Advertisement

ಐಪಿಎಲ್ ನಲ್ಲಿ ವಿರಾಟ್ ಕೊಹ್ಲಿ ದಾಖಲೆ ಮೀರಿದ ಸಂಜು ಸ್ಯಾಮ್ಸನ್

09:31 PM Apr 02, 2023 | Team Udayavani |

ಹೈದರಾಬಾದ್: ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ತಮ್ಮ ಐಪಿಎಲ್ 2023 ರ ಅಭಿಯಾನವನ್ನು ಅದ್ಭುತ ಅರ್ಧಶತಕದೊಂದಿಗೆ ಪ್ರಾರಂಭಿಸಿದರು. ರಾಜಸ್ಥಾನ ರಾಯಲ್ಸ್ ಭಾನುವಾರ ಸನ್‌ರೈಸರ್ಸ್ ಹೈದರಾಬಾದ್ ಅನ್ನು ಸುಲಭವಾಗಿ ಸೋಲಿಸಿತು.

Advertisement

ಸ್ಯಾಮ್ಸನ್ ಅವರು 32 ಎಸೆತಗಳಲ್ಲಿ 55 ರೊಂದಿಗೆ ಅಗ್ರ ಸ್ಕೋರರ್ ಆದರು. ತಂಡ ಘನ ಮೊತ್ತಕ್ಕೆ ಕೊಂಡೊಯ್ಯುವಲ್ಲಿ ಅವರು ದೊಡ್ಡ ಪಾತ್ರವನ್ನು ವಹಿಸಿದರು. ಇದೇ ವೇಳೆ ಸ್ಯಾಮ್ಸನ್ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ 700 ರನ್ ಗಳಿಸಿದ ಮೊದಲ ಬ್ಯಾಟ್ಸ್‌ಮನ್ ಎಂಬ ಇತಿಹಾಸವನ್ನು ನಿರ್ಮಿಸಿದರು.

ಇದನ್ನೂ ಓದಿ : ಸನ್‌ರೈಸರ್ಸ್ ಹೈದರಾಬಾದ್ ಎದುರು ಅಮೋಘ ಜಯ ಸಾಧಿಸಿದ ರಾಜಸ್ಥಾನ ರಾಯಲ್ಸ್

ಆರ್‌ಸಿಬಿ ದಿಗ್ಗಜ ವಿರಾಟ್ ಕೊಹ್ಲ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದು 2016 ರ ಚಾಂಪಿಯನ್‌ಗಳ ವಿರುದ್ಧ 600 ಕ್ಕೂ ಹೆಚ್ಚು ರನ್ ಬಾರಿಸಿದ ಏಕೈಕ ಆಟಗಾರ ಸ್ಯಾಮ್ಸನ್ ಆಗಿದ್ದಾರೆ. ಆಬಳಿಕ ವಿರಾಟ್ ಕೊಹ್ಲಿ – 569, ಶೇನ್ ವ್ಯಾಟ್ಸನ್ – 566, ಎಬಿ ಡಿವಿಲಿಯರ್ಸ್ – 540 ಮತ್ತು ಅಂಬಟಿ ರಾಯುಡು – 540 ರನ್ ಗಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next