Advertisement

ಪವಾರ್‌-ಶಾ ಭೇಟಿಯಲ್ಲಿ ತಪಿಲ್ಪ : ರಾವುತ್‌

11:06 AM Mar 30, 2021 | Team Udayavani |

ಮುಂಬಯಿ: ಅಹಮದಾಬಾದ್‌ನಲ್ಲಿ ಅಥವಾ ಎಲ್ಲಿಯೂ ಶರದ್‌ ಪವಾರ್‌ ಮತ್ತು ಅಮಿತ್‌ ಶಾ ನಡುವೆ ರಹಸ್ಯ ಸಭೆ ನಡೆದಿಲ್ಲ. ಅವರ ನಡುವಿನ ಭೇಟಿಯಲ್ಲಿ ಯಾವುದೇ ತಪ್ಪಿಲ್ಲ ಎಂದು ಸಂಜಯ್‌ ರಾವುತ್‌ ಹೇಳಿದ್ದಾರೆ.

Advertisement

ಗೃಹ ಸಚಿವ ಅಮಿತ್‌ ಶಾ ಅಹಮ ದಾಬಾದ್‌ನಲ್ಲಿಯೂ ಸಭೆಗಳನ್ನು ನಡೆಸು ತ್ತಾರೆ. ಶರದ್‌ ಪವಾರ್‌ ಪ್ರಮುಖ ನಾಯಕ ಮತ್ತು ಸಂಸದ. ಕೆಲಸಕ್ಕಾಗಿ ಭೇಟಿಯಾಗುವುದರಲ್ಲಿ ಯಾವುದೇ ತಪ್ಪಿಲ್ಲ. ಮಹಾವಿಕಾಸ್‌ ಆಘಾಡಿ ಸರಕಾರಕ್ಕೆ ಯಾವುದೇ ಅಪಾಯವಿಲ್ಲ. ಪೂರ್ಣ ಬಲದಿಂದ ಕೆಲಸ ಮಾಡುತ್ತಿದೆ ಎಂದು ರಾವುತ್‌ ಹೇಳಿದ್ದಾರೆ.

ಕಾಂಗ್ರೆಸ್‌ ಪ್ರಶ್ನೆ :

ದೇಶದ ಗೃಹ ಸಚಿವರು ದೊಡ್ಡ ನಾಯಕರೊಂದಿಗೆ ಸಭೆ ನಡೆಸಿದರೆ, ಅವರು ನಾಗರಿಕರಿಗೆ ತಿಳಿಸಬೇಕು. ಈ ಬಗ್ಗೆ ತಿಳಿಯಲು ನಾಗರಿಕರಿಗೆ ಹಕ್ಕಿದೆ.  ಉಭಯ ನಾಯಕರ ನಡುವೆ ಯಾವ ವಿಷಯದ ಬಗ್ಗೆ ಚರ್ಚೆಗಳು ನಡೆದವು ಎಂಬುದನ್ನು ದೇಶ ತಿಳಿದುಕೊಳ್ಳಬೇಕು ಎಂದು ಕಾಂಗ್ರೆಸ್‌ ಮುಖಂಡ ಸಂದೀಪ್‌ ದೀಕ್ಷಿತ್‌ ಹೇಳಿದ್ದಾರೆ.

ಬಿಜೆಪಿ ಟೀಕಿಸಿದ ಎನ್‌ಸಿಪಿ :

Advertisement

ಶರದ್‌ ಪವಾರ್‌ ಮತ್ತು ಪ್ರಫುಲ್‌ ಪಟೇಲ್‌ ಅವರು ಅಮಿತ್‌ ಶಾ ಅವರನ್ನು ಭೇಟಿಯಾದರು ಎಂದು ಗುಜರಾತ್‌ ಪತ್ರಿಕೆಯೊಂದು ವರದಿ ಮಾಡಿದೆ. ಕಳೆದ ಎರಡು ದಿನಗಳಿಂದ ಅಂತಹ ಯಾವುದೇ ಸಭೆ ನಡೆದಿಲ್ಲ ಎಂದು ಎನ್‌ಸಿಪಿ ನಾಯಕ ನವಾಬ್‌ ಮಲಿಕ್‌ ಹೇಳಿದ್ದಾರೆ.

ಬಿಜೆಪಿಯನ್ನು ಟೀಕಿಸಿದ ಅವರು, ಸಭೆ ಬಗ್ಗೆ ಬಿಜೆಪಿ ವದಂತಿಗಳನ್ನು ಹಬ್ಬಿಸುತ್ತಿದೆ. ಶರದ್‌ ಪವಾರ್‌ ಮತ್ತು ಅಮಿತ್‌ ಶಾ ನಡುವೆ ಯಾವುದೇ ಸಭೆ ನಡೆದಿಲ್ಲ. ಶರದ್‌ ಪವಾರ್‌ ಮತ್ತು ಪ್ರಫುಲ್‌ ಪಟೇಲ್‌ ಅವರು ಜೈಪುರದಿಂದ ನೇರವಾಗಿ ಮುಂಬಯಿಗೆ ಮರಳಿದ್ದರು ಎಂದಿದ್ದಾರೆ.

ಹೈಕಮಾಂಡ್‌ ನಿರ್ಧಾರ ಅಂತಿಮ: ಪಾಟೀಲ್‌ :

ಎನ್‌ಸಿಪಿ ಜತೆ ಹೋಗುತ್ತೀರಾ ಎಂಬ ಪ್ರಶ್ನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಚಂದ್ರಕಾಂತ್‌ ಪಾಟೀಲ್‌ ಪ್ರತಿಕ್ರಿಯಿಸಿದ್ದು, ಪ್ರಧಾನಿ ಮೋದಿ, ಅಮಿತ್‌ ಶಾ, ಜೆ.ಪಿ. ನಡ್ಡಾ ತೆಗೆದುಕೊಳ್ಳುವ ನಿರ್ಧಾರ ಅಂತಿಮ ಎಂದು ಹೇಳಿದ್ದಾರೆ. ನನಗೆ ಈ ವರೆಗೆ ಯಾವುದೇ ಸೂಚನೆ ಬಂದಿಲ್ಲ. ತಡರಾತ್ರಿಯಲ್ಲಿ ಏಕೆ ಭೇಟಿಯಾದರೆಂಬುದು ಗೊತ್ತಿಲ್ಲ ಎಂದು ಹೇಳಿದ್ದಾರೆ.

ಸಂಜಯ್‌ ರಾವುತ್‌ ಅವರು ಸರಕಾರ ಸ್ಥಿರವಾಗಿರುತ್ತದೆ ಎಂದು ಹೇಳುವುದಾದರೆ ಮಹಾ ಅಘಾಡಿಯಲ್ಲಿ ಏನೋ ತಪ್ಪಾಗಿದೆ ಎಂದು ಪಾಟೀಲ್‌ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next