ಬೆಂಗಳೂರು: ಈ ಬಸ್ಸನ್ನು ನೀವು ಹತ್ತಿಳಿದರೆ ಸಂಪೂರ್ಣ ಸ್ಯಾನಿಟೈಸ್ ಆಗಿ ಹೊರಬರುತ್ತೀರಿ.ಇದರ ಹೆಸರು ಸಾರಿಗೆ ಸಂಜೀವಿನಿ. ಸಾರ್ವಜನಿಕರ ಅನುಕೂಲಕ್ಕಾಗಿ ಕೆಎಸ್‌ಆರ್‌ಟಿಸಿ ಈ ಬಸ್ ಅನ್ನು ಅಭಿವೃದ್ಧಿಪಡಿಸಿದೆ. ಈ ಮೊಬೈಲ್ ಸ್ಯಾನಿಟೈಸರ್ ಬಸ್ ಮುಂಭಾಗ ಹತ್ತಿ ಹಿಂಭಾಗದಲ್ಲಿ ಇಳಿದರೆ ದೇಹಕ್ಕೆ ದ್ರಾವಣ ಸಿಂಪಡಣೆ ಆಗಲಿದೆ. ಕೋವಿಡ್ ಸೊಂಕು ನಿವಾರಣೆಗೆ ಮುಂಜಾಗ್ರತ ಕ್ರಮದ ಮತ್ತೂಂದು ಉಪಕ್ರಮ ಇದಾಗಿದೆ.
ನಗರದಲ್ಲಿ ಅಗತ್ಯ ಸೇವೆ ಸಲ್ಲಿಸುತ್ತಿ ರುವ ಪೊಲೀಸ್, ವೈದ್ಯಕೀಯ, ಬ್ಯಾಂಕ್, ಪೌರ ಸಿಬಂದಿ ಅನುಕೂಲ ಕ್ಕಾಗಿ ಈ “ಸಂಜೀವಿನಿ’ ಸಂಚರಿಸಲಿದೆ.
ಶನಿವಾರ ಶಾಂತಿನಗರದಲ್ಲಿ ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಶಿವಯೋಗಿ ಕಳಸದ ಅವರು ಇದಕ್ಕೆ ಚಾಲನೆ ನೀಡಿದರು.
ಹತ್ತು ವರ್ಷ ಹಳೆಯ ಬಸ್ ಅನ್ನು ಸ್ಯಾನಿಟೈಸರ್ ಬಸ್ ಆಗಿ ಪರಿವರ್ತಿಸಿದ ಕೆಎಸ್‌ಆರ್‌ಟಿಸಿ, ಸುಮಾರು 20 ಸಾವಿರ ರೂ. ವೆಚ್ಚದಲ್ಲಿ ಬಸ್ಸನ್ನು ಮರುವಿನ್ಯಾಸಗೊಳಿಸಿದೆ.