ಪುತ್ತೂರು: ಅಧಿಕೃತ ಏಜೆನ್ಸಿಗಳ ಕೋಡ್ ಅನ್ನು ಬಳಸಿ ನಕಲಿ ವಾಹನ ವಿಮೆ ನೀಡುತ್ತಿರುವ ಪ್ರಕರಣ ಪುತ್ತೂರಿನಲ್ಲಿ ಪತ್ತೆ ಆಗಿರುವ ಹಿನ್ನೆಲೆಯಲ್ಲಿ ಶಾಸಕ ಸಂಜೀವ ಮಠಂದೂರು ಅವರು ಅ.17 ರಂದು ಪುತ್ತೂರಿನ ಪ್ರವಾಸಿ ಮಂದಿರದಲ್ಲಿ ವಿವಿಧ ಇಲಾಖೆಗಳ ಸಭೆ ನಡೆಸಿದ್ದು ಈ ಜಾಲದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ನಿರ್ದೇಶನ ನೀಡಿದ್ದಾರೆ.
“ಅಧಿಕೃತ ಏಜೆನ್ಸಿಗಳ ಕೋಡ್ ಬಳಸಿ ನಕಲಿ ವಾಹನ ವಿಮೆ” ಶೀರ್ಷಿಕೆಯಡಿ ಅ.15 ರಂದು ಉದಯವಾಣಿ ವರದಿ ಪ್ರಕಟಿಸಿದ ಬೆನ್ನಲ್ಲೇ ನಕಲಿ ವಿಮೆ ತಯಾರಿಸಿದ ಓರ್ವನನ್ನು ಪುತ್ತೂರು ನಗರ ಠಾಣಾ ಪೊಲೀಸರು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದು, ಈ ಬಗ್ಗೆ ಶಾಸಕರ ಮಾಹಿತಿ ಕಲೆ ಹಾಕಿದರು.
ಇದನ್ನೂ ಓದಿ:ಪಟ್ಲ ಸತೀಶ್ ಶೆಟ್ಟಿ ನೇತೃತ್ವದಲ್ಲಿ ಪಾವಂಜೆ ಮೇಳ: ಇಲ್ಲಿದೆ ಕಲಾವಿದರ ಸಂಪೂರ್ಣ ಪಟ್ಟಿ
ವಾಹನ ವಿಮೆಗೆ ಸಂಬಂಧಪಟ್ಟಂತೆ ಅಧಿಕಾರ ಹೊಂದಿರುವ ಆರ್ ಟಿಓ, ಯುನೈಟೆಡ್ ವಿಮಾ ಸಂಸ್ಥೆ, ಸಂಚಾರ ಪೊಲೀಸ್ ಹಾಗೂ ಇನ್ನಿತ್ತರ ಇಲಾಖೆಯ ಅಧಿಕಾರಿಗಳು ಸಭೆಯಲ್ಲಿ ಪಾಲ್ಗೊಂಡರು.