Advertisement

ಬಿಕಿನಿ ಫೋಟೊ ಶೇರ್ ಮಾಡಿದ ಸಂಗೀತಾ ಭಟ್

01:56 PM Apr 11, 2023 | Team Udayavani |

ಪ್ರೀತಿ ಗೀತಿ ಇತ್ಯಾದಿ’, “ಎರಡನೇ ಸಲ’, “ದಯವಿಟ್ಟು ಗಮನಿಸಿ’, “48 ಹವರ್’, “ಆದ್ಯಾ’, “ಕಪಟ ನಾಟಕ ಪಾತ್ರ ಧಾರಿ’ ಮೊದಲಾದ ಸಿನಿಮಾಗಳಲ್ಲಿ ನಾಯಕಿಯಾಗಿ ಸಿನಿಪ್ರಿಯರ ಗಮನ ಸೆಳೆದಿದ್ದ ನಟಿ ಸಂಗೀತಾ ಭಟ್‌, ಕೆಲ ವರ್ಷಗಳ ಹಿಂದೆ ಚಿತ್ರರಂಗದಲ್ಲಿ ತಾವು ಎದುರಿಸಿದ “ಮೀಟೂ’ ಅನುಭವ ಹೇಳಿಕೊಳ್ಳುವ ಮೂಲಕ ಸುದ್ದಿ ಯಾಗಿದ್ದು ನಿಮಗೆ ಗೊತ್ತಿರಬಹುದು.

Advertisement

“ಮೀಟೂ’ ವಿವಾದದ ಬಳಿಕ ಚಿತ್ರರಂಗದಿಂದ ದೂರ ಉಳಿದಿರುವ ನಟಿ ಸಂಗೀತಾ ಭಟ್‌, ಈಗ ಸೋಶಿಯಲ್‌ ಮೀಡಿಯಾದಲ್ಲಿ ಬಿಕಿನಿ ತೊಟ್ಟಿರುವ ತಮ್ಮ ಹಾಟ್‌ ಪೋಟೋಗಳನ್ನು ಶೇರ್‌ ಮಾಡುವ ಮೂಲಕ ಮತ್ತೆ ಸುದ್ದಿಯಾಗಿದ್ದಾರೆ.

ಹೌದು, ಕೆಲ ದಿನಗಳ ಹಿಂದಷ್ಟೇ ಇಂಡೋನೇಷ್ಯಾದ ಬಾಲಿಗೆ ಪ್ರವಾಸ ಹೋಗಿದ್ದಾಗ ಸೆರೆ ಹಿಡಿದ ಬಿಕಿನಿ ತೊಟ್ಟಿರುವ ತಮ್ಮ ಫೋಟೊಗಳನ್ನು ಸಂಗೀತಾ ಭಟ್‌ ತಮ್ಮ ಇನ್ಸ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿ ಕೊಂಡಿದ್ದಾರೆ.

ಸದ್ಯ ಸಂಗೀತಾ ಅವರ ಬಿಕಿನಿ ಫೋಟೋಗಳು ಸೋಶಿಯಲ್‌ ಮೀಡಿಯಾದಲ್ಲಿ ಜೋರಾಗಿ ಹರಿ ದಾಡುತ್ತಿದ್ದು, ವೈರಲ್‌ ಆಗುತ್ತಿದೆ. ಮತ್ತೂಂದೆಡೆ, ತಮ್ಮ ಬಿಕಿನಿ ಪೋಟೋಗಳನ್ನು ಶೇರ್‌ ಮಾಡಿದ ಬಳಿಕ ಸಂಗೀತಾ ಅದಕ್ಕೆ ಬರಲಿರುವ ಕಾಮೆಂಟ್ಸ್‌ ಗೆ ಬ್ರೇಕ್‌ ಹಾಕುವ ಸಲುವಾಗಿ ಕಾಮೆಂಟ್‌ ಸೆಕ್ಷನ್‌ ಆಫ್ ಮಾಡಿದ್ದಾರೆ!

Advertisement

Udayavani is now on Telegram. Click here to join our channel and stay updated with the latest news.

Next