Advertisement

ಎಂಸಿಸಿಗೆ ಸಂಗಕ್ಕರ ಮೊದಲ ಬ್ರಿಟಿಷೇತರ ಅಧ್ಯಕ್ಷ

03:25 AM May 03, 2019 | sudhir |

ಲಂಡನ್‌: ಹೊಸ ಹೊಸ ಕ್ರಿಕೆಟ್‌ ನಿಯಮಗಳನ್ನು ರೂಪಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‌ ಸಂಸ್ಥೆಗೆ ಶಿಫಾರಸು ಮಾಡುವ ಮೆರಿಲ್‌ಬೋನ್‌ ಕ್ರಿಕೆಟ್‌ ಕ್ಲಬ್‌ನ ನೂತನ ಅಧ್ಯಕ್ಷರಾಗಿ ಶ್ರೀಲಂಕಾದ ಕುಮಾರ ಸಂಗಕ್ಕರ ಆಯ್ಕೆಯಾಗಿದ್ದಾರೆ.

Advertisement

ಅಕ್ಟೋಬರ್‌ನಲ್ಲಿ ಅವರು ಅಧಿಕಾರ ಸ್ವೀಕರಿಸಲಿದ್ದು, ಬ್ರಿಟಿಷೇತರ ವ್ಯಕ್ತಿಯೊಬ್ಬರು ಮೊದಲ ಬಾರಿಗೆ ಈ ಸ್ಥಾನಕ್ಕೇರಿದ ಉದಾಹರಣೆ ಇದಾಗಿದೆ. ಸಂಗಕ್ಕರ ಅವರನ್ನು ಹಾಲಿ ಅಧ್ಯಕ್ಷ ಆ್ಯಂಥೋನಿ ರೆಫೊರ್ಡ್‌ ಮುಂದಿನ ಅಧ್ಯಕ್ಷರನ್ನಾಗಿ ಘೋಷಿಸಿದರು. ಇಂತಹ ಗೌರವ ಸಿಕ್ಕಿರುವುದಕ್ಕೆ ಸಂಗಕ್ಕರ ಸಂತೋಷ ವ್ಯಕ್ತಪಡಿಸಿದ್ದು, ಈ ಸ್ಥಾನಕ್ಕೇರಲು ಬಹಳ ಕಾತುರನಾಗಿದ್ದೇನೆಂದು ತಿಳಿಸಿದ್ದಾರೆ.

ಸಂಗಕ್ಕರ 134 ಟೆಸ್ಟ್‌ ಪಂದ್ಯಗಳನ್ನಾಡಿ 38 ಶತಕ, 52 ಅರ್ಧಶತಕಗಳೊಂದಿಗೆ 12,400 ರನ್‌ ಬಾರಿಸಿದ್ದಾರೆ. 404 ಏಕದಿನದಲ್ಲಿ 25 ಶತಕ, 93 ಅರ್ಧಶತಕಗಳೊಂದಿಗೆ 14,24 ರನ್‌ ಬಾರಿಸಿದ್ದಾರೆ. ಶ್ರೀಲಂಕಾ ಕ್ರಿಕೆಟ್‌ ಕಂಡ ಸಾರ್ವಕಾಲಿಕ ಶ್ರೇಷ್ಠ ಆಟಗಾರ ಎಂದು ಗೌರವಿಸಲ್ಪಟ್ಟಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next