Advertisement
ಸಾನಿಯಾ-ಪೆಂಗ್ ಇನ್ನು ದ್ವಿತೀಯ ಶ್ರೇಯಾಂಕದ ಮಾರ್ಟಿನಾ ಹಿಂಗಿಸ್ (ಸಿಟ್ಸರ್‌ಲ್ಯಾಂಡ್)-ಯುಂಗ್ ಜಾನ್ ಚಾನ್ (ಚೈನೀಸ್ ತೈಪೆ) ವಿರುದ್ಧ ಸೆಣಸಲಿದ್ದಾರೆ. ಇನ್ನೊಂದು ಡಬಲ್ಸ್‌ನಲ್ಲಿ ಇವರು ಹಾವೊ ಚಿಂಗ್ ಚಾನ್ (ಚೈನೀಸ್ ತೈಪೆ)-ಶುಯಿ ಜಾಂಗ್ (ಚೀನ) ವಿರುದ್ಧ 6-2, 6-2 ಅಂತರದ ಸುಲಭ ಜಯ ಸಾಧಿಸಿದರು.ಇದು ಈ ವರ್ಷದ ಗ್ರ್ಯಾನ್‌ಸ್ಲಾಮ್ ಕೂಟದಲ್ಲಿ ಸಾನಿಯಾ ಮಿರ್ಜಾ ಅವರ ಅತ್ಯುತ್ತಮ ಸಾಧನೆಯಾಗಿದೆ. ಹಿಂದಿನ ಮೂರೂ ಗ್ರ್ಯಾನ್‌ಸ್ಲಾಮ್‌ಗಳಲ್ಲಿ ಅವರು ಬೇರೆ ಬೇರೆ ಆಟಗಾರ್ತಿಯರ ಜತೆ ಕಣಕ್ಕಿಳಿದಿದ್ದರು. ಆಸ್ಟ್ರೇಲಿಯನ್ ಓಪನ್‌ನಲ್ಲಿ ಬಾಬೊìರಾ ಸ್ಟ್ರೈಕೋವಾ, ಫ್ರೆಂಚ್ ಓಪನ್‌ನಲ್ಲಿ ಯರೋಸ್ಲಾವಾ ಶ್ವೆಡೋವಾ, ವಿಂಬಲ್ಡನ್‌ನಲ್ಲಿ ಕಿರ್ಸ್ಟನ್ ಫ್ಲಿಪ್‌ಕೆನ್ಸ್ ಜತೆ ಆಡಲಿಳಿದ್ದಿರು. ಕ್ರಮವಾಗಿ 3ನೇ, ಮೊದಲ ಹಾಗೂ 3ನೇ ಸುತ್ತಿನಲ್ಲೇ ಸೋಲಿನ ಆಘಾತ ಅನುಭವಿಸಿದ್ದರು.