Advertisement

ಸಂಗೀತ ಎಂಬ ಪೋಷಕಾಂಶ

01:35 PM Sep 15, 2017 | |

ಮಗ ರೋಹನ್‌ ಆಗಾಗ ಬಂದು ಕರೆಯುತ್ತಲೇ ಇದ್ದ. ಲೇಟಾಗಿ ಬಿಡುತ್ತೇನೋ ಅಂತ ಧಾವಂತ. ರಜೆಯಲ್ಲಿ ಎಲ್ಲಾದರೂ ಕರೆದುಕೊಂಡು ಹೋಗುತ್ತೀನಿ ಎಂದಿದ್ದರಂತೆ ಸಂಗೀತಾ. ಹಾಗಾಗಿ ಎಲ್ಲಿ ಮಾತಾಡಿ ಮಾತಾಡಿ ಸಮಯ ಹಾಳು ಮಾಡಿಬಿಡುತ್ತಾರೋ, ಎಲ್ಲಿ ವಾಪಸ್ಸು ಮೆನಗೆ ಕರೆದೊಯ್ಯುತ್ತಾರೋ ಎಂಬ ಭಯ. ಅದೇ ಕಾರಣಕೆ ಹತ್ತು ನಿುಷದಲ್ಲಿ ಹತ್ತು ಬಾರಿಯಾದರೂ ಅವನು ಬಂದು “ಹೋಗೋಣ ಹೋಗೋಣ …’ ಎನ್ನುತ್ತಲೇ ಇದ್ದ. ಅವನಿಗೆ ಸಮಾಧಾನ ಮಾಡುತ್ತಲೇ, ತಾವು ನಡೆದು ಬಂದ ಹಾದಿಯನ್ನು ಸಂಗೀತಾ ವರಿಸುವುದಕ್ಕೆ ಹೊರಟರು.

Advertisement

“ಸುಮಾರು 150 ಚಿತ್ರಗಳಲ್ಲಿ ನಟಿಸಿರಬಹುದು. ನಾನು ಆ ಲಿಸ್ಟ್‌ ಇಟ್ಟಿಲ್ಲ. ನಾನು ಅಭಿನುಸುವ ಚಿತ್ರಗಳ ಲಿಸ್ಟನ್ನು ಅಮ್ಮ ಮಾಡುತ್ತಾರೆ. ನನಗೆ ಎಷ್ಟು ಚಿತ್ರಮಾತೋ ನೆನಪಿಲ್ಲ. ಅದೆಲ್ಲಾ ಚಿತ್ರೀಕರಣವಾದ ಚಿತ್ರಗಳಿರಬಹುದು. ರಿಲೀಸ್‌ ಆಗಿದೆಯೋ, ಬಿಟ್ಟಿದೆಯೋ ನನಗೆ ಗೊತ್ತಿಲ್ಲ …’ ಸಂಗೀತಾ ಅವರೊಂದಿಗೆ ಮಾತು ಶುರುವಾಗಿದ್ದುಗೆ. ಗುಬ್ಬಿ ವೀರಣ್ಣನವರ ಮೊಮ್ಮಗಳಾದ ಸಂಗೀತಾ 90ರ ದಶಕದಲ್ಲಿ ಹಲವು ಚಿತ್ರಗಳಲ್ಲಿ ನಾಯಕಿಯಾಗಿ ನಟಿಸಿದವರು. ಮೊದಲ ಚಿತ್ರ “ಕಾವೇರಿ ತೀರದಲ್ಲಿ’. ನಂತರದ ದಿನಗಳಲ್ಲಿ ಉಪೇಂದ್ರ ನಿರ್ದೇಶನದ “ಆಪರೇಷನ್‌ ಅಂತ’, “ಪೂರ್ಣ ಸತ್ಯ’, “ಸೂರ್ಯ ಪುತ್ರ’ ಗೆ ಕೆಲವು ಚಿತ್ರಗಳಲ್ಲಿ ಸಂಗೀತಾ ನಟಿಸಿದರು. ಆ ನಂತರ ಅವರು ನಟಿಸಲಿಲ್ಲ. ಕಾರಣಾಂತರಗಳಿಂದ ದೂರವೇ ಉಳಿದರು. ಗಂಡ, ಮನೆ, ಮಕ್ಕಳು ಎಂದು ಕಳೆದು ಹೋದರು. ಸೆಕೆಂಡ್‌ ಇನ್ನಿಂಗ್ಸ್‌ನಲ್ಲಿ ಅಕ್ಕ, ಅತ್ತಿಗೆ ಪಾತ್ರ ಮಾಡಿ, ತಾು ಪಾತ್ರಗಳಿಗೂ ಪ್ರಮೋಷನ್‌ ಪಡೆದರು.

“ಅಪ್ಪಂಗೆ ನಾನು ನಟಿಸೋದು ಇಷ್ಟ ಇರಲಿಲ್ಲ. ಅಮ್ಮಂಗೆ ಬಹಳ ಇಷ್ಟ ಇತ್ತು. ನಾನು ಓದಲಿ ಎಂದು ಅಪ್ಪಂಗೆ ಆಸೆ. ಹಾಗಾಗಿ ಚಿತ್ರರಂಗದಿಂದ ದೂರ ಇದ್ದೆ. ಅಪ್ಪ ತೀರಿಕೊಂಡ ಮೇಲೆ ಮತ್ತೆ ಚಿತ್ರರಂಗಕ್ಕೆ ಬಂದೆ. ಹಾಗೆ ಬಂದ ಮೊದಲ ಚಿತ್ರ ದರ್ಶನ್‌ ಅಭಿನಯದ “ಗಜ’. ಅಲ್ಲಿಂದ ಕಂಟಿನ್ಯೂಸ್‌ ಆಗಿ ಚಿತ್ರ ಮಾಡುತ್ತಲೇ ಇದ್ದೀನಿ’ ಎಂದರು ಸಂಗೀತಾ. ನಾಯಕಿ ಪಾತ್ರಕ್ಕಿಂತ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳೋದೇ ಸುಖ ಎಂಬುದು ಸಂಗೀತ ಅಭಿಪ್ರಾಯ. “ನನಗಂಗೂ àರೋುನ್‌ ಪಾತ್ರಗಳಿಗಿಂಥ ಪೋಷಕ ಪಾತ್ರಗಳಲ್ಲಿ ಕಾಣಿಸಿಕೊಳ್ಳೋದೇ ಕಮ್‌ಫ‌ರ್ಟಬಲ್‌. ಅಮ್ಮ, ಅಕ್ಕ, ಅತ್ತಿಗೆ ಎಲ್ಲಾ ತರಹದ ಪಾತ್ರಗಳನ್ನೂ ಮಾಡಿದ್ದೀನಿ ಮತ್ತು ಸ್ಕೋಪ್‌ ಇರುವ ಎಲ್ಲಾ ಪಾತ್ರಗಳೂ ಇಷ್ಟ. ಧಾರಾವಾಗಳಲ್ಲೂ ಅವಕಾಶ ಸಿಗುತ್ತಿದೆ. ಆದರೆ, ದಿನ ಶೂಟಿಂಗ್‌ ಇದ್ದರೆ ಕಷ್ಟ. ಮಗ ಚಿಕ್ಕೋನು. ಅವನ ಕಡೆ ಗಮನ ಹರಿಸೋಕೆ ಆಗಲ್ಲ. ಹಾಗಾಗಿ ನಾನೇ ಸೀರಿಯಲ್‌ ಬೇಡ ಅಂತ ಇದ್ದೀನಿ. ಕಡಿಮೆ ದಿನಗಳ ಪಾತ್ರಗಳು ಬಂದರೆ ನಟಿಸೋಕೆ ಅಭ್ಯಂತರವೇನಿಲ್ಲ. ಆದರೆ, ಲಾಂಗ್‌ ಟರ್ಮ್ ಪಾತ್ರಗಳು ಖು. ಹಾಗಾಗಿ ಇತ್ತೀಚೆಗೆ ಧಾರಾವಾಗಳತ್ತ ಹೋಗುತ್ತಿಲ್ಲ. ಬಟ್‌ ಈಗಿನ ಧಾರಾವಾಗಳನ್ನ ನೋಡಿದರೆ ಖುಯಾಗುತ್ತೆ. ಮೇಕಿಂಗ್‌ ಚೆನ್ನಾಗಿರುತ್ತದೆ. ಆದರೂ ಮಗನ ಕಾರಣಕ್ಕೆ ನನಗೆ ಕಿರುತೆರೆ ಹೋಗೋದಕ್ಕೆ ಆಗುತ್ತಿಲ್ಲ’ ಎನ್ನುತ್ತಾರೆ ಅವರು.

ಇನ್ನು ರಿತೆರೆಯಲ್ಲಿ ಸಾಕಷ್ಟು ಪರಭಾಷಾ ಪೋಷಕ ಕಲಾದರನ್ನು ಕರೆದುಕೊಂಡು ಬರುತ್ತಿರುವ ಬಗ್ಗೆ ಅವರಿಗೂ ಬೇಸರದೆ. “ನಮ್ಮಲ್ಲಿ ಒಳ್ಳೆಯ ಪಾತ್ರಗಳು ಎಂದರೆ, ಪರಭಾಷಾ ನಟಿಯರನ್ನು ಕರೆದುಕೊಂಡು ಬರುತ್ತಾರೆ. ಯಾಕೆ, ನಮಗೆ ಪ್ರತಿಭೆ ಇಲ್ಲವಾ? ನಾವು ಚೆನ್ನಾಗಿಲ್ಲವಾ? ಹಾಗಿದ್ದರೂ ಯಾಕೆ ಒಳ್ಳೆಯ ಪಾತ್ರಗಳನ್ನು ಬೇರೆಯವರಿಗೆ ಕೊಡುತ್ತಾರೋ ಗೊತ್ತಿಲ್ಲ. ಇದು ನನ್ನೊಬ್ಬಳ ಕೊರಗಲ್ಲ. ಎಲ್ಲರಿಗೂ ಬೇಸರದೆ. ಯಾರೂ ಮಾತಾಡುವುದಿಲ್ಲ’ ಎಂದು ನೇರವಾಗಿಯೇ ಹೇಳುತ್ತಾರೆ ಅವರು. ಇನ್ನು ಅವರು ನಾಯಕಿಯಾಗಿ ನಟಿಸುತ್ತಿದ್ದ ದಿನಗಳಲ್ಲಿ ಬೇರೆ ಭಾಷೆಗಳಿಂದ ಆಫ‌ರ್‌ಗಳು ಬರುತ್ತಿದ್ದವಂತೆ. “ಆಗ ಅವಕಾಶಗಳು ಬಂದಾಗಲೆಲ್ಲಾ ಬೇಡ ಅನ್ನಿಸೋದು. ಈಗ ಹಾಗೆ ಮಾಡಬಾರದಿತ್ತು ಅಂತ ಅನಿಸೋದಿದೆ …’ ಆದರೆ, ಏನ್ಮಾಡೋದು ಎನ್ನುವಂತೆ ಎರಡೂ ಕೈಗಳನ್ನು ಮೇಲಕ್ಕೆ ಎತ್ತಿದ್ದರು ಅವರು.

ಸಂಗೀತಾಗೆ ಸದ್ಯಕ್ಕೆ ಕೈತುಂಬಾ ಕೆಲಸದೆ. “ಹೂಮನಸು’, “ಭಲೇ ಹುಚ್ಚ’, “ಭರ್ಜರಿ’, “ಪ್ಲೇ’ ಮುಂತಾದ ಹಲವು ಚಿತ್ರಗಳಲ್ಲಿ ಅವರು ಈಗಾಗಲೇ ನಟಿಸಿದ್ದಾರೆ. ಇನ್ನೊಂದಿಷ್ಟ ಚಿತ್ರಗಳಲ್ಲಿ ನಟ ಮುಂದುವರೆದಿದೆ. “ಬೆಂಗಳೂರಿನಲ್ಲಿ ಚಿತ್ರೀಕರಣ ಆಗುವ ಚಿತ್ರಗಳನ್ನ ಹೆಚ್ಚು ಪ್ರಿಫ‌ರ್‌ ಮಾಡುತ್ತೀನಿ. ಔಟ್‌ಡೋರ್‌ ಆದರೆ ಕಷ್ಟ. ಮುಂಚೆಯೇ ಸರಿಯಾಗಿ ಪ್ಲಾನ್‌ ಮಾಡಿಕೊಂಡರೆ ಹೋಗಬಹುದು. ಇಲ್ಲ ಔಟ್‌ಡೋರ್‌ ಚಿತ್ರೀಕರಣ ಬಹಳ ಕಷ್ಟ. ಅದರಲ್ಲೂ ಚಿಕ್ಕವನಿಗಿಂಥ ದೊಡ್ಡವನ ಬಗ್ಗೆ ಹೆಚ್ಚು ಯೋಚನೆ. ನಾನು ಇಲ್ಲ ಎಂದರ ಟ್ಯೂಷನ್‌ ಸ್ಕಿಪ್‌ ಮಾಡುತ್ತಾನೆ. ಹೇಗೋ ಕಟಿಂಗ್‌ ಮಾಡಿಸುತ್ತಾನೆ. ಅವನ ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ’ ಎಂದರು ಸಂಗೀತಾ. ಅಷ್ಟರಲ್ಲಿ ರಿಯ ಮಗ ನಿಖೀಲ್‌ ಕಾಣಿಸಿಕೊಂಡ. ಫ‌ಂಕಿ ಕಟಿಂಗ್‌ ಮಾಡಿಸಿಕೊಂಡಿದ್ದ ಅವನು, ಅಮ್ಮ ತನ್ನ ಬಗ್ಗೆ ಚಾಡಿ ಹೇಳುತ್ತಿರುವುದನ್ನು ಕೇಳಿ ಟೆನ್ಶನ್‌ನಲ್ಲಿ ನೋಡುತ್ತಿದ್ದ. “ನೋಡಿ ಇವನೇ ಮೊದಲ ಮಗ. ಹೇಗೆ ಕಟಿಂಗ್‌ ಮಾಡಿಸಿದ್ದಾನೆ. ಡೀಸೆಂಟ್‌ ಆಗಿ ಇರು ಅಂತ ಯಾವಾಗಲೂ ಹೇಳುತ್ತಿರುತ್ತೀನಿ’ ಎಂದು ಮತ್ತೂಮ್ಮೆ ಮುನಿಸು ತೋರಿದರು ಅಮ್ಮ. ಪತಿ ಅನಿಲ್‌ ನಗುತ್ತಿದ್ದರು.

Advertisement

ಗುಬ್ಬಿ ಫ್ಯಾುಲಿಯಲ್ಲಿ ಸಾಕಷ್ಟು ಕುಡಿಗಳು ನಿರ್ಮಾಣ ಮತ್ತು ನಿರ್ದೇಶನದಲ್ಲಿ ತೊಡಗಿಸಿಕೊಂಡಿದ್ದಾರೆ. ಸಂಗೀತಾಗೂ ಆ ತರಹದ ಏನಾದರೂ ಆಸೆ ಇದೆಯೇ? “ಪೊ›ಡಕ್ಷನ್‌ ಯೋಚನೆ ಇಲ್ಲ. ನನ್ನ ತಮ್ಮ ಆ ಬಗ್ಗೆ ಯೋಚಿಸುತ್ತಿದ್ದಾನೆ. ನನಗೆ ಅದು ಸರಿ ಹೋಗುವುದಿಲ್ಲ. ಇನ್ನು ನಿರ್ದೇಶನದಲ್ಲಿ ಆಸಕ್ತಿ ಇದೆ. ಕಥೆ ಮಡಿಕೊಂಡಿದ್ದೇನೆ. ಮೂರ್‍ನಾಲ್ಕು ವರ್ಷಗಳ ನಂತರ ನಿರ್ದೇಶನದ ಬಗ್ಗೆ ಯೋಚಿಸಬಹುದೇನೋ? ನನಗೆ ಸಿನಿಮಾ ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ. ಆಗಾಗಿ ಸಿನಿಮಾದಲ್ಲೇ ಆಸಕ್ತಿ. ಸಾಮಾಜಿಕ ಅಂಶಗಳಿರುವ ಸಿನಿಮಾ ನಿರ್ದೇಶನ ಮಾಡುವ ಆಸಕ್ತಿ ಇದೆ. ಕರ್ಮಯಲ್‌ ಸಿನಿಮಾಗಳಿಗಿಂತ, ಕುಟುಂಬ ಸಮೇತ ಜನ ನೋಡವು ಸಿನಿಮಾ ಮಾಡುವ ಯೋಚನೆ ಇದೆ’ ಎಂದು ಸಂಗೀತಾ ಹೇಳುತ್ತಿದ್ದಂತೆಯೇ, ಮಗ ಮತ್ತೆ ಬಂದ. ಪೆಚ್ಚು ಮೋರೆ ಹೊತ್ತು, ಹೋಗೋಣಾÌ ಅಂದ. ಕೊನೆಗೆ, ಮಗನಿಗೆ ಇನ್ನಷ್ಟು ಬೇಸರ ಆಗಬಾರದೆಂದು ಸಂಗೀತಾ ಕೂಡಾ ಎದ್ದು ಹೊರಟರು.

ಬರಹ: ಚೇತನ್‌ ನಾಡಿಗೇರ್‌; ಚಿತ್ರಗಳು: ಮನು

Advertisement

Udayavani is now on Telegram. Click here to join our channel and stay updated with the latest news.

Next