Advertisement

ಸಾನಿಯಾಗೆ ಮಂಡಿ ನೋವಿನದ್ದೇ ಭಯ

12:26 PM Dec 09, 2017 | |

ಭಾರತದಲ್ಲಿ ಟೆನಿಸ್‌ ಅಲೆಯನ್ನು ಹೆಚ್ಚಿಸಿರುವ ಸುಂದರಿ ಸಾನಿಯಾ ಮಿರ್ಜಾ. ಗ್ಲಾಮರ್‌ಗೂ ಸೈ, ಆಟಕ್ಕೂ ಸೈ. ಎದುರಾಳಿ ಅಂಕಣದಲ್ಲಿರುವ ಆಟಗಾರರು ಎಷ್ಟೇ ಪ್ರಬಲವಾದ ಸರ್ವ್‌ ಮಾಡಿದರೂ ಈಕೆ ಸರಿಯಾಗಿ ತಿರುಗೇಟು ನೀಡಿದ್ದಾರೆ. ಪಾಕ್‌ ಕ್ರಿಕೆಟಿಗ ಶೋಯಿಬ್‌ ಮಲಿಕ್‌ ಜತೆ ಮದುವೆಯಾದಾಗ ಭರ್ಜರಿ ಟೀಕೆಗೆ ತುತ್ತಾಗಿದ್ದರು. ಒಮ್ಮೆ ರಾಷ್ಟ್ರೀಯ ಧ್ವಜಕ್ಕೆ ಕಾಲು ತಾಗುವಂತೆ ಕೂತು ಜನರ ಆಕ್ರೋಶವನ್ನೂ ಎದುರಿಸಿದ್ದಾರೆ. ಈ ಎಲ್ಲಾ ಸಂದರ್ಭವನ್ನೂ ಸಾನಿಯಾ ಧೈರ್ಯದಿಂದಲೇ ಎದುರಿಸಿದ್ದಾರೆ. ಆದರೆ ಇದೀಗ ಸಾನಿಯಾಗೆ ಭಯ ಕಾಡಿಸುತ್ತಿದೆೆ. ಆ ಭಯ ಹುಟ್ಟಿಸಿರುವುದು ಮಂಡಿ ನೋವು!

Advertisement

ಹೌದು, ಕ್ರೀಡಾಪಟುಗಳ ದೊಡ್ಡ ಶತ್ರು ಗಾಯ. ಮಾನಸಿಕವಾಗಿ ಎಷ್ಟೇ ಬಲಿಷ್ಠ ಆಟಗಾರನಾಗಿದ್ದರೂ ಪ್ರತಿಯೊಬ್ಬ ಕ್ರೀಡಾಪಟುವೂ ಗಾಯಕ್ಕೆ ಹೆದರುತ್ತಾರೆ. ಗಾಯದಿಂದ ತಮ್ಮ ಕ್ರೀಡಾ ಭವಿಷ್ಯಕ್ಕೆ ತೊಂದರೆಯಾದರೆ ಗತಿ ಏನು ಎಂದು ಚಿಂತಿಸುತ್ತಾರೆ. ಈ ಹಿಂದೆ ಎಷ್ಟೋ ಕ್ರೀಡಾಪಟುಗಳು ಗಾಯಕ್ಕೆ ತುತ್ತಾಗಿ ಭವಿಷ್ಯ ಕಳೆದುಕೊಂಡಿದ್ದಾರೆ. ಹೀಗಾಗಿ ಮಂಡಿನೋವು ಸಹಜವಾಗಿ ಟೆನಿಸ್‌ ತಾರೆ ಸಾನಿಯಾ ಮಿರ್ಜಾಗೂ ಭಯ ಹುಟ್ಟಿಸಿದೆ.

ಕ್ರಿಕೆಟ್‌ ದಂತಕಥೆಯಾಗಿದ್ದ ಸಚಿನ್‌ ತೆಂಡುಲ್ಕರ್‌, ಟೆನಿಸ್‌ ದಂತಕಥೆ ರೋಜರ್‌ ಫೆಡರರ್‌, ಖ್ಯಾತ ಫ‌ುಟ್ಬಾಲಿಗರಾದ ಲಿಯೋನೆಲ್‌ ಮೆಸ್ಸಿ, ಕ್ರಿಸ್ಟಿಯಾನೋ ರೋನಾಲ್ಡೊ, ಬ್ಯಾಡ್ಮಿಂಟನ್‌ ದಂತಕಥೆ ಲಿನ್‌ ಡಾನ್‌… ಎಲ್ಲರ ಕಥೆಯೂ ಅಷ್ಟೇ. ಇವರೆಲ್ಲ ಆಗಾಗ ಗಾಯಕ್ಕೆ ತುತ್ತಾದವರು. ಆದರೆ ಚೇತರಿಸಿಕೊಂಡು ಮತ್ತೆ ಪುಟಿದೆದ್ದವರು.

ಸಾನಿಯಾ ಸಿಂಗಲ್ಸ್‌ನಲ್ಲಿ ಹೇಳಿಕೊಳ್ಳುವಂತಹ ಯಶಸ್ಸು ಪಡೆಯದಿದ್ದರೂ ಮಹಿಳಾ ಡಬಲ್ಸ್‌, ಮಿಶ್ರ ಡಬಲ್ಸ್‌ನಲ್ಲಿ ಸಾಧನೆ ಮಾಡಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿಯನ್ನು ಹೆಚ್ಚಿಸಿದ್ದಾರೆ. ಅದಕ್ಕಿಂತ ಹೆಚ್ಚಾಗಿ ಭಾರತದಲ್ಲಿ ಟೆನಿಸ್‌ ಅಲೆ ಏಳಲು ಕಾರಣರಾಗಿದ್ದಾರೆ. ಯುವ ಕ್ರೀಡಾಪಟುಗಳಿಗೆ ಸ್ಫೂರ್ತಿಯಾಗಿದ್ದಾರೆ.

ಇಲ್ಲಿಯವರೆಗೆ ಸಾನಿಯಾ ಮಹಿಳಾ ಡಬಲ್ಸ್‌ನಲ್ಲಿ 3 ಗ್ರ್ಯಾನ್‌ಸ್ಲಾಮ್‌, ಮಿಶ್ರ ಡಬಲ್ಸ್‌ನಲ್ಲಿ 3 ಗ್ರ್ಯಾನ್‌ಸ್ಲಾಮ್‌ ಪಡೆದಿದ್ದಾರೆ. ಡಬಲ್ಸ್‌ನಲ್ಲಿ ವಿಶ್ವ ನಂ.1 ಶ್ರೇಯಾಂಕವನ್ನು ಪಡೆದಿದ್ದಾರೆ. ಆದರೆ ಇತ್ತೀಚೆಗೆ ನೀಡಿದ ಕಳಪೆ ಪ್ರದರ್ಶನದಿಂದ ಶ್ರೇಯಾಂಕದಲ್ಲಿ ಅಗ್ರ 10 ರಿಂದ ಹೊರಬಿದ್ದಿದ್ದಾರೆ. ಇದಕ್ಕೆ ಮಂಡಿ ನೋವಿನ ಗಾಯವೇ ಪ್ರಮುಖ ಕಾರಣವಾಗಿದೆ. ಸಾನಿಯಾ ಎಂಬ ಸುಂದರಿ ಆದಷ್ಟು ಬೇಗ ಮಂಡಿ ನೋವಿನಿಂದ ಹೊರಬಂದು ಮತ್ತೆ ಟೆನಿಸ್‌ ಅಂಗಳದಲ್ಲಿ ಮಿಂಚಲಿ ಎದು ಬಯಸೋಣ.

Advertisement
Advertisement

Udayavani is now on Telegram. Click here to join our channel and stay updated with the latest news.

Next