Advertisement

ಕೈಗಾರಿಕೆ, ಆರೋಗ್ಯ, ಉದ್ಯೋಗ,  ಶಿಕ್ಷಣ ಎಂಆರ್ ಎನ್ ಸಂಸ್ಥೆಯ ಮುಖ್ಯ ಗುರಿ –ಸಂಗಮೇಶ ನಿರಾಣಿ

07:34 PM Aug 20, 2022 | Team Udayavani |

ರಬಕವಿ-ಬನಹಟ್ಟಿ: ಬಾಗಲಕೋಟೆ ಜಿಲ್ಲೆಯಲ್ಲಿಯ ಪ್ರತಿಭಾವಂತ ಯುವಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಮುಂಬರುವ ದಿನಗಳಲ್ಲಿ ಕೈಗಾರಿಕೆ ಅಭಿವೃದ್ಧಿ, ಬಡವರಿಗೆ ಆರೋಗ್ಯ, ಯುವಕರಿಗ ಉದ್ಯೋಗ ನೀಡುವ ನಿಟ್ಟಿನಲ್ಲಿ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದು ಮುಧೋಳದ ಎಂಆರ್‍ಎನ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಸಂಗಮೇಶ ನಿರಾಣಿ ತಿಳಿಸಿದರು.

Advertisement

ಅವರು ಶನಿವಾರ ಸ್ಥಳೀಯ ತಮ್ಮಣ್ಣಪ್ಪ ಚಿಕ್ಕೋಡಿ ಕಾಲೇಜಿನಲ್ಲಿ ಹಮ್ಮಿಕೊಳ್ಳಲಾದ ಬೃಹತ್ ಉದ್ಯೋಗ ಮೇಳವನ್ನು ಉದ್ಘಾಟಿಸಿ ಮಾತನಾಡಿದರು.

ಮುಂಬರುವ ದಿನಗಳಲ್ಲಿ ಒಂದು ಸಾವಿರ ಜನರಿಗೆ ಉಚಿತ ಶಸ್ತ್ರ ಚಿಕಿತ್ಸೆ ಮಾಡಿಸಲಾಗುವುದು, ಬನಹಟ್ಟಿಯಲ್ಲಿ ಅತ್ಯಾಧುನಿಕ ಜವಳಿ ಪಾರ್ಕ್ ನಿರ್ಮಾಣ, ಮತ್ತು  ಮುಧೋಳದಲ್ಲಿ ಹೈಟೆಕ್ ತರಬೇತಿ ಕೇಂದ್ರವನ್ನು ಆರಂಭಿಸುವ ಗುರಿಯನ್ನು ಎಂಆರ್‍ಎನ್ ಫೌಂಢೇಶನ್ ಹೊಂದಿದೆ. ಒಟ್ಟಿನಲ್ಲಿ ಸಮಾಜ ಸೇವೆಗೆ ಎಂಆರ್‍ಎನ್ ಫೌಂಢೇಶನ್ ಬದ್ಧವಾಗಿದೆ. ನಮ್ಮ ದೇಶದ ಯುವಕರು ವಿದೇಶಕ್ಕೆ ಹೋಗದೆ ನಮ್ಮ ದೇಶದಲ್ಲಿದ್ದುಕೊಂಡು ಸೇವೆ ಸಲ್ಲಿಸಲು ಅನುಕೂಲ ಮಾಡಿಕೊಡಲಾಗುವುದು ಎಂದು ಸಂಗಮೇಶ ನಿರಾಣಿ ತಿಳಿಸಿದರು.

ಇದೇ ಸಂದರ್ಭದಲ್ಲಿ ಬಿಡಿಸಿಸಿ ಬ್ಯಾಂಕ್ ಮಾಜಿ ನಿರ್ದೇಶಕ ಭೀಮಶಿ ಮಗದುಮ್ ಮಾತನಾಡಿ, ಎಂಆರ್‍ಎನ್ ಸಂಸ್ಥೆಯ ಬಡವರ ಮತ್ತು ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅನೇಕ ಸೇವೆಗಳನ್ನು ಮಾಡುತ್ತಿರುವುದು ಅಭಿಮಾನದ ಸಂಗತಿಯಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜನತಾ ಶಿಕ್ಷಣ ಸಂಘದ ಆಡಳಿತ ಮಂಡಳಿಯ ಶಂಕರ ಸೋರಗಾವಿ ಮಾತನಾಡಿದರು. ಹಿರೇಮಠದ ಶರಣ ಬಸವ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು.

Advertisement

ಜನತಾ ಶಿಕ್ಷಣ ಸಂಘದ ಕಾರ್ಯಾಧ್ಯಕ್ಷ ಬಸವರಾಜ ಭದ್ರನವರ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯ ಮೇಲೆ ರಾಮಣ್ಣ ಭದ್ರನವರ, ಬಸವರಾಜ ಜಾಡಗೌಡ, ಶಂಕರ ಜಾಲಿಗಿಡದ, ಮಲ್ಲಿಕಾರ್ಜುನ ಬಾಣಕಾರ, ಗಂಗಾಧರ ಕೊಕಟನೂರ, ದುಂಡಪ್ಪ ಮಾಚಕನೂರ, ಓಂಪ್ರಕಾಶ ಕಾಬರಾ, ಡಾ.ವಿ.ಆರ್.ಕುಳ್ಳಿ, ಸಿದ್ಧರಾಜ ಪೂಜಾರಿ, ಶ್ರೀಶೈಲ ಧಬಾಡಿ, ಶೇಖರ ಕೊಟ್ಟರಶೆಟ್ಟಿ, ಬಸವರಾಜ ದಲಾಲ ಸೇರಿದಂತೆ ಅನೇಕರು ಇದ್ದರು.

ಮಧು ಗುರುವ ಪ್ರಾರ್ಥಿಸಿದರು. ಪ್ರಾಚಾರ್ಯ ಡಾ.ಜಿ.ಆರ್.ಜುನ್ನಾಯ್ಕರ್ ಸ್ವಾಗತಿಸಿದರು. ಡಾ.ಮಂಜುನಾಥ ಬೆನ್ನೂರ ನಿರೂಪಿಸಿದರು. ಪ್ರೊ.ವೈ.ಬಿ.ಕೊರಡೂರ ವಂದಿಸಿದರು.

ಕಾರ್ಯಕ್ರದಲ್ಲಿ ಹರ್ಷವರ್ಧನ ಪಟವರ್ಧನ, ಸುರೇಶ ಕೋಲಾರ, ಶಂಕರ ಜುಂಜಪ್ಪನವರ, ಅಶೋಕ ಚಿಕ್ಕೋಡಿ, ಮಹಾದೇವ ಮುನ್ನೊಳ್ಳಿ, ಶೇಖರ ಜವಳಗಿ, ಪ್ರಭು ಕರಲಟ್ಟಿ, ಮಲ್ಲಪ್ಪ ಹೂಲಿ ಸೇರಿದಂತೆ ಬಾಗಲಕೋಟೆ, ಬೆಳಗಾವಿ ಹಾಗೂ ವಿಜಯಪುರದ ಉದ್ಯೋಗ ಆಕಾಂಕ್ಷಿಗಳು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next