Advertisement

ಜೂ.20 ವಿಶ್ವದ್ರೋಹಿಗಳ ದಿನವೆಂದು ಘೋಷಿಸಿ! ವಿಶ್ವಸಂಸ್ಥೆಗೆ ಪತ್ರ ಬರೆದ ಸಂಜಯ್‌ ರಾವತ್‌

08:51 PM Jun 20, 2023 | Team Udayavani |

ಮುಂಬೈ: ಮಹಾರಾಷ್ಟ್ರ ಶಿವಸೇನೆ (ಉದ್ಧವ್‌ ಬಣ) ನಾಯಕ ಸಂಜಯ್‌ ರಾವತ್‌ ಅವರು ವಿಶ್ವಸಂಸ್ಥೆಗೆ ಮಂಗಳವಾರ ಪತ್ರ ಬರೆದಿದ್ದು, ಅದರಲ್ಲಿ ಜೂ.20 ಅನ್ನು “ವಿಶ್ವ ದ್ರೋಹಿಗಳ ದಿನ’ ವೆಂದು ಘೋಷಿಸಿ ಎಂದು ಕೇಳಿಕೊಂಡಿದ್ದಾರೆ.

Advertisement

ಶಿವಸೇನೆ ವಿಭಜನೆಯಾದ ದಿನದ ಹಿನ್ನೆಲೆ ರಾವತ್‌ ಈ ರೀತಿ ಪತ್ರ ಬರೆದಿದ್ದಾರೆ. ಟ್ವಿಟರ್‌ನಲ್ಲಿ ಪತ್ರ ಪೋಸ್ಟ್‌ ಮಾಡಿರುವ ಅವರು, ಕಳೆದ ವರ್ಷ ಜೂ.20ರಂದು ಈಗಿನ ಸಿಎಂ ಏಕನಾಥ ಶಿಂಧೆ ನೇತೃತ್ವದಲ್ಲಿ, ಬಿಜೆಪಿಗರ ಪ್ರಚೋದನೆಯಿಂದ ತಲಾ 50 ಕೋಟಿ ರೂ. ಪಡೆದು 40 ಶಾಸಕರು ಶಿವಸೇನೆ ತೊರೆದರು. ನಮ್ಮ ಬೆನ್ನಿಗೆ ಚೂರಿ ಹಾಕಿದರು. ಈ ದ್ರೋಹಿಗಳನ್ನು ವಿಶ್ವ ನೆನಪಿಟ್ಟುಕೊಳ್ಳಲಿ. ಹಾಗಾಗಿ ಜೂ.20 ಅನ್ನು ವಿಶ್ವ ದ್ರೋಹಿಗಳ ದಿನವೆಂದು ಘೋಷಿಸಿ ಎಂದು ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next