Advertisement

ಸಿಂಧು, ಜೋಶ್ನಾಗೆ ಆಂಟಿಯರು ಎಂದ ಸಾನಿಯಾ!

06:00 AM Dec 03, 2018 | |

ಹೈದರಾಬಾದ್‌: ತಿಂಗಳ ಹಿಂದಷ್ಟೇ ಗಂಡು ಮಗುವಿಗೆ ಜನ್ಮ ನೀಡಿರುವ ಭಾರತದ ಖ್ಯಾತ ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಸದ್ಯ ಸಾಮಾಜಿಕ ತಾಣದಲ್ಲಿ ಸುದ್ದಿಯಾಗಿದ್ದಾರೆ. 

Advertisement

ಅದೂ ಒಂದು ಸ್ವಾರಸ್ಯಕರ ಕಾರಣದಿಂದ. ಸಾನಿಯಾ ಮಗು ಇಜಾನ್‌ನನ್ನು ನೋಡಲು ತೆರಳಿದ್ದ ಬ್ಯಾಡ್ಮಿಂಟನ್‌ ತಾರೆ ಪಿ.ವಿ.ಸಿಂಧು, ಸ್ಕ್ವಾಷ್‌ ತಾರೆ ಜೋಶ್ನಾ ಚಿನ್ನಪ್ಪರೊಂದಿಗೆ ಒಂದು ಸೆಲ್ಫಿà ಪ್ರಕಟಿಸಿರುವ ಸಾನಿಯಾ, ಚಿತ್ರಬರಹದಲ್ಲಿ ಇಬ್ಬರನ್ನೂ ಆಂಟಿ ಎಂದು ಕರೆದಿದ್ದಾರೆ. 

ಸಾನಿಯಾ ತಮಾಷೆಯಾಗಿ ಇಬ್ಬರನ್ನೂ ಆಂಟಿಯರೆಂದು ಕರೆದಿರುವುದು ಸಾಮಾಜಿಕ ತಾಣದಲ್ಲಿ ಹಾಸ್ಯರಸಿಕರ ಗಮನ ಸೆಳೆದಿದೆ. ಮುಂದೆ ಈ ಇಬ್ಬರು ತಾರೆಯರನ್ನು ಇಜಾನ್‌ ಆಂಟಿ ಎಂದು ಕರೆಯುವ ಸಾಧ್ಯತೆಯಿರುವುದರಿಂದ ಸಾನಿಯಾ ಹೀಗೆಂದು ಸಂಬೋಧಿಸಿರಬಹುದೆಂದು ಊಹಿಸಲಾಗಿದೆ.
 

Advertisement

Udayavani is now on Telegram. Click here to join our channel and stay updated with the latest news.

Next