Advertisement

ಕೆರೆ ಹೂಳೆತ್ತುವ ಕಾರ್ಯಕ್ಕೆ ಚಾಲನೆ

04:32 PM May 11, 2020 | Team Udayavani |

ಸಂಡೂರು: ಇಂದು ಬಹಳಷ್ಟು ಕೂಲಿ ಕಾರ್ಮಿಕರಿಗೆ ಕೆಲಸವಿಲ್ಲದೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ. ಅಲ್ಲದೆ ವಲಸಿಗರ ಆಗಮನ ಇನ್ನು ಹೆಚ್ಚು ಕಷ್ಟಕ್ಕೆ ದೂಡಿದೆ. ಇದನ್ನು ಪರಿಹರಿಸುವ ಮತ್ತು ಸಾಮಾಜಿಕ ಉಪಯೋಗಿಯಾದ ಕೆರೆ ಹೂಳೆತ್ತುವ ಕಾರ್ಯಕ್ಕೆ ಧರ್ಮಸ್ಥಳ ಗ್ರಾಮೀಣಾಭಿವೃದ್ದಿ ಸಂಸ್ಥೆ ಮುಂದಾಗಿದೆ ಎಂದು ಜಿಲ್ಲಾ ನಿರ್ದೇಶಕ ಚಂದ್ರಶೇಖರ್‌ ಶೆಟ್ಟಿ ಅಭಿಪ್ರಾಯಪಟ್ಟರು.

Advertisement

ಅವರು ತಾಲೂಕಿನ ಕೋಡಾಲು ಗ್ರಾಮದಲ್ಲಿ ನಮ್ಮೂರು ನಮ್ಮ ಕೆರೆ ಯೋಜನೆಯಡಿ ಕೆರೆ ಹೂಳೆತ್ತುವ ಕಾರ್ಯಕ್ಕೆ ಮುಂದಾಗಿದ್ದು ಇದನ್ನು ಸಾರ್ವಜನಿಕರು, ರೈತರು ಸದುಪಯೋಗ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಕರೆ ಅಭಿವೃದ್ಧಿ ಸಮಿತಿ ಅಧ್ಯಕ್ಷ ದಾಸನಗೌಡ, ಊರಿನ ಮುಖಂಡರಾದ ತಿಮ್ಮನಗೌಡ, ತಿಪ್ಪೇಸ್ವಾಮಿ, ಹನುಮಂತರಾವ್‌ ಇತರರು ಮಾತನಾಡಿ, ಈ ಕಾರ್ಯಕ್ಕೆ ಗ್ರಾಮದ ಪ್ರತಿಯೊಬ್ಬರೂ ಸಹ ಬೆಂಬಲಿಸುತ್ತಾರೆ. ಅಲ್ಲದೆ ನಮ್ಮ ಕೆರೆ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆಯವರು ಮುಂದೆ ಬಂದು ಬಡವರ ಪಾಲಿನ ವರವಾಗಿದ್ದಾರೆ ಎಂದರು. ತಾಲೂಕು ಯೋಜನಾಧಿಕಾರಿ ಪ್ರಸಾದ ಮಾತನಾಡಿ ಯೋಜನೆಯ ಮಹತ್ವ ತಿಳಿಸಿದರು. ಗ್ರಾಮದ ರೈತರು, ಗಣ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next