Advertisement

ಸಂಜು ಬಾಬಾ ಮೆಚ್ಚುಗೆ ಪಡೆದ ‘ಯುವರತ್ನ’ಟ್ರೇಲರ್‌

03:31 PM Mar 23, 2021 | Team Udayavani |

ಇತ್ತೀಚೆಗಷ್ಟೇ ಪವರ್‌ಸ್ಟಾರ್‌ ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ’ ಚಿತ್ರದ ಟ್ರೇಲರ್‌ ಬಿಡುಗಡೆಯಾಗಿದೆ. ಟ್ರೇಲರ್‌ಗೆ ಸೋಶಿಯಲ್‌ ಮಿಡಿಯಾಗಳಲ್ಲೂ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಇದೀಗ “ಯುವರತ್ನ’ ಚಿತ್ರದ ಟ್ರೇಲರ್‌ ನೋಡಿರುವ ಮುನ್ನಬಾಯ್‌ ಖ್ಯಾತಿಯ ಬಾಲಿವುಡ್‌ ನಟ ಸಂಜಯ್‌ ದತ್‌ “ಯುವರತ್ನ’ ಟ್ರೇಲರ್‌ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

Advertisement

ಟ್ವಿಟ್ಟರ್‌ನಲ್ಲಿ “ಯುವರತ್ನ’ ಚಿತ್ರದ ಟ್ರೇಲರ್‌ ಲಿಂಕ್‌ ಶೇರ್‌ ಮಾಡಿರುವ ಸಂಜಯ್‌ ದತ್‌, “”ಯುವರತ್ನ’ ಟ್ರೇಲರ್‌ ಅದ್ಭುತವಾಗಿದೆ. ಇಡೀ “ಯುವರತ್ನ’ ಚಿತ್ರತಂಡಕ್ಕೆ ಒಳ್ಳೆಯದಾಗಲಿ’ ಎಂದು ಹಾರೈಸಿದ್ದಾರೆ.

ಇದನ್ನೂ ಓದಿ:ತಲೈವಿ ಟ್ರೈಲರ್ : ಜಯಲಲಿತ ಅವರ ಜೀವನ ಪಯಣ : ಸಿನೆಮಾ ಟು ರಾಜಕಾರಣ  

ಈ ಹಿಂದೆ ಕೂಡ ಟೀಸರ್‌ ರಿಲೀಸ್‌ ಸಂದರ್ಭದಲ್ಲೂ ಸಂಜಯ್‌ ದತ್‌, “ಯುವರತ್ನ’ದ ಬಗ್ಗೆ ಸೋಶಿಯಲ್‌ ಮೀಡಿಯಾದಲ್ಲಿ ಮೆಚ್ಚುಗೆಯ ಮಾತುಗಳನ್ನಾಡಿದ್ದರು.

ಅಂದಹಾಗೆ, “ಯುವರತ್ನ’ ಚಿತ್ರ “ಹೊಂಬಾಳೆ ಫಿಲಂಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದ್ದು, ಇದೇ ಬ್ಯಾನರ್‌ನ ಮುಂಬರುವ ಚಿತ್ರ “ಕೆಜಿಎಫ್-2’ನಲ್ಲಿ ಬಾಲಿವುಡ್‌ ನಟ ಸಂಜಯ್‌ ದತ್‌ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next