Advertisement

ಅಪಘಾತಕ್ಕೆ ವೇಗದ ಚಾಲನೆ ಕಾರಣ: ಕುಮಾರ್‌

03:51 PM May 20, 2019 | Naveen |

ಸಂಡೂರು: ಅಪಘಾತಗಳಿಗೆ ವೇಗದ ಚಾಲನೆ, ಚಾಲಕನ ನಿರ್ಲಕ್ಷ್ಯ ಮನೋಭಾವ, ಉದಾಸೀನತೆಯೇ ಕಾರಣವಾಗಿದ್ದು, ತಾಲೂಕಿನಲ್ಲಿ 3 ತಿಂಗಳಲ್ಲಿ 15 ರಿಂದ 20 ಅವಘಡಗಳು ಜರುಗಿದ್ದು, ಸಾರ್ವಜನಿಕರಿಗೆ ತೊಂದರೆಯಾಗುತ್ತದೆ. ಇದನ್ನು ತಡೆಯಲು ಲಾರಿ ಮಾಲೀಕರು, ಚಾಲಕರು ಹಾಗೂ ಸಾರ್ವಜನಿಕರು ಸಹಕರಿಸಬೇಕು ಎಂದು ಸಿಪಿಐ ಕುಮಾರ್‌ ತಿಳಿಸಿದರು.

Advertisement

ಪುರಸಭೆ ವ್ಯಾಪ್ತಿಯಲ್ಲಿ ಬರುವ ಸಂಡೂರು ತಾಲೂಕಿನ ಧರ್ಮಾಪುರ ಗ್ರಾಮದಲ್ಲಿ ಪೊಲೀಸ್‌ ಠಾಣೆ ವ್ಯಾಪ್ತಿಯಿಂದ ಲಾರಿ, ಟ್ರ್ಯಾಕ್ಸ್‌, ಆಟೋ ಮಾಲೀಕರು, ಚಾಲಕರಿಗಾಗಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಜಾಗೃತ ಸಭೆಯಲ್ಲಿ ಮಾತನಾಡಿದರು. ಶೇ.40% ಅವಘಡಗಳು ವೇಗದ ಚಾಲನೆ ಶೇ 10% ರಷ್ಟು ಕುಡಿತದ ಚಾಲನೆಗೆ ಕಾರಣ. ಕಳೆದುಹೋದ ಜೀವನವನ್ನ ಮತ್ತೆ ಮರಳಿ ತರಲು ಸಾಧ್ಯವಲ್ಲ ಎಂದರು. ವಾಹನಗಳನ್ನು ರಸ್ತೆ ಮಧ್ಯೆದಲ್ಲಿ ನಿಲ್ಲಿಸಬಾರದು. ಚಾಲಕರು, ವಾಹನಗಳ ಜಾಗರೂಕತೆಯಿಂದ ಚಾಲನೆ ಮಾಡಿದರೆ ಮಾತ್ರ ಅವಘಡಗಳು ಆಗುವುದನ್ನು ತಪ್ಪಿಸಬಹುದು ಎಂದು ಸಲಹೆ ನೀಡಿದರು.

ಆರ್‌ಟಿಒ ಇನ್ಸ್‌ಪೆಕ್ಟರ್‌ ಪದ್ಮನಾಭರಾವ್‌ ಮಾತನಾಡಿ, ಚಾಲಕನಿಗೆ ತಾಳ್ಮೆ ಬಹಳ ಮುಖ್ಯ. ಮಾಲೀಕರು, ಚಾಲಕರ ಮಾಹಿತಿಯನ್ನು ಕಡ್ಡಾಯವಾಗಿ ಪಡೆಯಬೇಕು. ಚಾಲನೆ ಪರವಾನಗಿ ಪಡೆದವರಿಗೆ ಮಾತ್ರ ಅವಕಾಶ ನೀಡಬೇಕು ಎಂದು ತಿಳಿಸಿದರು. ದಕ್ಷಿಣ ವಲಯ ಅರಣ್ಯಾಧಿಕಾರಿ ಶಶಿಧರ ಗಣಿ ಮತ್ತು ಭೂ-ವಿಜ್ಞಾನಗಳ ಇಲಾಖೆಯ ಧರಣೇಂದ್ರ, ಪಿಎಸ್‌ಐ ಅಮರೇಶ ಹುಬ್ಬಳ್ಳಿ ಮಾತನಾಡಿದರು. ತೋರಣಗಲ್ ಪಿಎಸ್‌ಐ ವಿಜಯಕುಮಾರ ಗಾದಿಗನೂರು, ಪಿಎಸ್‌ಐ ಶೈಲಜಾ ಪ್ಯಾಟಿ ಶೆಟ್ಟರ, ಪುರಸಭಾ ಮುಖ್ಯಾಧಿಕಾರಿ ಸತ್ಯನಾರಾಯಣರಾವ್‌, ಲಾರಿ ಮಾಲೀಕರ ಸಂಘದ ಅಧ್ಯಕ್ಷ ಕೆ. ಮಲ್ಲಿಕಾರ್ಜುನ, ಧರ್ಮಾಪುರ ಘಟಕದ ಅಧ್ಯಕ್ಷ ಜಿ.ಎಸ್‌. ಸಿದ್ದಪ್ಪ, ಜಿಂದಾಲ್ ಕಂಪನಿಯನ್ನೊಳಗೊಂಡು ಬಹುತೇಕ ಕಂಪನಿಯ ಎಲ್ಲ ಅಧಿಕಾರಿಗಳು, ಚಾಲಕರು ಲಾರಿ ಮಾಲೀಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next