Advertisement

ಸೋಂಕಿತರ ಪ್ರದೇಶ ಸಂಪೂರ್ಣ ಸೀಲ್‌ಡೌನ್‌

04:25 PM Jun 18, 2020 | Naveen |

ಸಂಡೂರು: ಕೋವಿಡ್ ತಾಲೂಕಿನಾದ್ಯಂತ ವಿಸ್ತರಿಸಲು ಪ್ರಾರಂಭಿಸಿದ್ದು ಸಾರ್ವಜನಿಕರು ಎಚ್ಚರಿಕೆಯಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ಮೂಲಕ ಮತ್ತು ಸ್ವಚ್ಛತೆ, ಸ್ಯಾನಿಟೈಸರ್‌ ಬಳಕೆ, ಕಡ್ಡಾಯವಾಗಿ ಮಾಸ್ಕ್ ಬಳಕೆ, ಅನುಮಾನ ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಪರಿಹಾರ ಕಂಡುಕೊಳ್ಳಬೇಕೆಂದು ತಹಶೀಲ್ದಾರ್‌ ರಶ್ಮಿ ಸಲಹೆ ನೀಡಿದ್ದಾರೆ.

Advertisement

ತಾಲೂಕಿನ ಲಿಂಗದ ಹಳ್ಳಿಯಲ್ಲಿ 1, ವಡ್ಡು ಗ್ರಾಮದಲ್ಲಿ 1, ಬಸಾಪುರದಲ್ಲಿ 4, ನಾಗಲಾಪುರ 2, ತೋರಣಗಲ್ಲು 9, ತೋರಣಗಲ್ಲು ರೈಲ್ವೆ ನಿಲ್ದಾಣ 1, ತಾಳೂರು 2, ಶಂಕರ ಗುಡ್ಡ ಕಾಲೋನಿ 2, ವಿದ್ಯಾನಗರ 3 ಒಟ್ಟು 33 ಕೇಸುಗಳು ಪತ್ತೆಯಾಗಿವೆ ಎಂದು ತಿಳಿಸಿದ್ದಾರೆ. ತೋರಣಗಲ್ಲು ಗ್ರಾಮದಲ್ಲಿ ಸೋಂಕಿತರ ಪ್ರದೇಶದಲ್ಲಿ ಪೂರ್ಣಪ್ರಮಾಣದ ಲಾಕ್‌ಡೌನ್‌ ಮತ್ತು ಬ್ಲಿಚಿಂಗ್‌ ಪೌಡರ್‌ ಸಿಂಪಡಣೆ ಮತ್ತು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿ ಮನೆಯವರನ್ನು ಕ್ವಾರಂಟೈನ್‌ಗೆ ಒಳಪಡಿಸಿದ್ದು ಯಾರೂ ಸಹ ಅಲ್ಲಿಗೆ ಹೋಗದಂತೆ ರಸ್ತೆಗಳನ್ನು ಬಂದ್‌ ಮಾಡಲಾಗಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next