Advertisement

ಸಂಘದಿಂದ ‘RSS ಸೇರಿ’ಅಭಿಯಾನ

09:20 AM Apr 30, 2018 | Team Udayavani |

ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವ ಸಂಘವು (RSS) ತನ್ನ ವೆಬ್‌ ಸೈಟ್‌ ನಲ್ಲಿ ‘RSSಗೆ ಸೇರ್ಪಡೆಗೊಳ್ಳಿ’ ಎಂಬ ಕಾರ್ಯಕ್ರಮವನ್ನು ಆರಂಭಿಸಿದ್ದು, ಅದರ ಫ‌ಲವಾಗಿ ಪ್ರತಿ ತಿಂಗಳು 10 ಸಾವಿರದಷ್ಟು ಯುವಕರು RSSಗೆ ಸೇರಿಕೊಂಡಿದ್ದಾರೆ. ಹೀಗೆಂದು ಸಂಘದ ಹಿರಿಯ ಸದಸ್ಯರೊಬ್ಬರು ಮಾಹಿತಿ ನೀಡಿದ್ದಾರೆ.

Advertisement

ಯುವಜನರಲ್ಲಿ ಸಂಘದ ಅಸ್ತಿತ್ವವನ್ನು ಕಂಡುಕೊಳ್ಳುವುದು ಇದರ ಉದ್ದೇಶ ಎಂದು ಅವರು ಹೇಳಿದ್ದಾರೆ. ನಗರ ಪ್ರದೇಶಗಳಲ್ಲಿ ತಮ್ಮ ಕಾರ್ಯಕರ್ತರನ್ನು ‘ಅಪಾರ್ಟ್‌ಮೆಂಟ್‌ ಪ್ರಮುಖ್‌’ ಎಂದು ನೇಮಕ ಮಾಡಲಾಗುತ್ತಿದೆ. ಅವರು ಆ ನಿರ್ದಿಷ್ಟ ಪ್ರದೇಶಗಳಲ್ಲಿ ಶಾಖೆಗಳನ್ನು ಆಯೋಜಿಸುತ್ತಾರೆ. ಸಾಮಾಜಿಕ ಕೆಲಸದಲ್ಲಿ ಹೆಚ್ಚು ಹೆಚ್ಚು ಮಂದಿಯನ್ನು ತೊಡಗಿಸಿಕೊಳ್ಳುವಂತೆ ಮಾಡಿ, ಹೊಸ ಬದಲಾವಣೆ ತರುವುದೂ ಸಂಘದ ಗುರಿ ಎಂದೂ ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next