Advertisement

ಸ್ಯಾನಿಟೈಸರ್‌,ಮಾಸ್ಕ್,ಉಪಾಹಾರ ವಿತರಣೆ

05:28 PM Jun 02, 2021 | Team Udayavani |

ಯಳಂದೂರು: ಶಾಸಕ ಎನ್‌.ಮಹೇಶ್‌ ಮಂಗಳವಾರ ತಮ್ಮಹುಟ್ಟುಹಬ್ಬದ ನಿಮಿತ್ತ ಪಟ್ಟಣದಸಾರ್ವಜನಿಕ ಆಸ್ಪತ್ರೆ, ಪೊಲೀಸ್‌ ಠಾಣೆ,ಸರ್ಕಾರಿ ಕಚೇರಿಗಳಿಗೆ ಸ್ಯಾನಿಟೈಸರ್‌,ಮಾಸ್ಕ್ ಹಾಗೂ ಮಧ್ಯಾಹ್ನದ ಉಪಾಹಾರ ವಿತರಿಸಿದರು.

Advertisement

ಇವರಅಭಿಮಾನಿಬಳಗದಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದಶಾಸಕರು, ಸಂಕಷ್ಟದ ಪರಿಸ್ಥಿತಿಯಲ್ಲಿಕೋವಿಡ್‌ನಿಂದ ಸಾರ್ವಜನಿಕರನ್ನುಕಾಪಾಡಲು ಫ್ರಂಟ್‌ಲೈನ್‌ ವಾರಿಯರ್ಸ್‌ ಆಗಿ ನಮ್ಮ ಜೀವಕಾಯುತ್ತಿರುವ ಆರೋಗ್ಯ, ಆಶಾ,ಅಂಗನವಾಡಿ, ಪೊಲೀಸ್‌,ಪೌರಕಾರ್ಮಿಕರು, ಮಾಧ್ಯಮದವರೂ ಸೇರಿದಂತೆ ಎಲ್ಲರಿಗೂ ಅಭಿನಂದನೆಸಲ್ಲಿಸುತ್ತೇನೆ. ಎಲ್ಲರೂ ಕೂಡಕೋವಿಡ್‌ನಿಯಮಗಳನ್ನು ಪಾಲಿಸಬೇಕು ಎಂದು ಸಲಹೆ ನೀಡಿದರು.

ಯಳಂದೂರು, ಸಂತೆಮರಹಳ್ಳಿಗ್ರಾಮಗಳ ಕೋವಿಡ್‌ ಕೇರ್‌ ಸೆಂಟರ್‌,ಆಸ್ಪತ್ರೆ, ಪೊಲೀಸ್‌ ಠಾಣೆ, ಪಪಂ.ಗ್ರಾಪಂ ನೌಕರರು, ಪೌರಕಾರ್ಮಿಕರಿಗೆಸ್ಯಾನಿಟೈಜರ್‌, ಮಾಸ್ಕ್ ಹಾಗೂಉಪಾಹಾರ ನೀಡಲಾಯಿತು.ಆರೋಗ್ಯಾಧಿಕಾರಿಡಾ|ಮಂಜುನಾಥ್‌,ವೈದ್ಯಾಧಿಕಾರಿ ಡಾ| ಶ್ರೀಧರ್‌,ಡಾ|ಶಶಿಕಲಾ, ಡಾ| ನಾಗೇಶ್‌, ಪಪಂಮುಖ್ಯಾಧಿಕಾರ ಎಂ.ಸಿ. ನಾಗರತ್ನ,ಆರೋಗ್ಯಾಧಿಕಾರಿಮಹೇಶ್‌ಕುಮಾರ್‌,ಪಿ.ಮಾದೇಶ್‌, ಮಾಂಬಳ್ಳಿ ರಾಮು,ನಾಗೇಶ್‌, ಶಿವಣ್ಣ, ಚೆನ್ನರಾಜುದಾನವ,ಮಹೇಶ್‌, ಮಂಜುನಾಥ್‌, ರಘು,ಕಾಳಿಪ್ರಸಾದ್‌ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next