Advertisement
ಇದೊಂದು “ಇಂಟರ್ ಕೇಡರ್ ಡೆಪ್ಯೂಟೇಶನ್’ ಮಾದರಿಯಡಿ ಆಗಿರುವ ವರ್ಗಾವಣೆ. ತಮಿಳುನಾಡು ಕೇಡರ್‌ನವರಾದ ಅವರನ್ನು ಅರುಣಾಚಲ ಪ್ರದೇಶ, ಗೋವಾ, ಮಿಜೋರಂ ಹಾಗೂ ಕೇಂದ್ರಾಡಳಿತ ಪ್ರದೇಶಗಳ (ಎಜಿಎಂಯುಟಿ) ಕೇಡರ್‌ಗೆ ವರ್ಗಾವಣೆ ಮಾಡಲು ಸಲ್ಲಿಸಲಾಗಿದ್ದ ಪ್ರಸ್ತಾವನೆಗೆ ಸ್ಪರ್ಧಾ ಪ್ರಾಧಿಕಾರ (ಕಾಂಪಿಟೆಂಟ್ ಅಥಾರಿಟಿ) ಒಪ್ಪಿಗೆ ನೀಡಿದೆ. ಅದರ ಪರಿಣಾಮವಾಗಿ, ಅರೋರಾ ಅವರು ದೆಹಲಿ ಆಯುಕ್ತರಾಗಿ ನೇಮಕಗೊಂಡಿದ್ದಾರೆ.
80-90ರ ದಶಕದಲ್ಲಿ ಇಡೀ ದಕ್ಷಿಣ ಭಾರತದಲ್ಲಿ ತಲ್ಲಣ ಸೃಷ್ಟಿಸಿದ್ದ ಕಾಡುಗಳ್ಳ ವೀರಪ್ಪನ್‌ನನ್ನು ಹಿಡಿಯಲು ತಮಿಳುನಾಡು ಸರ್ಕಾರ ನೇಮಿಸಿದ್ದ ವಿಶೇಷ ಕಾರ್ಯಪಡೆಯ (ಎಸ್‌ಟಿಎಫ್) ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ಆ ಸಂದರ್ಭದಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ಅವರಿಗೆ ತಮಿಳುನಾಡು ಮುಖ್ಯಮಂತ್ರಿಗಳ ಶೌರ್ಯ ಪದಕವೂ ಲಭಿಸಿದೆ.