Advertisement

ಕೋವಿಡ್ ಕಳವಳ: ಉಳ್ಳಾಲ ನಗರಸಭೆ ವ್ಯಾಪ್ತಿಯಲ್ಲಿ ಸ್ಯಾನಿಟೈಸಿಂಗ್ ಕಾರ್ಯ

04:12 PM Jun 27, 2020 | keerthan |

ಉಳ್ಳಾಲ: ಉಳ್ಳಾಲ ನಗರ ಸಭಾ ವ್ಯಾಪ್ತಿಯಲ್ಲಿ ಕೋವಿಡ್-19 ಭೀತಿ ಹೆಚ್ಚುತ್ತಿದ್ದು, ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಶನಿವಾರ ಸೋಂಕಿತ ಪ್ರದೇಶ ಸೇರಿದಂತೆ ಉಳ್ಳಾಲ ನಗರಸಭಾ ವ್ಯಾಪ್ತಿಯ ಉಳ್ಳಾಲ ಪೇಟೆ, ತೊಕ್ಕೊಟ್ಟು ಪೇಟೆ ಸೇರಿದಂತೆ ಮುಖ್ಯ ರಸ್ತೆ ಸಂಪರ್ಕಿಸುವ ಸ್ಥಳದಲ್ಲಿ ಅಗ್ನಿಶಾಮಕ ವಾಹನದಲ್ಲಿ ಸ್ಯಾನಿಟೈಸ್ ಮಾಡುವ ಕಾರ್ಯ ಆರಂಭಗೊಂಡಿತು.

Advertisement

ಶಾಸಕ ಯು.ಟಿ.ಖಾದರ್ ಉಳ್ಳಾಲ ಕೋಡಿಯಲ್ಲಿ ಸ್ಯಾನಿಟೈಸ್‍ಗೆ ಚಾಲನೆ ನೀಡಿ ಜನರು ಸಾಮಾಜಿಕ ಅಂತರ ಕಾಯ್ದುಕೊಳ್ಳಬೇಕು, ಹೊರಗಡೆ ತೆರಳುವಾಗ ಮಾಸ್ಕ್ ಧರಿಸಬೇಕು. ಜನರೊಂದಿಗೆ,ಮಾತನಾಡುವಾಗ ಅಂತರ ಕಾಯ್ದುಕೊಳ್ಳಬೇಕು ಎಂದರು.

ಉಳ್ಳಾಲ ನಗರಸಭಾ ಪೌರಾಯುಕ್ತ ರಾಯಪ್ಪ ಮಾತನಾಡಿ ಶಾಸಕರ ಆದೇಶದ ಮೇರೆ ಸ್ಯಾನಿಟೈಸ್ ಮಾಡುತ್ತಿದ್ದು, ಉಳ್ಳಾಲ ನಗರವನ್ನು ಕೋವಿಡ್-19 ಸೋಂಕು ಮುಕ್ತ ನಡೆಸಲು ಎಲ್ಲರೂ ಸಹಕರಿಸಬೇಕು ಎಂದರು.

ಉಳ್ಳಾಲ ಕೋಡಿಯಿಂದ ಆರಂಭಗೊಂಡ ಸ್ಯಾನಿಟೈಸ್ ಕಾರ್ಯ ಕೋಟೆಪುರ, ಉಳ್ಳಾಲ ಜಂಕ್ಷನ್, ಮೊಗವೀರ ಪಟ್ಣ, ಸಮ್ಮರ್ ಸ್ಯಾಂಡ್,  ಅಬ್ಬಕ್ಕ ಸರ್ಕಲ್,  ಮುಕ್ಕಚೇರಿ, ಮಾಸ್ತಿಕಟ್ಟೆ, ಮೇಲಂಗಡಿ, ದರ್ಗಾ ರಸ್ತೆ, ಉಳ್ಳಾಲಬೈಲು ಮುಖ್ಯರಸ್ತೆ, ತೊಕ್ಕೊಟ್ಟು ಒಳಪೇಟೆ, ಮಂಚಿಲ,ಅಳೇಕಲ, ತೊಕ್ಕೊಟ್ಟು ಜಂಕ್ಷನ್, ತೊಕ್ಕೊಟ್ಟು ಬಸ್ಸು ನಿಲ್ದಾಣ, ಮಾರ್ಗತಲೆ ಕಲ್ಲಾಪು, ಶಿವಾಜಿನಗರ,  ಪಂಡಿತ್‍ಹೌಸ್, ಕುತ್ತಾರು ಪ್ರದೇಶದಲ್ಲಿ ನಡೆಸಲಾಯಿತು.

Advertisement

ನಗರಸಭಾ ಅಧಿಕಾರಿಗಳು ಈ ಸಂದರ್ಭದಲ್ಲಿ ಸಹಕಾರ ನೀಡಿದ್ದು, ಧ್ವನಿವರ್ಧಕದ ಮೂಲಕ ಜನರಿಗೆ ಮಾಹಿತಿಯನ್ನು ನೀಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next