Advertisement

ಸಾಹಿತಿಗಳೂ ರಾಜಕಾರಣಿಗಳೇ ಎಂದುಡಿಕೆಶಿ ಹೇಳಿದ್ದು ತಪ್ಪು: ಸಾಣೇಹಳ್ಳಿ ಶ್ರೀ

09:14 PM Jun 20, 2024 | Team Udayavani |

ಹೊಸದುರ್ಗ: ಡಿಸಿಎಂ ಡಿ.ಕೆ.ಶಿವಕುಮಾರ್‌ “ಸಾಹಿತಿಗಳನ್ನು ನಾನೇ ಕರೆಸಿದ್ದು, ತಪ್ಪೇನು’ ಎಂದು ಕೇಳಿದ್ದಾರೆ. ಕರೆಸಿದ್ದರಲ್ಲಿ ಖಂಡಿತವಾಗಿಯೂ ತಪ್ಪಿಲ್ಲ. ಆದರೆ ಅವರೂ ರಾಜಕಾರಣಿಗಳೇ ಎಂದಿರುವುದು ತಪ್ಪು ಎಂದು ತರಳಬಾಳು ಮಠದ ಸಾಣೇಹಳ್ಳಿ ಶಾಖಾ ಮಠದ ಪಟ್ಟಾಧ್ಯಕ್ಷ ಡಾ|ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಕ್ಷೇಪಿಸಿದ್ದಾರೆ.

Advertisement

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಶ್ರೀಗಳು, ಸಾಂಸ್ಕೃತಿಕ ಅಕಾಡೆಮಿ, ಪ್ರಾಧಿ ಕಾರಗಳ ಅಧ್ಯಕ್ಷರನ್ನು ಸರ್ಕಾರ ನೇಮಕ ಮಾಡಿದೆ. ಅವರನ್ನು ಎಲ್ಲಿಗೆ ಬೇಕಾದರೂ ಕರೆಸಿಕೊಳ್ಳಬಹುದು ಎಂದಿರುವುದು ಸರಿಯಲ್ಲ. ಅವರು ಸರ್ಕಾರದಿಂದ ನೇಮಕವಾಗಿದ್ದರೂ ಅವರಿಗೂ ಸ್ವಾಯತ್ತತೆ ಇದೆ. ಎಲ್ಲ ಸಾಹಿತಿಗಳೂ ರಾಜಕಾರಣ ಮಾಡಲ್ಲ. ಬದಲಾಗಿ ರಾಜಕಾರಣಿಗಳು ತಪ್ಪು ಮಾಡಿದಾಗ ಎಚ್ಚರಿಸುವ ಅವಕಾಶ ಸಾಹಿತಿಗಳಿಗಿದೆ. ಅಕಾಡೆಮಿ, ಪ್ರಾ ಧಿಕಾರಗಳು ಸರ್ಕಾರದ ಅಂಗಸಂಸ್ಥೆಗಳಾದರೂ ರಾಜಕೀಯ ಪಕ್ಷಗಳ ಅಂಗಸಂಸ್ಥೆಗಳಲ್ಲ. ಪದಾ ಧಿಕಾರಿಗಳು ಸರ್ಕಾರದ ವಕ್ತಾರರಂತೆ ವರ್ತಿಸದೆ ತಮ್ಮದೇ ಆದ ಸಾಂಸ್ಕೃತಿಕ ನೀತಿ ರೂಪಿಸಿಕೊಳ್ಳಬೇಕು. ಹಾಗಂತ ಸರ್ಕಾರದ ವಿರುದ್ಧ ತಿರುಗಿ ಬೀಳಬೇಕೆಂದಲ್ಲ. ತಮ್ಮ ಕಾಯಕವನ್ನು ನಿಷ್ಠೆ-ನಿಷ್ಠುರವಾಗಿ ಮಾಡಬೇಕು. ತಮ್ಮ ತತ್ವಾದರ್ಶಗಳಿಗೆ ಆಡಳಿತ ಯಂತ್ರ ಸ್ಪಂ ದಿಸದಿದ್ದರೆ ಸರ್ಕಾರಿ ಧೋರಣೆಯನ್ನು ಪ್ರತಿಭಟಿಸಿ ಹೊರ ಬರಬೇಕು ಎಂದು ಸಲಹೆ ನೀಡಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next