Advertisement

ಹಿರಿಯ ನಟ ದೊಡ್ಡಣ್ಣ ಆರೋಗ್ಯದಲ್ಲಿ ಏರುಪೇರು

06:00 AM Sep 05, 2018 | |

ರಾಯಚೂರು: ಹಿರಿಯ ನಟ ದೊಡ್ಡಣ್ಣನವರು ತಮ್ಮ ಮನೆ ದೇವರಾದ ತಾಲೂಕಿನ ದೇವಸುಗೂರಿನ ಶ್ರೀ ಸುಗೂರೇಶ್ವರ ಸ್ವಾಮಿ ದರ್ಶನಕ್ಕೆ ಬಂದಾಗ ಕಡಿಮೆ ರಕ್ತದೊತ್ತಡದಿಂದ ಅವರ ಆರೋಗ್ಯ ಏರುಪೇರಾಗಿದೆ. ಪತ್ನಿ ಸಮೇತರಾಗಿ ಸೋಮವಾರ ದೇವಸುಗೂರಿಗೆ ಆಗಮಿಸಿದ್ದ ಚಿತ್ರನಟ ದೊಡ್ಡಣ್ಣ, ಸುಗೂರೇಶ್ವರ ದೇವರ ದರ್ಶನ ಪಡೆದಿದ್ದರು. ಮಂಗಳವಾರ ದೇವರಿಗೆ ಅಭಿಷೇಕ ಮಾಡಿಸಿ ಉರುಳು ಸೇವೆ ಮಾಡುವುದಾಗಿ ತಿಳಿಸಿದ್ದರು. ಆದರೆ, ವಸತಿಗೃಹದಲ್ಲಿ ತಂಗಿದ್ದ ಅವರು ಬಾತ್‌ರೂಮ್‌ನಲ್ಲಿ ಕಡಿಮೆ ರಕ್ತದೊತ್ತಡದಿಂದ ನಿಶಕ್ತರಾಗಿ ಕುಸಿದು ಬಿದ್ದರು. ತಕ್ಷಣ ಅವರನ್ನು ಶಕ್ತಿನಗರ ಕೆಪಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಅನಾರೋಗ್ಯದಿಂದಾಗಿ ದೇವರ ದರ್ಶನ ಪಡೆಯದೆ ವಸತಿಗೃಹದಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ. ಪ್ರಾಥಮಿಕ ಚಿಕಿತ್ಸೆ ನೀಡಿರುವ ಡಾ.ರಮೇಶ ಜಗ್ಲಿ, ಆ್ಯಂಬುಲೆನ್ಸ್‌ ಮೂಲಕ ಬೆಂಗಳೂರಿಗೆ ತೆರಳುವಂತೆ ಸಲಹೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next