Advertisement

ಮರಳುಗಾರಿಕೆ-ಕಲ್ಲು ಗಣಿಗಾರಿಕೆ ಸ್ಪಷ್ಟ ನೀತಿ ರೂಪಿಸುವಲ್ಲಿ ವಿಫ‌ಲ: ಪ್ರತಿಭಟನೆ

10:45 PM Apr 01, 2019 | sudhir |

ಕಾರ್ಕಳ: ಸಾಕಷ್ಟು ಬಾರಿ ಮನವಿ ಮಾಡಿಕೊಂಡಿದ್ದರೂ ಮರಳು, ಕಲ್ಲುಗಣಿಗಾರಿಕೆ ಕುರಿತಂತೆ ಜಿಲ್ಲಾಡಳಿತ, ಕೇಂದ್ರ ಹಾಗೂ ರಾಜ್ಯ ಸರಕಾರ ಸ್ಪಷ್ಟ ನೀತಿ ರೂಪಿಸುವಲ್ಲಿ ವಿಫ‌ಲವಾಗಿರುವುದನ್ನು ಖಂಡಿಸಿ ಬಂಡಿಮಠದಲ್ಲಿ ಎ. 1ರಂದು ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

Advertisement

ಚುನಾವಣೆ ಬಹಿಷ್ಕಾರದ ಎಚ್ಚರಿಕೆ
ಮರಳುಗಾರಿಕೆ, ಕಲ್ಲುಗಣಿಗಾರಿಕೆಗೆ ಅವಕಾಶವಿಲ್ಲದ ಕಾರಣ ಜನಜೀವನ ಅಸ್ತ ವ್ಯಸ್ತವಾಗಿದೆ. ಕಾರ್ಮಿಕರು ಉದ್ಯೋಗ ವಿಲ್ಲದೇ ಕಷ್ಟಪಡುತ್ತಿದ್ದಾರೆ. ತತ್‌ಕ್ಷಣ ಸಮಸ್ಯೆ ಬಗೆಹರಿಸುವಲ್ಲಿ ಸರಕಾರಗಳು, ಜಿಲ್ಲಾಡಳಿತ ಸೂಕ್ತ ಕ್ರಮ ಕೈಗೊಳ್ಳುವಲ್ಲಿ ವಿಳಂಬ ನೀತಿ ಅನುಸರಿಸಿದಲ್ಲಿ ಲೋಕ ಸಭಾ ಚುನಾವಣೆಯನ್ನು ಬಹಿಷ್ಕಾರ ಮಾಡಲಿದ್ದೇವೆ ಎಂದು ಪ್ರತಿಭಟನ ಕಾರರು ಎಚ್ಚರಿಸಿದರು.

ಪ್ರತಿಭಟನಕಾರರನ್ನು ಉದ್ದೇಶಿಸಿ, ಮರಳು ಪರವಾನಿಗೆದಾರರು ಮತ್ತು ಲಾರಿ ಟೆಂಪೊ ಚಾಲಕ ಮಾಲಕರ ಸಂಘದ ಅಧ್ಯಕ್ಷ ಉದಯಕುಮಾರ್‌ ಹೆರ್ಮುಂಡೆ, ಗೌರವಾಧ್ಯಕ್ಷ ಉದಯ ಕುಮಾರ್‌ ಎರ್ಲಪ್ಪಾಡಿ, ಎಂಜಿನಿಯರ್ ಅಸೋಸಿಯೇಷನ್‌ ಅಧ್ಯಕ್ಷ ದಿವಾಕರ ಶೆಟ್ಟಿ, ಎಂ.ಎನ್‌. ಹೆಗ್ಡೆ, ದೀಪಕ್‌ ಕಾಮತ್‌ ಮೊದಲಾದವರು ಮಾತನಾಡಿದರು.

ಮನವಿ
ಕಾರ್ಕಳ ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿ ಹಾಗೂ ತಹಶೀಲ್ದಾರ್‌, ಎಎಸ್‌ಪಿ ಅವರ ಕಚೇರಿಗೆ ತೆರಳಿ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಸ್ಪಂದಿಸುವಂತೆ ಪ್ರತಿಭಟನಕಾರರು ಮನವಿ ನೀಡಿದರು.

ಸ್ಥಳಕ್ಕೆ ತಾಲೂಕು ಪಂಚಾಯತ್‌ಕಾರ್ಯನಿರ್ವಾಹಧಿಕಾರಿ ಮೇ| ಹರ್ಷ ಅವರು ಆಗಮಿಸಿ, ಚುನಾವಣೆ ನೀತಿ ಸಂಹಿತೆ ಜಾರಿಯಲ್ಲಿರುವ ಕಾರಣ ಪ್ರತಿಭಟನೆಗೆ ಅವಕಾಶವಿಲ್ಲ. ತಾವು ಕೂಡಲೇ ಪ್ರತಿಭಟನೆಯನ್ನು ಸ್ಥಗಿತ ಗೊಳಿಸಬೇಕೆಂದು ಮನವಿ ಮಾಡಿ ಕೊಂಡರು. 10 ಗಂಟೆಗೆ ಬಂಡಿ ಮಠದಲ್ಲಿ ಪ್ರಾರಂಭಗೊಂಡ ಶಾಂತಿ ಯುತ ಪ್ರತಿಭಟನೆ 11.30ರ ವೇಳೆ ಕೊನೆಗೊಂಡಿತು.

Advertisement

ಭಾರೀ ಸಂಖ್ಯೆಯಲ್ಲಿ ನೆರೆದ ಪ್ರತಿಭಟನಕಾರರು ಬಂಡಿಮಠ ಬಸ್‌ ನಿಲ್ದಾಣದಲ್ಲಿ ಲಾರಿ ಚಾಲಕ ಮಾಲಕರು, ಎಂಜಿನಿಯರು, ಬಿಲ್ಡರ್‌ಗಳು, ಕಂಟ್ರಾಕ್ಟರ್‌ದಾರರು, ಮೇಸಿŒಗಳು, ಕೂಲಿ ಕಾರ್ಮಿಕರು, ಕೃಷರ್‌ ನವರು, ಕಲ್ಲು ಕೋರೆಯವರು, ಹೊಟೇಲ್‌ನವರು, ಹಾರ್ಡ್‌ ವೇರ್‌ ಅಂಗಡಿಯವರು, ಕಟ್ಟಡ ನಿರ್ಮಾಣ ಮಾಡುವವರು ಸ್ವಯಂ ಪ್ರೇರಿತರಾಗಿ ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆ ಗೊಂಡರು.

ಲೋಕಸಭಾ ಚುನಾವಣೆ ಯಲ್ಲಿ ಮತ ಚಲಾಯಿಸದೇ ನಮಗಾಗಿರುವ ಅನ್ಯಾಯ ಮತ್ತು ನೋವನ್ನು ತೋರ್ಪಡಿಸಿಕೊಳ್ಳಲಿದ್ದೇವೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next