Advertisement

ನ್ಯಾಪ್ಕಿನ್‌ಗೆ ಇಳಿದದ್ದು  1 ರೂ ಮಾತ್ರ!

06:00 AM Jul 28, 2018 | Team Udayavani |

ಹೊಸದಿಲ್ಲಿ: ಒಂದು ವರ್ಷದ ವಿರೋಧದ ನಂತರ ಜಿಎಸ್‌ಟಿ ಮಂಡಳಿ ಸ್ಯಾನಿಟರಿ ನ್ಯಾಪ್ಕಿನ್‌ ಮೇಲಿನ ತೆರಿಗೆ ತೆಗೆದು ಹಾಕಿದ್ದರೂ, ಇದರಿಂದ ಜನರಿಗೆ ಹೆಚ್ಚೇನೂ ಪ್ರಯೋಜನವಿಲ್ಲ ಎಂಬುದು ಬಹಿರಂಗವಾಗಿದೆ.

Advertisement

ಈ ಹಿಂದೆ ಸ್ಯಾನಿಟರಿ ನ್ಯಾಪ್ಕಿನ್‌ಗೆ ಶೇ.12 ರಷ್ಟು ತೆರಿಗೆ ವಿಧಿಸಲಾಗುತ್ತಿತ್ತು. ಇದಕ್ಕೆ ತೆರಿಗೆಯೇ ಇಲ್ಲ ಎಂದು ಅಂದುಕೊಂಡರೂ, ಬೆಲೆ ಕಡಿತವಾಗುವುದು ಮಾತ್ರ ಅತ್ಯಲ್ಪ. ಅಂದರೆ ನ್ಯಾಪ್ಕಿನ್‌ಗಳ ಮೇಲೆ ಶೇ.1.5- ಶೇ.2.5 ರಷ್ಟು ಕಡಿತವಾಗಲಿದೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ.

ಜಿಎಸ್‌ಟಿ ಮಂಡಳಿ ನ್ಯಾಪ್ಕಿನ್‌ ಮೇಲಿನ ದರ ತೆಗೆದುಹಾಕಿದ್ದರೂ, ಇದನ್ನು ಉತ್ಪಾದಿಸುವ ಕಚ್ಚಾ ವಸ್ತುಗಳ ಮೇಲಿನ ದರ ಇಳಿಕೆ ಮಾಡಿಲ್ಲ. ಇದಕ್ಕೆ ಶೇ.10.8 ರಷ್ಟು ಜಿಎಸ್‌ಟಿ ವಿಧಿಸಲಾಗುತ್ತಿದೆ. ಹೀಗಾಗಿ ಒಟ್ಟಾರೆ ಬೆಲೆಯಲ್ಲಿ ಶೇ.10.8 ರಷ್ಟು ತೆರಿಗೆ ಕಳೆದು ಕೇವಲ ಶೇ.1.2 ನಷ್ಟು ಮಾತ್ರ ದರ ಇಳಿಕೆ ಮಾಡಲಾಗುತ್ತದೆ ಎಂದು ಮೂಲಗಳು ಹೇಳಿವೆ. ಈ ಮಧ್ಯೆ ಶುಕ್ರವಾರದಿಂದಲೇ ಜಾರಿಯಾಗುವಂತೆ ದೇಶಾದ್ಯಂತ ಟಿವಿ. ಫ್ರಿಡ್ಜ್ ಸೇರಿದಂತೆ ಸುಮಾರು 88 ವಸ್ತುಗಳ ದರ ಕಡಿಮೆಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next