Advertisement

Sangeetha Sringeri; ಅಭಿಮಾನಿಗಳನ್ನು ಭೇಟಿಯಾದ ಬಿಗ್ ಬಾಸ್ ಖಡಕ್ ಹುಡುಗಿ

03:00 PM Feb 12, 2024 | Team Udayavani |

ಬಿಗ್‌ಬಾಸ್‌ ಸೀಸನ್‌-10ನಲ್ಲಿ ಭರ್ಜರಿ ಪೈಪೋಟಿ ಕೊಟ್ಟು, ಆರಂಭದಿಂದ ಕೊನೆಯವರೆಗೆ ಸುದ್ದಿಯಾಗುತ್ತಲೇ ಬಂದ ಸಂಗೀತಾ ಶೃಂಗೇರಿ ಭಾನುವಾರ ಅಭಿಮಾನಿಗಳನ್ನು ಭೇಟಿ ಮಾಡಿದ್ದಾರೆ. ಬಿಗ್‌ಬಾಸ್‌ಗೆ ಹೋದ ನಂತರ ಸಂಗೀತಾ ಅವರ ಫ್ಯಾನ್‌ ಫಾಲೋವರ್ ಹೆಚ್ಚಿದ್ದು, ಅನೇಕರು ಅವರನ್ನು ಭೇಟಿಯಾಗುವ ಇಂಗಿತ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಸಂಗೀತಾ, ಭಾನುವಾರ ಅಭಿಮಾನಿಗಳನ್ನು ಭೇಟಿಯಾಗಿದ್ದಾರೆ.

Advertisement

ಸಾಕಷ್ಟು ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದು, ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. ಸಂಗೀತಾ ಕೂಡಾ ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದಾರೆ. ಕೆಲವು ಅಭಿಮಾನಿಗಳು ಸಂಗೀತಾಗೆ ಬಿಗ್‌ಬಾಸ್‌ ಗೆಲುವು ಕೈ ತಪ್ಪಿದ್ದಕ್ಕೆ ತಬ್ಬಿ ಕಣ್ಣೀರು ಸುರಿಸಿದರು.

ಸದ್ಯ ಸಂಗೀತಾ ಶೃಂಗೇರಿ ನಟಿಸಿರುವ “ಮಾರಿಗೋಲ್ಡ್‌’ ಚಿತ್ರ ಬಿಡುಗಡೆಯ ಹಂತಕ್ಕೆ ಬಂದಿದ್ದು, ಇತ್ತೀಚೆಗೆ ಚಿತ್ರದ ಟೀಸರ್‌ ಬಿಡುಗಡೆಯಾಗಿದೆ. “ಹರ ಹರ ಮಹಾದೇವ’ ಧಾರಾವಾಹಿಯ ಸತಿ ಪಾತ್ರದ ಮೂಲಕ ಕಿರುತೆರೆ ಪ್ರೇಕ್ಷಕರಿಗೆ ಪರಿಚಯವಾದವರು ಸಂಗೀತಾ ಶೃಂಗೇರಿ. ಅದಾದ ನಂತರ “ಎ ಪ್ಲಸ್‌’ ಸಿನಿಮಾದ ಮೂಲಕ ಬಿಗ್‌ ಸ್ಕ್ರೀನ್‌ ಜರ್ನಿ ಶುರು ಮಾಡಿದ ಸಂಗೀತಾ, ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next