ್ಲೂ ಅವರು ನಿರಾಶಾದಾಯಕ ಪ್ರದರ್ಶನ ನೀಡಿದ್ದರು.

ತನ್ನ ಯೂಟ್ಯೂಬ್ ಚಾನೆಲ್ ನಲ್ಲಿ ಮಾತನಾಡಿದ ಅಶ್ವಿನ್, ವಿಶ್ವಕಪ್ ತಂಡದಲ್ಲಿ ಸಂಜು ಸ್ಯಾಮ್ಸನ್ ಸ್ಥಾನ ಪಡೆಯುವುದು ಕಷ್ಟ ಎಂದಿದ್ದಾರೆ.

“ಅವರು ಏಕದಿನ ಸರಣಿಯಲ್ಲಿ ಅರ್ಧಶತಕ ಗಳಿಸಿದರು. ಟಿ20 ಪಂದ್ಯದಲ್ಲಿ, ಅವರು 12 ಎಸೆತದಲ್ಲಿ 12 ರನ್ ಗಳಿಸಿದರು. ಅವರು ಮಧ್ಯಮ ಕ್ರಮಾಂಕದಲ್ಲಿ ಅವಕಾಶವನ್ನು ಪಡೆದರು. ಐಪಿಎಲ್‌ ಗೆ ಬಂದಾಗ, ಅವರು ಹೆಚ್ಚಾಗಿ ಮೂರು ಅಥವಾ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡುತ್ತಾರೆ. ಏಕದಿನಗಳಲ್ಲಿ ಅವರು ಉತ್ತಮ ದಾಖಲೆಯನ್ನು ಪಡೆದಿದ್ದಾರೆ ಎಂಬುದನ್ನು ನೆನಪಿನಲ್ಲಿಡಿ ” ಎಂದು ಅಶ್ವಿನ್ ವೀಡಿಯೊದಲ್ಲಿ ಹೇಳಿದ್ದಾರೆ.

ಇದನ್ನೂ ಓದಿ:Contractors Issue; ಬ್ಲ್ಯಾಕ್ ಮೇಲ್ ಗಳಿಗೆಲ್ಲ ನಾನು ಹೆದರಲ್ಲ…: ಡಿಸಿಎಂ ಡಿ.ಕೆ.ಶಿವಕುಮಾರ್

Advertisement

“ಟೀಮ್ ಇಂಡಿಯಾದ ವಿಷಯಕ್ಕೆ ಬಂದರೆ, 3 ಮತ್ತು 4 ನೇ ಸ್ಥಾನ ಖಾಲಿಯಿಲ್ಲ. ಸಂಜು ಅವರ ಸಾಮರ್ಥ್ಯ ಮತ್ತು ಪ್ರತಿಭೆಯನ್ನು ಗಮನಿಸಿದರೆ, ಅವರು ಯಾವುದೇ ಹಂತದಲ್ಲಿ ತಮ್ಮ ಆಟದ ಹಾದಿಯನ್ನು ಬದಲಾಯಿಸಬಹುದು ಎಂದು ನಮಗೆ ತಿಳಿದಿದೆ. ಅವರು ತುಂಬಾ ಒಳ್ಳೆಯ ವ್ಯಕ್ತಿ ಮತ್ತು ನಾವೆಲ್ಲರೂ ಒಳ್ಳೆಯದನ್ನು ಬಯಸುತ್ತೇವೆ. ಆದರೆ ಟೀಮ್ ಇಂಡಿಯಾದ ವಿಷಯಕ್ಕೆ ಬಂದರೆ ಸಂಜು ಅವರಿಂದ ನಾವು ನಿರೀಕ್ಷಿಸುವ ಪಾತ್ರವೇ ಬೇರೆ. ಟಾಪ್ 4ರಲ್ಲಿ ಅವರಿಗೆ ಜಾಗವಿಲ್ಲ. ವಿಶ್ವಕಪ್ ನಂತರ ಅಥವಾ ಒಂದೋ – ಎರಡು ವರ್ಷಗಳ ನಂತರ ಅವರಿಗೆ ಸ್ಥಾನ ಸಿಗುತ್ತದೆಯೇ ಎಂದು ನಾವು ಕಾದು ನೋಡಬೇಕಾಗಿದೆ ಎಂದರು.

ಯಾಕೆಂದರೆ ಮೂರನೇ ಸ್ಥಾನದಲ್ಲಿ ವಿರಾಟ್ ಕೊಹ್ಲಿ ಭದ್ರವಾಗಿದ್ದಾರೆ. ಆರಂಭಿಕರಾಗಿ ರೋಹಿತ್ ಮತ್ತು ಗಿಲ್ ಇದ್ದಾರೆ. ಶ್ರೇಯಸ್ ಮತ್ತು ರಾಹುಲ್ ಅವರು ವಿಶ್ವಕಪ್ ಆಡುವುದು ಪಕ್ಕಾ. ನಮಗೆ ವಿಕೆಟ್ ಕೀಪರ್ ಬ್ಯಾಕಪ್ ಬೇಕಾಗಿದೆ. ಒಂದು ವೇಳೆ ಅಯ್ಯರ್ ಅಥವಾ ರಾಹುಲ್ ಆಡದಿದ್ದರೆ ಸಂಜುಗೆ ಅವಕಾಶ ಸಿಗಬಹುದೇನು. ವಿಶ್ವಕಪ್‌ ಗೆ ಸಂಬಂಧಿಸಿದಂತೆ ತಂಡದಲ್ಲಿ ಆಕಸ್ಮಿಕ ಬದಲಾವಣೆಯಾದರೆ ಸಂಜು ಸ್ಯಾಮ್ಸನ್ ಮುಂದಿರುತ್ತಾರೆ ಎಂದು ಅಶ್ವಿನ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next