Advertisement

ಉದಯವಾಣಿ ಸುವರ್ಣೋತ್ತರ ಸಂಭ್ರಮ : ಪತ್ರಿಕಾ ರಂಗದ ದಿಗ್ಗಜರ ಸಂಸ್ಮರಣೆ

11:25 AM Nov 08, 2022 | Team Udayavani |

ಉಡುಪಿ : ಕರಾವಳಿಯ ಜನರು ಕನಸುಗಾರರು. ಕಂಡ ಕನಸನ್ನು ನನಸು ಮಾಡಲು ಕಾರ್ಯನಿರತ ವಾಗುವ ಪ್ರಯತ್ನಶೀಲರು ಎಂದು ತರಂಗ ವಾರಪತ್ರಿಕೆಯ ವ್ಯವಸ್ಥಾಪಕ ಸಂಪಾದಕಿ ಡಾ| ಸಂಧ್ಯಾ ಎಸ್‌. ಪೈ ಅವರು ಹೇಳಿದ್ದಾರೆ.

Advertisement

ಉದಯವಾಣಿ ಸುವರ್ಣೋ ತ್ತರ ಸಂಭ್ರಮದಂಗವಾಗಿ ಎಂಜಿಎಂ ಕಾಲೇಜಿನ ಸಹಯೋಗದಲ್ಲಿ ರವೀಂದ್ರ ಮಂಟಪದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಮಣಿಪಾಲದಲ್ಲಿ ಅರಳಿ ವಿವಿಧೆಡೆ ಪತ್ರಿಕಾರಂಗದಲ್ಲಿ ಸೇವೆ ಸಲ್ಲಿಸಿದ ಧೀಮಂತ ಹಿರಿಯ 6 ಮಂದಿ ಸಾಧಕರ ಜನ್ಮಶತ ಮಾನೋತ್ತರ ಸಂಸ್ಮರಣೆ ಕಾರ್ಯ ಕ್ರಮದ ಸಮಾರೋಪದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕರಾವಳಿಗರು ಕನಸುಗಾರರಾದ ಕಾರಣವೇ ಬ್ಯಾಂಕ್‌, ಶಿಕ್ಷಣ, ವೈದ್ಯಕೀಯ, ಪತ್ರಿಕೋದ್ಯಮ ರಂಗ- ಹೀಗೆ ಎಲ್ಲವೂ ಈ ನೆಲದಲ್ಲಿ ಹುಟ್ಟಿ ಬೆಳೆದಿವೆ ಎಂದರು.

ಯುವ ಪೀಳಿಗೆಗೆ ಸ್ಫೂರ್ತಿ
52 ವರ್ಷಗಳ ಹಿಂದೆ “ಉದಯ ವಾಣಿ’, 50 ವರ್ಷಗಳ ಹಿಂದೆ “ತುಷಾರ’, 40 ವರ್ಷಗಳ ಹಿಂದೆ ತರಂಗ, “ತುಂತುರು’ ಆರಂಭವಾ ಗಿತ್ತು. 75 ವರ್ಷಗಳ ಹಿಂದೆ ಇದೇ ಮಣಿಪಾಲದಲ್ಲಿ ಈ ಆರು ಮಂದಿ ದಿಗ್ಗಜರು ಮುದ್ರಣದ ಜತೆಗೆ ಪತ್ರಿಕೆ ಆರಂಭಿಸಿದ್ದರು. ಸುದ್ದಿ ಸಂಗ್ರಹ, ಪ್ರಸಾರ, ವಿತರಣೆ ಎಲ್ಲವನ್ನು ಆ ಕಾಲದಲ್ಲಿ ಹೇಗೆ ಮಾಡುತ್ತಿದ್ದರು ಎಂಬುದನ್ನು ಈಗ ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ. ಅಂತಹ ಶ್ರೇಷ್ಠ ಸಾಧಕರನ್ನು ಗುರುತಿಸಿ, ಕುಟುಂಬ ವರ್ಗವನ್ನು ಗೌರವಿಸುವ ಮೂಲಕ ಯುವ ಪೀಳಿಗೆಯನ್ನು ಪ್ರೋತ್ಸಾಹಿಸುವ ಕಾರ್ಯ ಕೈಗೊಂಡಂತಾಗಿದೆ ಎಂದರು.
ಬೊಮ್ಮಾಯಿ ಅವರನ್ನು ಎಂಜಿಎಂ ಕಾಲೇಜಿನ ವತಿಯಿಂದ ಅಕಾಡೆಮಿ ಆಫ್ ಜನರಲ್‌ ಎಜುಕೇಶನ್‌ ಅಧ್ಯಕ್ಷ ಡಾ| ಎಚ್‌.ಎಸ್‌. ಬಲ್ಲಾಳ್‌, ಎಂಜಿಎಂ ಕಾಲೇಜು ಟ್ರಸ್ಟ್‌ ಅಧ್ಯಕ್ಷ ಟಿ. ಸತೀಶ್‌ ಪೈ, ಪ್ರಾಂಶುಪಾಲ ಪ್ರೊ| ಲಕ್ಷ್ಮೀನಾರಾಯಣ ಕಾರಂತ ಸಮ್ಮಾನಿಸಿದರು.

ಕರಾವಳಿ ಕೈಗಾರಿಕಾ ಪ್ರದೇಶ ಅಭಿವೃದ್ಧಿಗೆ ಉದಯವಾಣಿ ಆಗ್ರಹ
ಕರಾವಳಿಯ ಕೈಗಾರಿಕೆ ಪ್ರದೇಶಗಳ ವಸ್ತು ಸ್ಥಿತಿಯ ಅವಲೋಕನ ಕುರಿತು “ಉದಯವಾಣಿ’ ಸರಣಿ ರೂಪದಲ್ಲಿ ಪ್ರಕಟಿಸಿದ ವರದಿಯ ಕಿರು ಪುಸ್ತಕವನ್ನು ಮಣಿಪಾಲ್‌ ಮೀಡಿಯ ನೆಟ್‌ವರ್ಕ್‌ ಲಿ. ಆಡಳಿತ ನಿರ್ದೇಶಕ ಮತ್ತು ಸಿಇಒ ವಿನೋದ್‌ ಕುಮಾರ್‌ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಸಲ್ಲಿಸಿ, ಈ ವರದಿಗಳನ್ನು ಗಮನಿಸಿ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ವಿನಂತಿಸಿದರು.

ವಿಚಾರ ಸಂಕಿರಣ
ಬೆಳಗ್ಗೆ ಆರುಮಂದಿ ಪತ್ರಿಕಾ ರಂಗದ ದಿಗ್ಗಜರ ಕುರಿತ ವಿಚಾರ ಗೋಷ್ಠಿಯನ್ನು ಜಿಲ್ಲಾಧಿಕಾರಿ ಕೂರ್ಮಾರಾವ್‌ ಉದ್ಘಾಟಿಸಿ, ಹಿರಿಯ ಸಾಧಕರ ಸಾಧನೆಯನ್ನು ಸ್ಮರಿಸಿದರು. ಜಿ.ಪಂ. ಸಿಇಒ ಪ್ರಸನ್ನ ಎಚ್‌. ಹಾಜರಿದ್ದರು. ಗಣಕ ಲಿಪಿ ತಜ್ಞ ಪ್ರೊ| ಕೆ.ಪಿ. ರಾವ್‌ ಅಧ್ಯಕ್ಷತೆ ವಹಿಸಿದ್ದರು. ವಿಚಾರ ಗೋಷ್ಠಿಯಲ್ಲಿ ಎಸ್‌.ಯು. ಪಣಿಯಾಡಿಯವರ ಬಗ್ಗೆ ಸಾಹಿತಿ ಪ್ರೊ| ಮುರಳೀಧರ ಉಪಾಧ್ಯ, ಪಾವೆಂ ಆಚಾರ್ಯರ ಕುರಿತು ಪಾ.ವೆಂ. ಆಚಾರ್ಯ ಟ್ರಸ್ಟ್ ನಿರ್ವಾಹಕ ವಿಶ್ವಸ್ತೆ ಬೆಂಗಳೂರಿನ ಛಾಯಾ ಉಪಾಧ್ಯ, ಕಮಲ್‌ ಹೈದರ್‌ ಬಗ್ಗೆ ಪ್ರೊ| ಕೆ.ಪಿ. ರಾವ್‌, ಬನ್ನಂಜೆ ರಾಮಾಚಾರ್ಯರ ಬಗ್ಗೆ ಲೇಖಕ ಡಾ| ಶ್ರೀಕಾಂತ್‌ ರಾವ್‌ ಸಿದ್ದಾಪುರ, ಬೈಕಾಡಿ ಕೃಷ್ಣಯ್ಯ ಅವರ ಬಗ್ಗೆ ಸಾಹಿತಿ ಬೆಳಗೋಡು ರಮೇಶ್‌ ಭಟ್‌, ಎಂ.ವಿ. ಹೆಗ್ಡೆಯವರ ಬಗ್ಗೆ ಸಂಶೋಧಕ ಡಾ| ಅನಿಲ್‌ ಕುಮಾರ್‌ ಶೆಟ್ಟಿ ವಿಚಾರ ಮಂಡಿಸಿದರು.

Advertisement

ಸಾಧಕರ ಕುಟುಂಬ ವರ್ಗಕ್ಕೆ ಗೌರವ
ಪತ್ರಿಕ ರಂಗದ ಸಾಧಕರಾದ ಎಂ.ವಿ. ಹೆಗ್ಡೆ ಅವರ ಪರವಾಗಿ ಅವರ ಪುತ್ರ ಡಾ| ಸನತ್‌ ಹೆಗ್ಡೆ, ಬನ್ನಂಜೆ ರಾಮಾಚಾರ್ಯರ ಪುತ್ರ ಸರ್ವಜ್ಞ ಬನ್ನಂಜೆ, ಕಮಲ್‌ ಹೈದರ್‌ ಅವರ ಬಂಧು ಇಕ್ಬಾಲ್‌ ಅಹಮ್ಮದ್‌ ಬೆಂಗಳೂರು, ಬೈಕಾಡಿ ಕೃಷ್ಣಯ್ಯ ಅವರ ಪುತ್ರ ಬಿ. ನರಹರಿ, ಎಸ್‌.ಯು. ಪಣಿಯಾಡಿಯವರ ಪರವಾಗಿ ಗಣಕ ಲಿಪಿ ತಜ್ಞ ಪ್ರೊ| ಕೆ.ಪಿ. ರಾವ್‌, ಪಾವೆಂ ಆಚಾರ್ಯರ ಮೊಮ್ಮಗಳಾದ ಛಾಯಾ ಉಪಾಧ್ಯ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಸಮ್ಮಾನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next