Advertisement
“ಅಲ್ಲಿ ಇರುವ 40 ಜನರು ಜೀವಂತವಾಗಿಲ್ಲ, ಅವರ ದೇಹಗಳು ಮಾತ್ರ ಇಲ್ಲಿಗೆ ಬರುತ್ತವೆ, ಅವರ ಆತ್ಮಗಳು ಸತ್ತಿರುತ್ತವೆ, ಅವರು ಗುವಾಹಟಿಯಿಂದ ಹೊರಬಂದಾಗ, ಅವರು ಹೃದಯದಲ್ಲಿ ಜೀವಂತವಾಗಿರುವುದಿಲ್ಲ. ಈಗ ಹೊತ್ತಿಕೊಂಡಿರುವ ಕಿಡಿ ಹೇಗೆ ವ್ಯಾಪಿಸಲಿದೆ ಎಂದು ಅವರಿಗೆ ಗೊತ್ತಾಗಲಿದೆ” ಎಂದು ಗುಡುಗಿದ್ದಾರೆ.
Related Articles
Advertisement
ಮಹಾ ವಿಕಾಸ ಅಘಾಡಿ ಮೈತ್ರಿಯಿಂದ ಶಿವಸೇನೆ ಹೊರಬರಬೇಕು ಎನ್ನುವುದು ಬಂಡಾಯ ಶಾಸಕರ ಆಗ್ರಹವಾಗಿದ್ದು, ಇದಕ್ಕೆ ಒಪ್ಪದ ಸಿಎಂ ಉದ್ಧವ್ ಠಾಕ್ರೆ, “ರಾಜೀನಾಮೆ ನೀಡಿ, ಮತ್ತೂಮ್ಮೆ ಚುನಾವಣೆ ಎದುರಿಸಿ’ ಎಂದು ಸವಾಲು ಹಾಕಿದ್ದಾರೆ. ಅಲ್ಲದೇ, ಶಿಂಧೆ ಸೇರಿದಂತೆ 16 ಮಂದಿ ಬಂಡಾಯ ಶಾಸಕರಿಗೆ ಸಮನ್ಸ್ ಜಾರಿ ಮಾಡಿರುವ ಮಹಾರಾಷ್ಟ್ರ ವಿಧಾನಸಭೆ ಕಾರ್ಯಾಲಯವು, ಅನರ್ಹತೆ ದೂರಿಗೆ ಸಂಬಂಧಿಸಿ ಸೋಮವಾರ ಸಂಜೆ 5.30ರೊಳಗಾಗಿ ಲಿಖೀತ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ. ಈ ಎಲ್ಲ ಬೆಳವಣಿಗೆಗಳು ಈಗ “ಮಹಾ’ ಡ್ರಾಮಾವನ್ನು ಸುಪ್ರೀಂ ಅಂಗಣಕ್ಕೆ ತಂದು ನಿಲ್ಲಿಸಿದೆ.