Advertisement

ಒಸ್ಟ್ರಾವಾ ಓಪನ್‌ ಟೆನಿಸ್‌:ಸಾನಿಯಾ-ಶುಯಿ ಜೋಡಿಗೆ ಪ್ರಶಸ್ತಿ

11:19 PM Sep 26, 2021 | Team Udayavani |

ಒಸ್ಟ್ರಾವಾ (ಜೆಕ್‌ ಗಣರಾಜ್ಯ): ಭಾರತದ ಸ್ಟಾರ್‌ ಆಟಗಾರ್ತಿ ಸಾನಿಯಾ ಮಿರ್ಜಾ ಪ್ರಸಕ್ತ ಋತುವಿನ ಮೊದಲ ಟೆನಿಸ್‌ ಪ್ರಶಸ್ತಿಯನ್ನೆತ್ತಿ ಸಂಭ್ರಮಿಸಿದ್ದಾರೆ. ಚೀನದ ಶುಯಿ ಜಾಂಗ್‌ ಜತೆಗೂಡಿದ ಅವರು “ಒಸ್ಟ್ರಾವಾ ಓಪನ್‌’ ವನಿತಾ ಡಬಲ್ಸ್‌ ಟೆನಿಸ್‌ ಪ್ರಶಸ್ತಿ ಗೆದ್ದರು.

Advertisement

ರವಿವಾರ ನಡೆದ ಫೈನಲ್‌ನಲ್ಲಿ ಸಾನಿಯಾ-ಶುಯಿ ಅಮೆರಿಕದ ಕ್ಯಾಥಿನ್‌ ಕ್ರಿಸ್ಟಿಯಾನ್‌-ನ್ಯೂಜಿಲ್ಯಾಂಡಿನ ಎರಿನ್‌ ವಿರುದ್ಧ 6-3, 6-2 ಅಂತರದ ನೇರ ಸೆಟ್‌ ಗೆಲುವು ದಾಖಲಿಸಿದರು. ಇದು ಡಬ್ಲ್ಯುಟಿಎ 500 ವಿಭಾಗದ ಕೂಟವಾಗಿದೆ.

ಇದನ್ನೂ ಓದಿ:ಶಿಕ್ಷಕರ ಅರ್ಹತಾ ಪರೀಕ್ಷೆ : ಬ್ಲೂಟೂತ್‌ ಶೂ ಧರಿಸಿ ಮೋಸ ಮಾಡುವ ಯತ್ನ

ಇದು ಸಾನಿಯಾ ಕಂಡ ಈ ವರ್ಷದ ದ್ವಿತೀಯ ಫೈನಲ್‌ ಆಗಿದೆ. ಕಳೆದ ತಿಂಗಳು ಕ್ರಿಸ್ಟಿನಾ ಮೆಕಾಲೆ ಜತೆಗೂಡಿ ಕ್ಲೀವ್‌ಲ್ಯಾಂಡ್‌ ಡಬ್ಲ್ಯುಟಿಎ 250 ಕೂಟದ ಪ್ರಶಸ್ತಿ ಸುತ್ತು ಪ್ರವೇಶಿಸಿ ರನ್ನರ್‌ ಅಪ್‌ ಆಗಿದ್ದರು.

 

Advertisement

 

Advertisement

Udayavani is now on Telegram. Click here to join our channel and stay updated with the latest news.

Next