Advertisement

ನಿರುದ್ಯೋಗ ಸಮಸ್ಯೆ ನಿವಾರಣೆಗೆ ಸಂಘ-ಸಂಸ್ಥೆಗಳು ಶ್ರಮಿಸಲಿ

04:59 PM Mar 12, 2018 | |

ಯಾದಗಿರಿ: ಉದ್ಯೋಗ ಮೇಳದಿಂದ ಮಾತ್ರ ನಿರುದ್ಯೋಗ ಸಮಸ್ಯೆ ನಿವಾರಣೆ ಸಾಧ್ಯ. ಆದ್ದರಿಂದ ಫೌಂಡೇಷನ್‌ ವತಿಯಿಂದ ಪ್ರತಿ ವರ್ಷ ಉದ್ಯೋಗ ಮೇಳ ನಡೆಸುತ್ತಿದ್ದೇವೆ ಎಂದು ಡಾ| ಭೀಮಣ್ಣ ಮೇಟಿ ಫೌಂಡೇಶನ್‌ ಸಂಸ್ಥಾಪಕ
ಹಾಗೂ ಡಿಡಿಯು ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಅಧ್ಯಕ್ಷ ಡಾ| ಭೀಮಣ್ಣ ಮೇಟಿ ಹೇಳಿದರು.

Advertisement

ನಗರದ ಡಿಡಿಯು ಇಂಟರ್‌ ನ್ಯಾಷನಲ್‌ ಸ್ಕೂಲ್‌ನಲ್ಲಿ ರಾಜ್ಯಮಟ್ಟದ ಬೃಹತ್‌ ಖಾಸಗಿ ಪ್ರಾಥಮಿಕ, ಪ್ರೌಢಶಾಲೆ ಹಾಗೂ ಕಾಲೇಜು ಶಿಕ್ಷಕರ ಹುದ್ದೆಗಳ ನೇಮಕಾತಿ ಉದ್ಯೋಗ ಮೇಳ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಖಾಸಗಿ ಪ್ರಾಥಮಿಕ, ಪ್ರೌಢ, ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ, ಶಿಕ್ಷಕರೇತರ ಸಿಬ್ಬಂದಿಗಳ ಹುದ್ದೆಗಳಿಗೆ ಭರ್ತಿ ಮಾಡಲಾಗುವುದು. ಇದರಿಂದ ನಿರುದ್ಯೋಗಿಗಳಿಗೆ ಉದ್ಯೋಗ ದೊರೆಯುತ್ತದೆ ಜೊತೆಗೆ ಈ ಉದ್ಯೋಗ
ಮೇಳದಿಂದ ಶೈಕ್ಷಣಿಕ ಸಂಸ್ಥೆಗಳಲ್ಲಿನ ಖಾಲಿ ಹುದ್ದೆ ತುಂಬಲು ಸಂಸ್ಥೆಗಳ ಮುಖ್ಯಸ್ಥರಿಗೆ ಸಹಕಾರಿ ಆಗಲಿದೆ ಎಂದರು.

ವಿಷಯ ಮಂಡನೆ ಒಂದು ಕೌಶಲ್ಯವಾಗಿದ್ದು, ತಜ್ಞರು ವಿಷಯದ ಕುರಿತು ಉತ್ತಮ ಪಾಂಡಿತ್ಯ ಹೊಂದಿದ್ದರೂ ಅದನ್ನು ವಿದ್ಯಾರ್ಥಿಗಳಿಗೆ ಮುಟ್ಟಿಸುವಲ್ಲಿ ವಿಫಲರಾಗುತ್ತಾರೆ. ವಿಷಯ ಜ್ಞಾನ ಕಡಿಮೆ ಇದ್ದರೂ ತಮ್ಮ ಸಂವಾಹನ
ಹಾಗೂ ಬೋಧನಾ ಕೌಶಲ್ಯದ ಮೂಲಕ ವಿಷಯವನ್ನು ಪರಿಣಾಮಕಾರಿಯಾಗಿ ಅರ್ಥ ಮಾಡಿಸುವವರೇ ನಿಜವಾದ ಶಿಕ್ಷಕರು ಎಂದರು.

ಉದ್ಯೋಗ ಮೇಳದಲ್ಲಿ ಮಂಗಿಲಾಲ್‌ ಜೈನ್‌ ಸ್ಕೂಲ್‌, ಶ್ರೀ ಗುರು, ವಿದ್ಯಾನಿಕೇತನ ಸೇರಿದಂತೆ 50ಕ್ಕೂ ಹೆಚ್ಚು ಶಿಕ್ಷಣ ಸಂಸ್ಥೆಗಳು ಭಾಗವಹಿಸಿದ್ದು, ಸಾವಿರಕ್ಕೂ ಹೆಚ್ಚು ಉದ್ಯೋಗಾಕಾಂಕ್ಷಿಗಳು ಆಗಮಿಸಿದ್ದಾರೆ ಎಂದರು.

Advertisement

ಉದ್ಯೋಗ ಮೇಳದಲ್ಲಿ ಕೇರಳದ ಉದ್ಯೋಗ ಏಜೆನ್ಸಿ ಮುಖ್ಯಸ್ಥ ಸಿಜೋ ಮಾತನಾಡಿ, ದೇಶದ ಪ್ರಗತಿ ಹಾಗೂ
ಅಭಿವೃದ್ಧಿಗೆ ಯುವ ಶಕ್ತಿ ಪ್ರಮುವಾಗಿದ್ದು, ಉದ್ಯೋಗ ಮೇಳದಿಂದ ನಿರುದ್ಯೋಗಿಗಳಿಗೆ ಹೆಚ್ಚು ಲಾಭ ದೊರೆಯಲಿದೆ ಎಂದರು. 

ಮೇಳದಲ್ಲಿ ಉದ್ಯೋಗ ದೊರೆಯದವರು ನಿರಾಶರಾಗಬಾರದು ಆತ್ಮಸ್ಥೈರ್ಯದಿಂದ ಮುನ್ನುಗ್ಗಬೇಕು ಎಂದ ಅವರು, ಡಾ| ಭೀಮಣ್ಣ ಮೇಟಿ ಫೌಂಡೇಶನ್‌ ಬೃಹತ್‌ ಉದ್ಯೋಗ ಮೇಳ ಹಮ್ಮಿಕೊಂಡಿರುವುದು ಶ್ಲಾಘನೀಯ ಎಂದರು. ಮೇಳದಲ್ಲಿ ಶಾಂತಿ ಸದನ ಶಾಲೆಯ ಕಾರ್ಯದರ್ಶಿ ಬಸವಂತರೆಡ್ಡಿ, ಡಿಡಿಯು ಇಂಟರ್‌ ನ್ಯಾಷನಲ್‌ ಸ್ಕೂಲ್‌ನ ಆಡಳಿತ ಮಲ್ಲಿಕಾರ್ಜುನ ಮೇಟಿ, ಡಿ.ಎಸ್‌. ಪಾಟೀಲ್‌ ಇದ್ದರು. 

Advertisement

Udayavani is now on Telegram. Click here to join our channel and stay updated with the latest news.

Next