ಚಿಕ್ಕಮಗಳೂರು: ಸಾಮಾನ್ಯ ಕೆಮ್ಮು, ನೆಗಡಿ, ಜ್ವರದಿಂದ ಬಳಲುತ್ತಿರುವರು ಆಸ್ಪತ್ರೆಗೆ ತೆರಳಲು ಸಾಧ್ಯವಾಗದವರು ಸಂಜೀವಿನಿ ಮೊಬೈಲ್ ಆ್ಯಪ್ ಬಳಸಿ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯುವ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ಉಮೇಶ್ ತಿಳಿಸಿದ್ದಾರೆ.
ಆ್ಯಪ್ ಮೂಲಕ ವೈದ್ಯರನ್ನು ಮೊಬೈಲ್ ನಲ್ಲಿ ಸಂಪರ್ಕಿಸಿ ವೆಬ್ ವೀಡಿಯೋ ಮೂಲಕ ಸಂಪರ್ಕಕ್ಕೆ ಬರುವ ವೈದ್ಯರು ನಿಮ್ಮ ಕಾಯಿಲೆ ಕುರಿತು ವಿವರವಾಗಿ ವಿಚಾರಣೆ ನೆಡೆಸಿ ಕಾಯಿಲೆಗೆ ಚಿಕಿತ್ಸೆ ಬರೆದುಕೊಳ್ಳಲಿದ್ದಾರೆ, ಆ ಮೂಲಕ ಆಸ್ಪತ್ರೆಯ ಕದ ತಟ್ಟದೆ ಇರುವಲ್ಲಿಂದಲೇ ರೋಗಕ್ಕೆ ಚಿಕಿತ್ಸೆ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.
ಸಂಜೀವಿನಿ ಲಿಂಕನ್ನು ಕಳೆದ ಭಾನುವಾರ ದೇಶಾದ್ಯಂತ ಕೇಂದ್ರ ಆರೋಗ್ಯ ಇಲಾಖೆ ಲೋಕಾರ್ಪಣೆಮಾಡಿದ್ದು, ಕೋವಿಡ್ ಹೊರಗಟ್ಟುವ ಸಲುವಾಗಿ ಕೇಂದ್ರ ಸರಕಾರ ಆರೋಗ್ಯದ ತೊಂದರೆಗಳಿಗೆ ಮನೆಯಲ್ಲಿಯೇ ಕುಳಿತು ಚಿಕಿತ್ಸೆ ಪಡೆಯಲು ಕೇಂದ್ರ ಆರೋಗ್ಯ ಮಂತ್ರಾಲಯ, ರಾಷ್ಟ್ರೀಯ ಟೆಲಿ ಸಮಾಲೋಚನ ಸೇವೆ (ನ್ಯಾಷನಲ್ ಟೆಲಿಕನಲ್ ಟೇಷನ್ ಸರ್ವಿಸ್) ಎಂಬಹೆಸರಿನಲ್ಲಿ ಲಿಂಕ್‌ನ ಆಪ್ ಸಿದ್ದಪಡಿಸಿದೆ. ಟೆಲಿ ಸಮಾಲೋಚನ ಸೇವೆ ಪಡೆಯಲು ಮೊಬೈಲ್ ಅಥವಾ ಕಂಪ್ಯೂಟರ್‌ನ ಗೂಗಲ್‌ನಲ್ಲಿ ಇ- ಸಂಜೀವಿನಿ ಒಪಿಡಿ ಎಂಬುವುದಾಗಿ ಟೈಪಿಸಬೇಕು. ನಿಮಗೊಂದು ಕೇಂದ್ರ ಆರೋಗ್ಯ ಸಚಿವಾಲಯದ ಮುಖಪುಟ ತೆರೆದುಕೊಳ್ಳಲಿದೆ. ಇದರಲ್ಲಿ ಪೇಷೆಂಟ್ ರಿಜಿಸ್ಟ್ರೇಷನ್‌ನಲ್ಲಿ ನಿಮ್ಮ ಮೊಬೈಲ್ ನಂಬರ್ ನಮೂದಿಸಿದರೆ ನಿಮಗೊಂದು ಒಪಿಟಿ ನಂಬರ್ ಬರಲಿದೆ, ಆ ಒಪಿಟಿ ನಂಬರನ್ನು ಬರೆದರೆ ರಿಜಿಸ್ಟ್ರೇಷನ್ ಅಪ್ಲಿಕೇಶನ್ ಒಂದು ತೆರೆದುಕೊಳ್ಳುತ್ತದೆ. ಒಮ್ಮೆ ರಿಜಿಸ್ಟರ್ ಆದರೆ ಮತ್ತೆ ಆಗುವು ಅಗತ್ಯವಿಲ್ಲ, ವಿಡಿಯೋಕಾಲ್ ಮೂಲಕವೇ ವೈದ್ಯರು ರೋಗಿಗಳೊಂದಿಗೆ ಸಮಾಲೋಚಿಸಿ ಚಿಕಿತ್ಸೆಗೆ ಔಷದ ಪಡೆದುಕೊಳ್ಳಬಹುದು ಎಂದು ತಿಳಿಸಿದರು.