Advertisement

ಕನ್ನಡದ ಹಾಸ್ಯನಟ ಮಿಮಿಕ್ರಿ ರಾಜಗೋಪಾಲ್ ವಿಧಿವಶ

03:35 PM Jul 02, 2020 | sudhir |

ಬೆಂಗಳೂರು : ಕನ್ನಡದ ಜನಪ್ರೀಯ ಹಾಸ್ಯನಟ ಮಿಮಿಕ್ರಿ ರಾಜಗೋಪಾಲ್ ಅವರು ಅನಾರೋಗ್ಯದಿಂದ ಬುಧವಾರ ನಿಧನಹೊಂದಿದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.

Advertisement

ಕಿಡ್ನಿ ಹಾಗೂ ಅಸ್ತಮಾ ಕಾಯಿಲೆಯಿಂದ ಬಳಲುತ್ತಿದ್ದ ಅವರು ಕೆಂಗೇರಿಯ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕನ್ನಡ ಹಾಗೂ ಇತರ ಭಾಷೆಗಳ ಸುಮಾರು 650ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ ಮಿಮಿಕ್ರಿ ರಾಜಗೋಪಾಲ್ ತಮ್ಮ ಹಾಸ್ಯ ಚಟಾಕಿಯಿಂದ ಜನಪ್ರೀಯಗೊಂಡಿದ್ದರು, ಮಿಮಿಕ್ರಿ ರಾಜಗೋಪಾಲ್ ಅವರ ನಿದಾನಕ್ಕೆ ಇಡೀ ಚಿತ್ರ ರಂಗ ಕಂಬನಿ ಮಿಡಿದಿದೆ.

ಹಲವಾರು ಕಲಾವಿದರ ಧ್ವನಿಯನ್ನು ಮಿಮಿಕ್ರಿ ಮೂಲಕ ಜನಪ್ರೀಯಗೊಂಡ ಹಾಸ್ಯನಟ ಮೂವರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next