Advertisement

ಬಾಂಗ್ಲಾ ಬ್ಯಾಟಿಂಗ್‌ ಸಲಹೆಗಾರ ಹುದ್ದೆ ನಿರಾಕರಿಸಿದ ಸಂಜಯ್‌ ಬಂಗಾರ್‌

11:25 AM Mar 19, 2020 | keerthan |

ನವದೆಹಲಿ: ಬಾಂಗ್ಲಾದೇಶ ಟೆಸ್ಟ್‌ ಕ್ರಿಕೆಟ್‌ ತಂಡದ ಬ್ಯಾಟಿಂಗ್‌ ಸಲಹೆಗಾರ ಹುದ್ದೆಗೆ ಬಂದ ಆಹ್ವಾನವನ್ನು ಮಾಜಿ ಕ್ರಿಕೆಟಿಗ ಸಂಜಯ್‌ ಬಂಗಾರ್‌ ನಿರಾಕರಿಸಿದ್ದಾರೆ.

Advertisement

“ವೈಯಕ್ತಿಕ ಕಾರಣಗಳಿಂದ ಒಪ್ಪಲು ಸಾಧ್ಯವಾಗುತ್ತಿಲ್ಲ’ ಎಂದು ಪ್ರತಿಕ್ರಿಯಿಸಿದ್ದಾರೆ. “ಕಳೆದ 8 ವಾರಗಳ ಹಿಂದೆಯೆ ನನಗೆ ಆಹ್ವಾನ ಬಂದಿತ್ತು. ಆದರೆ ಸ್ಟಾರ್‌ ಜತೆಗಿನ ಒಪ್ಪಂದ ಸೇರಿದಂತೆ ವೈಯಕ್ತಿಕ ಕಾರಣಗಳಿಂದ ಆ ಸ್ಥಾನವನ್ನು ಹೊಂದುವುದು ಸಾಧ್ಯವಿಲ್ಲ’ ಎಂದು ಬಂಗಾರ್‌ ಸ್ಪಷ್ಟಪಡಿಸಿದ್ದಾರೆ.

ಬಂಗಾರ್‌ 2014ರಿಂದ 2019ರ ತನಕ ಭಾರತ ತಂಡದ ಬ್ಯಾಟಿಂಗ್‌ ಕೋಚ್‌ ಆಗಿ ಕಾರ್ಯ ನಿರ್ವಹಿಸಿದ್ದರು. 2019ರ ವಿಶ್ವಕಪ್ ಸೋಲಿನ ನಂತರ ಸಂಜಯ್ ಬಂಗಾರ್ ಬ್ಯಾಟಿಂಗ್ ಕೋಚ್ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಐಪಿಎಲ್ ನ ಕಿಂಗ್ಸ್ ಇಲೆವೆನ್ ಪಂಜಾಬ್ ಫ್ರಾಂಚೈಸಿಗೂ ಕೋಚ್ ತರಬೇತುದಾರನಾಗಿ ಕೆಲಸ ನಿರ್ವಹಿಸಿದ್ದರು.

47 ವರ್ಷದ ಬಂಗಾರ್‌ ಭಾರತ ಪರ 12 ಟೆಸ್ಟ್‌, 15 ಏಕದಿನ ಪಂದ್ಯವನ್ನಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next