Advertisement

ಶರಣರ ನುಡಿಗಳು ವಿಶ್ವಕ್ಕೆ ಮಾದರಿ

07:02 PM Jan 25, 2020 | Naveen |

ಸಂಡೂರು: ವಿಶ್ವದ ಆತ್ಮಭಾರತವಾದರೆ, ಭಾರತದ ಆತ್ಮಧರ್ಮವಾಗಿ, ಆದ್ದರಿಂದ ಭಾರತದೇಶದ ಧಾರ್ಮಿಕ ಸಂಸ್ಕೃತಿ ಮತ್ತು ಪರಂಪರೆಗಳು, ಶರಣರ ನುಡಿಗಳು ಇಡೀ ವಿಶ್ವಕ್ಕೆ ಮಾದರಿಯಾಗಿವೆ ಎಂದು ಅಲ್ಲಮ ಪ್ರಭುದೇವರ ಮಠದ ಪೀಠಾಧ್ಯಕ್ಷರಾದ ಸಿದ್ದೇಶ್ವರಾನಂದ ಸ್ವಾಮೀಜಿ ತಿಳಿಸಿದರು.

Advertisement

ಅವರು ಪಟ್ಟಣದ ಎಸ್‌.ಇ.ಎಸ್‌. ಬಾಲಕಿಯರ ಶಾಲೆಯಲ್ಲಿ ಅರಿವೇ ಗುರು ಮತ್ತು ಆತ್ಮವಿಕಸನ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ಮಾತನಾಡಿ, ಇಂದು ನಾವೆಲ್ಲರೂ ನೆಮ್ಮದಿ ರಹಿತ ಬದುಕನ್ನು ಸಾಗಿಸುತ್ತಿದ್ದೇವೆ, ಪ್ರತಿಯೊಂದು ಮನೆಯಲ್ಲಿಯೂ ಸಹ ಅಶಾಂತಿ
ತಾಂಡವವಾಡುತ್ತಿದೆ, ಗಂಡ, ಹೆಂಡತಿ, ಅಕ್ಕ,ತಮ್ಮ, ಎಲ್ಲ ಸಂಬಂಧಗಳಲ್ಲಿಯೂ ಸಹ ಅಶಾಂತಿ, ಜಗಳ ಎದ್ದು ಕಾಣುತ್ತಿದೆ, ಅದನ್ನು ತೊಡೆಯಬೇಕಾದರೆ ನಾವು ನಮ್ಮ ಆತ್ಮ ವಿಕಸನ ಮಾಡಿಕೊಳ್ಳಬೇಕು, ಅದರಲ್ಲಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಳ್ಳಬೇಕಾದರೆ ಬಸವಣ್ಣನವರು ಹಾಕಿಕೊಟ್ಟ ಸಪ್ತ ತತ್ವಗಳು ನಮ್ಮ ಬದುಕಿನ ಭಾಗವಾಗಬೇಕು ಕಳಬೇಡ, ಕೊಲಬೇಡ, ಹುಸಿಯನುಡಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಅಳಿಯಲು ಬೇಡ ಎನ್ನುವ ಅಂಶಗಳು ಕಳ್ಳತನ, ಮೋಸ, ವಂಚನೆ ಹೆಚ್ಚಾಗುವ ಇಂದಿನ ದಿನಮಾನಗಳಲ್ಲಿ ನಾವು ಈ ಸಪ್ತ ಅಂಶಗಳನ್ನು ಅಳವಡಿಸಿಕೊಂಡಾಗ ಬದುಕು ಶುದ್ದವಾಗುತ್ತದೆ, ಶಿಕ್ಷಣ ಉಳಿಯುತ್ತದೆ, ಅದ್ದರಿಂದ ಪ್ರತಿಯೊಬ್ಬ ವಿದ್ಯಾರ್ಥಿಯೂ ಸಹ ಶಿಸ್ತು, ಭಕ್ತಿ, ಸಮರ್ಪಣೆ, ಮತ್ತು ಮಾರ್ಗದರ್ಶನ ಪಡೆದುಕೊಂಡಾಗ ಸಮಾನತೆಯ ಹಾಗೂ ಉತ್ತಮ ವಿದ್ಯಾರ್ಥಿಯಾಗಲು
ಸಾಧ್ಯ, ಅದ್ದರಿಂದ ಯಾರೂ ಶಿಸ್ತನ್ನು ರೂಢಿಸಿಕೊಂಡಿರುತ್ತಾರೋ, ಭಕ್ತಿಯನ್ನು ಸಮರ್ಪಣೆ ಮಾಡಿ ಸರಿದಾರಿಯಲ್ಲಿ ಸಾಗಿದಾಗ ಆದರ್ಶ ವಿದ್ಯಾರ್ಥಿಯಾಗುತ್ತಾರೆ ಎಂದರು.

ಉಪನ್ಯಾಸಕ ಬಸವರಾಜ ಬಣಕಾರ ಮಾತನಾಡಿ, ಹೊಂದಿಕೆ ಎಂಬುದು ಎಷ್ಟು ಕಷ್ಟವೋ ನಾಲ್ಕು ದಿನದ ಈ ಬದುಕಿನಲ್ಲಿ ಎನ್ನುವ ಕವಿ ವಾಣಿಯಂತೆ ಬಹಳಷ್ಟು ಸಂದರ್ಭದಲ್ಲಿ ನಾವು ನಮ್ಮ ಅಹಂ ಎನ್ನುವ ಕೋಟೆಯಲ್ಲಿ ಸಂಬಂಧಗಳನ್ನು ಹೊಡೆದುಕೊಳ್ಳುತ್ತಿದ್ದೇವೆ, ಅದ್ದರಿಂದ ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ವಿದ್ಯೆಯ ಜೊತೆಯಲ್ಲಿ ವಿನಯಶೀಲತೆಯನ್ನು ಬೆಳೆಸಿಕೊಳ್ಳುವುದು ಅತಿ ಅಗತ್ಯ, ವಿನಯತೆ ಇದ್ದಾಗ ಉನ್ನತ ಸ್ಥಾನಕ್ಕೆ ಹೋಗಲು ಸಾಧ್ಯ, ಬಹಳಷ್ಟು ಸಂದರ್ಭದಲ್ಲಿ ನಾವು ಹಣದ ಹಿಂದೆ ಬಿದ್ದು ನೆಮ್ಮದಿಯನ್ನು
ಕಳೆದುಕೊಂಡಿದ್ದೇವೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯಗುರುಗಳಾದ ನಾಗರಾಜ ಅವರು ಮಾತನಾಡಿ ವಿದ್ಯಾರ್ಥಿಗಳು ಉತ್ತಮ ಶಿಕ್ಷಣ ಪಡೆದುಕೊಂಡಾಗ ಮಾತ್ರ ಅವರು ಶೃಂಗಾರವಾಗಿ ಕಾಣಲು ಸಾಧ್ಯ, ಅದ್ದರಿಂದ ಬರಿ ಬಟ್ಟೆ, ಅಭರಣಗಳಿಂದಲ್ಲಿ ಶಿಕ್ಷಣ ಪಡೆದುಕೊಳ್ಳುವ ಮೂಲಕ ಮುಂದೆ ಬರಬೇಕು ಎಂದರು. ಕಾರ್ಯಕ್ರಮದಲ್ಲಿ ಕಲ್ಲಯ್ಯ ಮಠ ಸಮಾಜಶಿಕ್ಷಕರು, ಮನೋಹರ ದೆ„ಹಿಕ ಶಿಕ್ಷಕರು, ವನಸುಮ, ಅನುರಾಧ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next