ಅಡಿಲೇಡ್ : ಭಾರತದ ಸ್ಟಾರ್ ಆಟಗಾರ್ತಿ ಸಾನಿಯಾ ಮಿರ್ಜಾ ಮತ್ತು ಉಕ್ರೇನಿನ ನಾದಿಯ ಕಿಚೆನೋಕ್ ಜೋಡಿ “ಅಡಿಲೇಡ್ ಇಂಟರ್‌ನ್ಯಾಶನಲ್ ಟೆನಿಸ್’ ಕೂಟದ ಸೆಮಿಫೈನಲ್ ಪ್ರವೆಶಿಸಿದೆ.
ಗುರುವಾರ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಇಂಡೋ-ಉಕ್ರೇನಿಯನ್ ಜೋಡಿ ಅಮೆರಿಕದ ಶೆಲ್ಬಿ ರೋಜರ್ ಮತ್ತು ಇಂಗ್ಲೆಂಡ್‌ನ ಹೀದರ್ ವ್ಯಾಟ್ಸನ್ ಜೋಡಿಯನ್ನು ಭಾರೀ ಹೋರಾಟದ ಬಳಿಕ 6-0, 1-6, 10-5 ಅಂತರದಿಂದ ಹಿಮ್ಮೆಟ್ಟಿಸುವಲ್ಲಿ ಯಶಸ್ವಿಯಾಯಿತು.
ಸೆಮಿಫೈನಲ್‌ನಲ್ಲಿ ಸಾನಿಯಾ-ಕಿಚೆನೋಕ್ ಆಸ್ಟ್ರೇಲಿಯದ ಬಲಿಷ್ಠ ಜೋಡಿಯಾದ ಆ್ಯಶ್ಲೇ ಬಾರ್ಟಿ-ಸ್ಟ್ರೋಮ್ ಸ್ಯಾಂಡರ್ ವಿರುದ್ಧ ಸೆಣಸಲಿದ್ದಾರೆ.
ಇದನ್ನೂ ಓದಿ : ಪ್ರಧಾನಿ ಭದ್ರತಾ ಲೋಪ ಪ್ರಕರಣ : ಇದು ಗಂಭೀರ ಪ್ರಕರಣ ; ರಾಷ್ಟ್ರಪತಿ ಕಳವಳ