ಜೈಪುರ: ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಒಂದು ಬದಲಾವಣೆ ಸಂಭವಿಸಿದೆ. ಗಾಯಾಳು ಪ್ರಸಿದ್ಧ್ ಕೃಷ್ಣ ಬದಲು ಪಂಜಾಬ್‌ನ ಸೀಮರ್ ಸಂದೀಪ್ ಶರ್ಮ ಅವರನ್ನು ಸೇರಿಸಿಕೊಳ್ಳಲಾಗಿದೆ. ಫ್ರಾಂಚೈಸಿ ಸೋಮವಾರ ಇದನ್ನು ಅಧಿಕೃತವಾಗಿ ಪ್ರಕಟಿಸಿತು.
ಕರ್ನಾಟಕದವರಾದ ಪ್ರಸಿದ್ಧ್ ಕೃಷ್ಣ ಬೆನ್ನಿನ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ವಿಶ್ರಾಂತಿಯಲ್ಲಿದ್ದಾರೆ. ಹೀಗಾಗಿ ಸಂದೀಪ್ ಶರ್ಮ ಅವರಿಗೆ “ಲಕ್ಕಿ ಬ್ರೇಕ್’ ಸಿಕ್ಕಿತು. ಕಳೆದ ಹರಾಜಿನಲ್ಲಿ ಅವರು ಮಾರಾಟವಾಗದೇ ಉಳಿದಿದ್ದರು. ಈಗ ಮೂಲಬೆಲೆ 50 ಲಕ್ಷ ರೂ.ಗೆ ರಾಜಸ್ಥಾನ್ ಫ್ರಾಂಚೈಸಿ ಖರೀದಿಸಿದೆ.
ಇದನ್ನೂ ಓದಿ:ಚೇತರಿಕೆಯ ಹಾದಿಯಲ್ಲಿ ಅಮಿತಾಭ್: ಗಾಯದ ಬಳಿಕ ಮೊದಲ ಬಾರಿ ಅಭಿಮಾನಿಗಳ ಮುಂದೆ ಬಂದ ಬಿಗ್ ಬಿ
ಕಿಂಗ್ಸ್ ಇಲೆವೆನ್ ಪಂಜಾಬ್ ಮತ್ತು ಸನ್‌ರೈಸರ್ ಹೈದರಾಬಾದ್ ತಂಡಗಳ ಪರ ಆಡಿರುವ ಸಂದೀಪ್ ಶರ್ಮ, ಇದೇ ಮೊದಲ ಸಲ ರಾಜಸ್ಥಾನ್ ರಾಯಲ್ಸ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. 10 ಸೀಸನ್‌ಗಳಲ್ಲಿ 104 ಐಪಿಎಲ್ ಪಂದ್ಯಗಳನ್ನಾಡಿದ್ದು, 7.77 ಇಕಾನಮಿ ರೇಟ್ ನಲ್ಲಿ 114 ವಿಕೆಟ್ ಉರುಳಿಸಿರುವುದು ಈ ಪಂಜಾಬ್ ಮಧ್ಯಮ ವೇಗಿಯ ಸಾಧನೆ.