Advertisement
ಸೋಮವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಾಹಿತಿ ಹಕ್ಕು ಮೇಲ್ಮನವಿ ಪ್ರಾಧಿಕಾರದಲ್ಲಿ ಬಾಕಿಯಿರುವ ಪ್ರಕರಣಗಳ ವಿಚಾರಣೆ ನಡೆಸಿದ ಅವರು, ಸಂಘ-ಸಂಸ್ಥೆಯಡಿ ಇಲ್ಲದೇ ನಾಗರಿಕರು ಅರ್ಜಿ ಸಲ್ಲಿಸಬಹುದಾಗಿದೆ. ಮಾಹಿತಿ ಹಕ್ಕುಕಾಯ್ದೆ ಅಡಿ ಅರ್ಜಿ ಸಲ್ಲಿಸುವರು ಪ್ರಮುಖವಾಗಿ ಸಾರ್ವಜನಿಕ ಹಿತಾಸಕ್ತಿ ಹೊಂದಿರಬೇಕು. ಬೇರೆ ಯಾವುದೇ ದೃಷ್ಟಿ ಹೊಂದಿರಬಾರದು. ಯಾವುದೇ ವ್ಯಕ್ತಿಯನ್ನು ಗುರಿಯಾಗಿಸಬಾರದು. ಜತೆಗೆ ಅಧಿಕಾರಿಯ ವೈಯಕ್ತಿಕ ಮಾಹಿತಿ, ಜಾತಿ ಹಾಗೂ ಶೈಕ್ಷಣಿಕ ಅರ್ಹತೆ ಕೇಳುವುದನ್ನು ಹೊಂದಿರಬಾರದು ಎಂದರು.
Related Articles
Advertisement
ರಾಜ್ಯದಲ್ಲಿ ಬೆಂಗಳೂರು ಮಹಾನಗರಪಾಲಿಕೆ, ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನಲ್ಲಿ ಹೆಚ್ಚಿನ ನಿಟ್ಟಿನಲ್ಲಿ ಮಾಹಿತಿ ಹಕ್ಕು ಕಾಯ್ದೆ ಅಡಿ ಅರ್ಜಿಗಳು ಸಲ್ಲಿಕೆಯಾದರೆ ನಂತರ ಶೇ. 50ರಷ್ಟು ಮಾಹಿತಿಗಳು ಕಂದಾಯ ಇಲಾಖೆಗೆ ಬಂಧಿಸಿದ್ದಾಗಿರುತ್ತವೆ. ಬೆಂಗಳೂರು ಬಿಟ್ಟರೆ ಬೆಳಗಾವಿ, ರಾಯಚೂರು ಹಾಗೂ ಕಲಬುರಗಿಯಲ್ಲಿ ಹೆಚ್ಚಿನ ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ವಿವರಿಸಿದರು.
ಕಲಬುರಗಿಯಲ್ಲಿ ಸೋಮವಾರ ನಡೆದ ವಿಚಾರಣೆಯಲ್ಲಿ 102 ಅರ್ಜಿಗಳ ಅರ್ಜಿಗಳ ಪೈಕಿ 60ಅರ್ಜಿಗಳನ್ನುಇತ್ಯರ್ಥಪಡಿಸಲಾಯಿತು. ತಹಶೀಲ್ದಾರ್ ದಯಾನಂದ ಪಾಟೀಲ, ಆಯೋಗದ ತೀರ್ಪು ಬರಹಗಾರ ಅಪ್ಪಾಜಿ, ಜಿಲ್ಲಾ ಮಟ್ಟದ ಅಧಿಕಾರಿಗಳು, ಸಿಬ್ಬಂದಿ, ದೂರುದಾರರು ಹಾಜರಿದ್ದರು.
ಮಾಹಿತಿ ಹಕ್ಕು ಕಾಯ್ದೆ ಉತ್ತಮವಾಗಿದೆ. ಇದು ದುರ್ಬಳಕೆ ಆಗಬಾರದು ಎನ್ನುವುದು ಆಯೋಗದ ಆಶಯ. ಅಧಿಕಾರಿಗಳು ಅರ್ಜಿಗೆ ಸಕಾಲದಲ್ಲಿ ಸಮರ್ಪಕ ಮಾಹಿತಿ ನೀಡಬೇಕು. ಕೆಲವು ಅರ್ಜಿಗಳು ಕ್ರಮಬದ್ಧವಾಗಿರದ ಕಾರಣ ಸಮರ್ಪಕ ಉತ್ತರ ಸಿಗುತ್ತಿಲ್ಲ. ದುರ್ಬಳಕೆ ಹಿನ್ನೆಲೆಯಲ್ಲಿ ಕೆಲ ಅಧಿಕಾರಿಗಳು ಮಾಹಿತಿ ನೀಡದೇ ದಂಡ ತುಂಬುತ್ತಿದ್ದಾರೆ. ಹೀಗಾಗಬಾರದು. ಡಾ| ಸುಚೇತನ ಸ್ವರೂಪ, ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮುಖ್ಯ ಮಾಹಿತಿ ಆಯುಕ್ತ