Advertisement
ಚಾರ್ಲಿ’ ನಂತರ ಹೇಗಿದೆ ಲೈಫ್?
Related Articles
Advertisement
ಪ್ರಚಾರದ ಸಮಯದಲ್ಲಿ ಹೊರ ರಾಜ್ಯಗಳಲ್ಲಿ ಸುತ್ತಿದ್ದೀರಿ. ಹೇಗಿತ್ತು ಅನುಭವ?
– ಚಿತ್ರದ ಪ್ರಚಾರಕ್ಕಾಗಿ ಬೇರೆ ಬೇರೆ ರಾಜ್ಯಗಳಿಗೆ ತೆರಳಿದ್ದೆವು. ನಾನು ಚಿತ್ರರಂಗಕ್ಕೆ ಹೊಸಬಳು. ನನ್ನ ಬಗ್ಗೆ ಅವರಿಗೆ ಅಷ್ಟು ಗೊತ್ತಿರಲ್ಲಾ ಅಂತಾ ಅಂದುಕೊಂಡಿದ್ದೇ, ಆದರೆ ಪತ್ರಕರ್ತರ ಕೈಯಲ್ಲಿ ನನ್ನ ಜಾತಕವೇ ಇತ್ತು! ನನ್ನ ಹಿನ್ನೆಲೆ, ಅಪ್ಪ -ಅಮ್ಮ, ನಟನೆ ಬಗ್ಗೆ ಎಲ್ಲವೂ ತಿಳಿದ್ದರು. ಇದು ತುಂಬಾ ಆಶ್ಚರ್ಯ ಅನಿಸಿತ್ತು. ಹೊರ ರಾಜ್ಯಗಳಲ್ಲಿ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ದೊರೆಯುವುದರ ಜೊತೆಗೆ ಜನರಿಗೆ ಪರಿಚಯವಾಗಿದ್ದು ಸಂತಸ ತಂದಿದೆ.
ಸಾಲು ಸಾಲು ಚಿತ್ರಗಳು ತೆರೆಗೆ ರೆಡಿಯಾಗಿವೆಯಲ್ಲ?
– ಹೌದು, “ಚಾರ್ಲಿ ನಂತರ ಮೂರು ಚಿತ್ರಗಳು ರಿಲೀಸ್‌ಗೆ ರೆಡಿಯಾಗಿದೆ. ಈ ಮೊದಲು ನಟಿಸಿದ್ದ ಎಸ್ ಮಹೇಂದ್ರ ಅವರ “ಪಂಪ’ ಚಿತ್ರ ಆಗಸ್ಟ್‌ನಲ್ಲಿ ರಿಲೀಸ್ ಆಗಲಿದೆ. ಹಾಗೆ “ಲಕ್ಕಿ ಮ್ಯಾನ್’ ಕೂಡಾ ಆಗಸ್ಟ್ ನಲ್ಲಿ ತೆರೆಗೆ ಬರಲಿದ್ದು, “ಮಾರಿಗೋಲ್ಡ್ ‘ ಕೂಡಾ ಆಗಸ್ಟ್ ತಿಂಗಳ ಕೊನೆಗೆ ತೆರೆಗೆ ಬರುವ ನಿರೀಕ್ಷೆ ಇದೆ.
ಉತ್ತಮ ನಟಿಯಾಗುವ ಹಂಬಲ
ಸಾಮಾನ್ಯವಾಗಿ ನಟಿಯರಿಗೆ ಭಿನ್ನ ಭಿನ್ನ ಗೆಟಪ್‌ನಲ್ಲಿ ಕಾಣಿಸಿಕೊಳ್ಳುವ ಆಸೆ. ಆದರೆ ಸಂಗೀತಾ, “ಸದ್ಯ ನಾನು ಮಾಡಿರುವ ಎಲ್ಲಾ ಚಿತ್ರಗಳಲ್ಲೂ ವಿಭಿನ್ನ ಪಾತ್ರಗಳಲ್ಲಿ ನಟಿಸಿದ್ದು, ಗೆಟಪ್‌ಗಿಂತ ಪಾತ್ರ ಮುಖ್ಯ’ ಅನ್ನುತ್ತಾರೆ. ಒಂದು ಚಿತ್ರದಲ್ಲಿ ಕನ್ನಡಪರ ಕಾಲೇಜು ಹುಡುಗಿಯಾಗಿ ನಟಿಸಿದ್ದು, ಮತ್ತೂಂದರಲ್ಲಿ ಪಕ್ಕಾ ಫ್ಯಾಮಿಲಿ ಹುಡುಗಿಯಾಗಿ ಅಭಿನಯಿಸಿದ್ದಾರೆ. ಹೀಗೆ ಭಿನ್ನ ಪಾತ್ರಗಳಲ್ಲಿ ಗುರುತಿಸಿಕೊಳ್ಳಲು ಇಷ್ಟ ಪಡುವ ಸಂಗೀತಾ, ಚಿತ್ರರಂಗದಲ್ಲಿ ಕೇವಲ ನಾಯಕಿಯಾಗಿ ಅಲ್ಲ ಉತ್ತಮ ನಟಿಯಾಗಿ ಬೆಳೆಯಬೇಕು ಎಂಬ ಆಸೆ ಹೊಂದಿದ್ದಾರೆ.
ಸಾಕು ನಾಯಿ ಸತ್ತಾಗ ಡಿಪ್ರಶನ್‌ಗೆ ಹೋಗಿದ್ದೆ…
ಚಾರ್ಲಿ ಚಿತ್ರದಲ್ಲಿ ಎನಿಮಲ್ ವೆಲ್‌ಫೇರ್ ಅಧಿಕಾರಿಯಾಗಿ ಪಾತ್ರ ನಿರ್ವಹಿಸಿರುವ ಸಂಗೀತಾ, ನಿಜ ಜೀವನದಲ್ಲೂ ಪ್ರಾಣಿ ಪ್ರೇಮಿಯಂತೆ. ಶಾಲಾ ದಿನಗಳಿಂದಲೂ ಬೀದಿಯಲ್ಲಿ ಸಿಕ್ಕ ನಾಯಿಗಳನ್ನು ತಂದು, ಕದ್ದು ಮುಚ್ಚಿ ಸಾಕುತ್ತಿದ್ದರಂತೆ. ಇತ್ತೀಚೆಗೂ ಬೀದಿ ನಾಯಿ ಸಾಕಿದ್ದರು. ಎರಡು ಬಾರಿ ಅವರ ಸಾಕು ನಾಯಿಗಳು ಖಾಯಿಲೆಯಿಂದ ಮೃತಪಟ್ಟಿತ್ತು. ಸಾಕು ನಾಯಿ ಸಾವಿನ ನೋವಿನಲ್ಲಿ ಡಿಪ್ರಶನ್‌ಗೆ ಓಳಗಾಗಿದ್ದರಂತೆ. ಸಂಗೀತಾ ಪ್ರಾಣಿಗಳ ಮೇಲೆ ಅಪಾರ ಪ್ರೀತಿ ಹೊಂದಿದ್ದಾರೆ.