ಮೆಲ್ಬರ್ನ್: ಭಾರತದ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ ಅವರ ಗ್ರ್ಯಾಂಡ್ ಸ್ಲ್ಯಾಮ್ ಪಯಣ ಅಂತ್ಯವಾಗಿದೆ. ಆಸ್ಟ್ರೇಲಿಯನ್ ಓಪನ್ ಕೂಟದ ಮಿಶ್ರ ಡಬಲ್ಸ್ ಫೈನಲ್ ಪಂದ್ಯದಲ್ಲಿ ಸೋತ ಸಾನಿಯಾ ಮಿರ್ಜಾ, ರನ್ನರ್ ಅಪ್ ಪ್ರಶಸ್ತಿಯೊಂದಿಗೆ ತನ್ನ ಸುದೀರ್ಘ ಗ್ರ್ಯಾಂಡ್ ಸ್ಲ್ಯಾಮ್ ಪ್ರಯಾಣ ಅಂತ್ಯವಾಯಿತು.
ಮಿಶ್ರ ಡಬಲ್ಸ್ ಫೈನಲ್ ನಲ್ಲಿ ಸಾನಿಯಾ ಮಿರ್ಜಾ- ರೋಹನ್ ಬೋಪಣ್ಣ ಜೋಡಿಯು ಬ್ರೆಜಿಲಿಯನ್ ಜೋಡಿಯಾದ ಲೂಯಿಸಾ ಸ್ಟೆಫಾನಿ ಮತ್ತು ರಾಫೆಲ್ ಮ್ಯಾಟೋಸ್ ವಿರುದ್ಧ 6-7 (2-6), 2-6 ನೇರ ಸೆಟ್ ಗಳ ಅಂತರದ ಸೋಲನುಭವಿಸಿದರು.
ಇದನ್ನೂ ಓದಿ:ಶ್ರೀಬಂಡೆ ಮಹಾಂಕಾಳಿ ದೇವಸ್ಥಾನದಲ್ಲಿ ಆರಂಭವಾಯಿತು ಆದಿತ್ಯ ಅಭಿನಯದ “ಟೆರರ್”
36 ವರ್ಷ ವಯಸ್ಸಿನ ಸಾನಿಯಾ ಗೆಲುವಿನೊಂದಿಗೆ ಪಯಣ ಅಂತ್ಯಗೊಳಿಸಲು ಬಯಸಿದ್ದರು. ಆದರೆ ಧೀರ ಪ್ರಯತ್ನಗಳ ಹೊರತಾಗಿಯೂ ಅದು ಸಾಧ್ಯವಾಗಲಿಲ್ಲ. ಅವರು ತಮ್ಮ ಸುಪ್ರಸಿದ್ಧ ವೃತ್ತಿಜೀವನದಲ್ಲಿ ಆರು ಡಬಲ್ಸ್ ಪ್ರಶಸ್ತಿಗಳನ್ನು ಜಯಿಸಿದ್ದರು.