ಶುರುವಾಗುತ್ತಿರುವ ಬಗ್ಗೆ ಗೊತ್ತೇ ಇದೆ. ಆ ಚಿತ್ರವನ್ನು ಆಸ್ಕರ್ ಕೃಷ್ಣ ನಿದೇಶನ ಮಾಡುತ್ತಿದ್ದಾರೆ. ಇನ್ನು, ಲೋಕೇಂದ್ರ ನಾಯಕರಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ನಿರ್ದೇಶಕ ಆಸ್ಕರ್ ಕೃಷ್ಣ ಕೂಡ ಚಿತ್ರದ ಮತ್ತೂಬ್ಬ ಹೀರೋ ಆಗಿದ್ದಾರೆ. ಈ ಚಿತ್ರದ ಫಸ್ಟ್‌ಲುಕ್ ಅನ್ನು ಸುದೀಪ್ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
Advertisement
ಈ ಹಿಂದೆ “ಮನಸಿನ ಮರೆಯಲಿ’ ಎನ್ನುವ ಚಿತ್ರವನ್ನು ನಿರ್ದೇಶಿಸಿದ್ದ ಆಸ್ಕರ್ ಕೃಷ್ಣ ಈ ಚಿತ್ರವನ್ನು ತೆರೆಗೆ ತರುತ್ತಿದ್ದಾರೆ. ಕೆಲ ತಿಂಗಳ ಹಿಂದೆ ತೆರೆಕಂಡಿದ್ದ “ಅಟ್ಟಯ್ಯ ವರ್ಸಸ್ ಹಂದಿ ಕಾಯೋಳು’ ಚಿತ್ರವನ್ನುನಿರ್ದೇಶಿಸಿದ್ದ ಲೋಕೇಂದ್ರ ಸೂರ್ಯ ಈ ಚಿತ್ರಕ್ಕೆ ಚಿತ್ರಕಥೆ, ಸಂಭಾಷಣೆ ಬರೆಯುತ್ತಿದ್ದಾರೆ. ಚಿತ್ರದಲ್ಲಿ ಸ್ನೇಹ, ಪ್ರೀತಿ, ರಾಜಕೀಯ, ಕ್ರೈಂ ಮತ್ತು ಪೋಲೀಸ್ ವ್ಯವಸ್ಥೆ ಮುಂತಾದ ಅಂಶಗಳು ಹೇಗೆ ಒಂದಕ್ಕೊಂದು ಹೇಗೆ ಬೆಸೆದುಕೊಂಡಿರುತ್ತವೆ ಎಂಬುದನ್ನು ತೋರಿಸಲಾಗುತ್ತದೆ ಎಂಬುದು ನಿರ್ದೇಶಕರ ಮಾತು. ಕಾಮಿಡಿ ಕಂ ಕ್ರೈಂ-ಥ್ರಿಲ್ಲರ್ ಕಥಾಹಂದರದ ಈ ಚಿತ್ರದಲ್ಲಿ ಎರಡು ಪ್ರಮುಖ ಪಾತ್ರಗಳನ್ನು ಆಸ್ಕರ್ ಕೃಷ್ಣ ಮತ್ತು ಲೋಕೇಂದ್ರ ಸೂರ್ಯ ಅವರೇ ನಿರ್ವಹಿಸುತ್ತಿದ್ದಾರೆ. ಸದ್ಯ “ಚಡ್ಡಿ ದೋಸ್ತ್’ಗಳ ಚಿತ್ರದ ಬಗ್ಗೆ ಯಾರಾದ್ರೂ “ಕಡ್ಡಿ ಅಲ್ಲಾಡುಸ್ಬುಟಾ’ರು ಅನ್ನೋ ಕಾರಣಕ್ಕೆ ಚಿತ್ರದ ಬಗ್ಗೆ ಹೆಚ್ಚೇನು “ಗುಟ್ಟು’ ಬಿಟ್ಟುಕೊಡದ ಚಿತ್ರತಂಡ, ಎಲ್ಲವನ್ನೂ ತೆರೆಮೇಲೆ ಹೇಳುತ್ತೇವೆ ಎನ್ನುತ್ತದೆ.