Advertisement
ಪಟ್ಟಣದ ಎಡಿಬಿ ಕಾಲೇಜಿನಲ್ಲಿ ಭಾನುವಾರ ಎಂ.ಪಿ. ಪ್ರಕಾಶ್ ಸಮಾಜಮುಖೀ ಟ್ರಸ್ಟ್, ಬೆಂಗಳೂರು ತಥಾಗತ್ ಮೆಡಿಕಲ್ ಟ್ರಸ್ಟ್, ತಾಲೂಕು ಭಾರತೀಯ ವೈದ್ಯಕೀಯ ಸಂಘದ ಆಶ್ರಯದಲ್ಲಿ ನಡೆದ ಉಚಿತ ಬೃಹತ್ ಆರೋಗ್ಯ ಮೇಳದಲ್ಲಿ ಅವರು ಮಾತನಾಡಿದರು.
Related Articles
Advertisement
ಅಧ್ಯಕ್ಷತೆ ವಹಿಸಿದ್ದ ಎಂ.ಪಿ.ಪ್ರಕಾಶ್ ಸಮಾಜಮುಖೀ ಟ್ರಸ್ಟ್ ಅಧ್ಯಕ್ಷೆ ಎಂ.ಪಿ. ವೀಣಾ ಮಹಾಂತೇಶ್, ಆರೋಗ್ಯ, ಕೃಷಿ ಸೇರಿದಂತೆ ಸಮಾಜಕ್ಕೆ ಬೇಕಾಗುವ ಎಲ್ಲ ಕಾರ್ಯಕ್ರಮಗಳನ್ನು ಅಯೋಜಿಸುತ್ತಿದ್ದೇವೆ. ಫೆ. 8ರಂದು ಹಡಗಲಿಯಲ್ಲಿ ಎಂ.ಪಿ.ಪ್ರಕಾಶ್ ಅವರ ಪುಣ್ಯಸ್ಮರಣೆ ಅಂಗವಾಗಿ ನುಡಿ ನಮನ ಮತ್ತು ಗೀತಾ ನಮನ ಹಮ್ಮಿಕೊಳ್ಳಲಾಗಿದೆ. ಸಿದ್ಧಗಂಗಾಮಠದ ಪೀಠಾಧಿಪತಿ ಲಿಂಗೈಕ್ಯ ಶಿವಕುಮಾರ ಸ್ವಾಮೀಜಿ, ಜಾರ್ಜ್ ಫರ್ನಾಂಡಿಸ್, ಎಂ.ಪಿ. ಪ್ರಕಾಶ್ ಅವರನ್ನು ಸ್ಮರಿಸಲಾಗುವುದು. ಅದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಮನವಿ ಮಾಡಿದರು.
ಬೆಂಗಳೂರು ತಥಾಗತ್ ಮೆಡಿಕಲ್ ಟ್ರಸ್ಟ್ ಅಧ್ಯಕ್ಷ ಡಾ| ಮಹಾಂತೇಶ್ ಚರಂತಿಮs್ ಮಾತನಾಡಿ, ರಾಜ್ಯದ ವಿವಿಧೆಡೆ ಆರೋಗ್ಯ ಮೇಳ ನಡೆಸಲಾಗಿದೆ. ಅಧುನಿಕ ತಂತ್ರಜ್ಞಾನವುಳ್ಳ ಉಪಕರಣ ತರಿಸಲಾಗಿದೆ. ಜನರು ಸದುಪಯೋಗ ಪಡೆದುಕೊಳ್ಳಬೇಕು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಬಿಪಿಎಲ್, ಅಯುಷ್ಮಾನ್ ಕಾರ್ಡ ಹೊಂದಿದ್ದರೆ ಅವರಿಗೆ ಚಿಕಿತ್ಸೆ ಕೊಡಿಸಲಾಗುವುದು. ಎಂದು ತಿಳಿಸಿದರು.
ಅಗಲಿದ ತುಮಕೂರು ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ಕೇಂದ್ರ ಮಾಜಿ ಸಚಿವ ಜಾರ್ಜ್ ಫರ್ನಾಂಡಿಸ್, ಮಾಜಿ ಶಾಸಕ ಎಂ.ಪಿ. ರವೀಂದ್ರ ಅವರ ನಿಧನಕ್ಕೆ ಮೌನಾಚರಣೆ ಮೂಲಕ ಗೌರವ ಸಲ್ಲಿಸಲಾಯಿತು.
ಎಡಿಬಿ ಕಾಲೇಜ್ ಅಧ್ಯಕ್ಷ ಮೋಹನ ರೆಡ್ಡಿ, ಮುಖಂಡ ಹಲಗೇರಿ ಮಂಜಪ್ಪ ಮಾತನಾಡಿದರು. ಎಂ.ಪಿ. ಸುಮಾ ವಿಜಯ್, ವೈದ್ಯರಾದ ಡಾ| ಅನಂತಶೆಟ್ಟಿ ಪೆಂಡಕೊರ, ಡಾ| ಕೆ.ಎಂ.ಎನ್. ಖಾನ್, ಡಾ| ಮಂಜುನಾಥ, ಡಾ| ಶ್ರೀನಿವಾಸ್ ವೇಲು, ತಾಲೂಕು ವೈದ್ಯಾಧಿಕಾರಿ ರೇಣುಕಾನಂದ ಮೆಣಸಿನಕಾಯಿ, ಪುರಸಭೆ ಸದಸ್ಯೆ ಕವಿತಾ ವಾಗೀಶ್, ನೀಲ್ ಅರಾಂಸ್ಟ್ರಾಂಗ್ ಫಾದರ್, ಡಾ| ಭಾಷಾ ಮುಜಾವರ್, ಸಿದ್ದಲಿಂಗನಗೌಡ, ಎಸ್.ಎಸ್.ಎಂ. ಚೇತನ್, ಎಎಸ್‌ಐ ಸದ್ಯೋಜಾತಪ್ಪ, ಕೋಟ್ರಸ್ವಾಮಿ, ಪಿ. ಶಿವಕುಮಾರನಾಯ್ಕ, ಶ್ರೀಕಾಂತ್ ಮತ್ತಿತರರು ಉಪಸ್ಥಿತರಿದ್ದರು.