Advertisement

ರೀ ರಿಲೀಸ್‌ನತ್ತ ಸ್ಟಾರ್ಸ್ ಚಿತ್ರ

02:01 PM Oct 19, 2020 | Suhan S |

ಮರುಬಿಡುಗಡೆ ಸಿನಿಮಾ ಮೂಲಕ ಚಿತ್ರಮಂದಿರಗಳು ತೆರೆದಿವೆ. ನಿಧಾನವಾಗಿ ಪ್ರೇಕ್ಷಕಕೂಡಾ ಚಿತ್ರಮಂದಿರದತ್ತ ಹೆಜ್ಜೆ ಹಾಕುತ್ತಿದ್ದಾನೆ. ಆದರೆ, ಚಿತ್ರಮಂದಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದಾಗ ಮಾತ್ರ ಚಿತ್ರರಂಗದ ಚೇತರಿಕೆ ಸಾಧ್ಯ. ಈ ನಿಟ್ಟಿನಲ್ಲಿ ಕೆಲವು ವಿತರಕರು ಹೊಸ ಪ್ಲ್ರಾನ್‌ ಮಾಡಿದ್ದಾರೆ. ಅದು ಸ್ಟಾರ್‌ ಸಿನಿಮಾಗಳನ್ನು ಮರುಬಿಡುಗಡೆ ಮಾಡುವುದು.

Advertisement

ಹೌದು, ಹೀಗೊಂದು ಯೋಜನೆ ಮೂಲಕ ಪ್ರೇಕ್ಷಕರನ್ನು ಚಿತ್ರಮಂದಿರದತ್ತ ಆಕರ್ಷಿಸಲು ಪ್ರಯತ್ನಿಸುತ್ತಿದ್ದಾರೆ. ಮುಖ್ಯವಾಗಿ ನಿರ್ಮಾಪಕ, ವಿತರಕ ಜಾಕ್‌ ಮಂಜು ಈ ತರಹದ ಯೋಜನೆಗೆ ಮುಂದಾಗಿದ್ದಾರೆ. ಈಗಾಗಲೇ ಅನೇಕ ಸ್ಟಾರ್‌ ಸಿನಿಮಾಗಳ ನಿರ್ಮಾಪಕರಲ್ಲಿ ಅವರು ಮಾತುಕತೆ ನಡೆಸಿದ್ದು, ಅನೇಕರು ಇದಕ್ಕೆ ಗ್ರೀನ್‌ ಸಿಗ್ನಲ್‌ಕೊಟ್ಟಿದ್ದಾರೆ. ಎಲ್ಲವೂ ಅಂದುಕೊಂಡಂತೆ ಆದರೆ ಮುಂದಿನ ದಿನಗಳಲ್ಲಿ “ಟಗರು’, “ಕೋಟಿಗೊಬ್ಬ-2′ ಸೇರಿದಂತೆ ಅನೇಕ ಸ್ಟಾರ್‌ ಸಿನಿಮಾಗಳು ಮತ್ತೆ ಚಿತ್ರಮಂದಿರಕ್ಕೆ ಬರಲಿವೆ.

ಸ್ಟಾರ್‌ಗಳ ಅಭಿಮಾನಿಗಳು ಮತ್ತೂಮ್ಮೆ ತಮ್ಮ ನೆಚ್ಚಿನ ನಟನ ಚಿತ್ರವನ್ನು ದೊಡ್ಡ ಪರದೆಯಲ್ಲಿ ನೋಡಿ ಆನಂದಿಸಲಿದ್ದಾರೆ. “ಮತ್ತೆ ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರಬೇಕಾದರೆ ನಾವು ಏನಾದರೂ ಹೊಸ ಯೋಜನೆ ಮಾಡಲೇಬೇಕು. ಆ ನಿಟ್ಟಿನಲ್ಲಿ ಸ್ಟಾರ್‌ ಸಿನಿಮಾಗಳನ್ನು ರಿಲೀಸ್‌ ಮಾಡಲು ಯೋಚಿಸುತ್ತಿದ್ದೇನೆ. “ಟಗರು’,”ಕೋಟಿಗೊಬ್ಬ-2′ ಸೇರಿದಂತೆ ಇನ್ನೊಂದಷ್ಟು ಸ್ಟಾರ್‌ಗಳ ಸಿನಿಮಾಗಳನ್ನು ರೀ ರಿಲೀಸ್‌ ಮಾಡುವ ಯೋಚನೆ ಇದೆ’ ಎನ್ನುತ್ತಾರೆ ಜಾಕ್‌ ಮಂಜು. ­

Advertisement

Udayavani is now on Telegram. Click here to join our channel and stay updated with the latest news.

Next