Advertisement

ಹೊಸ ವರ್ಷದ ಹೊಸ ವರ್ಷದ ಸಂಭ್ರಮಕ್ಕೆ ತಾರೆಯರು ರೆಡಿ

11:20 AM Dec 28, 2021 | Team Udayavani |

ಹೊಸ ವರ್ಷದ ಸಂಭ್ರಮ ಹತ್ತಿರವಾಗುತ್ತಿದೆ. ಇನ್ನು ಸಿನಿಮಾ ತಾರೆಯರು ಕೂಡ ಹೊಸ ವರ್ಷದ ಸಂಭ್ರಮಕ್ಕೆ, ಸ್ವಾಗತಕ್ಕೆ ರೆಡಿಯಾಗುತ್ತಿದ್ದಾರೆ. ಸ್ಯಾಂಡಲ್‌ವುಡ್‌ನ‌ ತಾರೆಯರು ಹೊಸವರ್ಷದ ಸಂಭ್ರಮಕ್ಕೆ ಏನೇನು ತಯಾರಿ ಮಾಡಿಕೊಂಡಿದ್ದಾರೆ ಅನ್ನೋದರ ಬಗ್ಗೆ ಒಂದು ರೌಂಡಪ್‌.

Advertisement

ಹರ್ಷಿಕಾ ಪೂಣಚ್ಚ

ಸದ್ಯ ನನ್ನ ಹೊಸ ಭೋಜ್‌ಪುರಿ ಸಿನಿಮಾದ ಶೂಟಿಂಗ್‌ಗಾಗಿ ಲಂಡನ್‌ಗೆ ಹೋಗುತ್ತಿದ್ದೇನೆ. ಹೀಗಾಗಿ ಈ ವರ್ಷ ನನ್ನ ನ್ಯೂ ಇಯರ್‌ ಸೆಲೆಬ್ರೆಶನ್ಸ್‌ ಲಂಡನ್‌ ನಲ್ಲೇ ಆಗುತ್ತಿದೆ. ಮೊದಲ ಬಾರಿಗೆ ಲಂಡನ್‌ನಲ್ಲಿ ನ್ಯೂ ಇಯರ್‌ ಸೆಲೆಬ್ರೆಶನ್‌ ಮಾಡಿಕೊಳ್ಳುತ್ತಿರುವುದಕ್ಕೆ ನಾನು ಕೂಡ ತುಂಬ ಎಕ್ಸೈಟ್‌ ಆಗಿದ್ದೇನೆ. ಈ ಹೊಸ ವರ್ಷದಲ್ಲಿ ನನ್ನ ಲೈಫ್ ಇನ್ನಷ್ಟು ಮೀನಿಂಗ್‌ಫ‌ುಲ್‌ ಆಗಿ ಇರಬೇಕು, ನನ್ನಿಂದ ಸಮಾಜಕ್ಕೆ, ಜನರಿಗೆ ಏನೆಲ್ಲ ಸಹಾಯ ಮಾಡಬಹುದೋ ಅದೆಲ್ಲವನ್ನೂ ಮಾಡಬೇಕು ಅಂದುಕೊಂಡಿದ್ದೇನೆ. ಕನ್ನಡದ ಜೊತೆ ಬೇರೆಭಾಷೆಯಲ್ಲಿ ಬರುತ್ತಿರುವ ಹೊಸ ಸಿನಿಮಾಗಳನ್ನು ಮಾಡಬೇಕು ಅಂದುಕೊಂಡಿದ್ದೇನೆ.

ಶ್ರೀಲೀಲಾ

ಈ ವರ್ಷ ನ್ಯೂ ಇಯರ್‌ ದಿನವೇ ನನಗೆ ಎಕ್ಸಾಂ ಇದೆ. ಹಾಗಾಗಿ ಕಳೆದ ಕೆಲವು ದಿನಗಳಿಂದ ಮನೆಯಲ್ಲೇ ಇದ್ದು ಬೇಕಾದ ಸ್ಟಡೀಸ್‌ ಮಾಡ್ತಿದ್ದೀನಿ. ಎಕ್ಸಾಮಿನೇಶನ್‌ ಇರೋದ್ರಿಂದ, ಹೊರಗಡೆ ಹೋಗಿ ನ್ಯೂ ಇಯರ್‌ ಸೆಲೆಬ್ರೆಶನ್ಸ್‌ ಅಂತೇನೂ ಮಾಡ್ತಿಲ್ಲ. ಸದ್ಯಕ್ಕೆ ನ್ಯೂ ಇಯರ್‌ನಲ್ಲಿ ಈಗಾಗಲೇ ಒಪ್ಪಿಕೊಂಡಿರುವ ಸಿನಿಮಾಗಳನ್ನು ಕಂಪ್ಲೀಟ್‌ ಮಾಡ್ಬೇಕು ಅಂತಿದ್ದೀನಿ. ಇನ್ನು ಮುಂದೆ ಹೊಸಥರದ ಕ್ಯಾರೆಕ್ಟರ್‌ ಇರುವಂಥ, ನನಗೆ ಚಾಲೆಂಜಿಂಗ್‌ ಅನಿಸುವಂಥ ಸಿನಿಮಾಗಳನ್ನು ಮಾತ್ರ ಒಪ್ಪಿಕೊಂಡು ಮಾಡಬೇಕು. ಹೊಸವರ್ಷದಲ್ಲಿ ಇನ್ನಷ್ಟು ಕೆಲಸದಲ್ಲಿ ಬಿಝಿಯಾಗಬೇಕು ಅಂಥ ಅಂದುಕೊಂಡಿದ್ದೇನೆ

Advertisement

ಸೋನು ಗೌಡ

ಈ ಡಿಸೆಂಬರ್‌ ಕೊನೆವರೆಗೂ ಶೂಟಿಂಗ್‌ನಲ್ಲೇ ಬಿಝಿಯಾಗಿ ದ್ದೇನೆ. ಇನ್ನು ನ್ಯೂ ಇಯರ್‌ನ ಪ್ರತಿವರ್ಷ ಫ್ಯಾಮಿಲಿ ಜೊತೆ ಸೆಲೆಬ್ರೆಟ್‌ ಮಾಡಿಕೊಳ್ಳುತ್ತಿರುವುದರಿಂದ, ಈ ವರ್ಷ ಕೂಡ ಫ್ಯಾಮಿಲಿ ಅವರ ಪ್ಲಾನಿಂಗ್‌ನಂತೆಯೇ ನನ್ನ ನ್ಯೂ ಇಯರ್‌ ಸೆಲೆಬ್ರೆಶನ್‌ ಕೂಡ ನಡೆಯಲಿದೆ. ಇನ್ನು ನ್ಯೂ ಇಯರ್‌ ರೆಸಲ್ಯೂಶನ್‌ ಅಂತೇನೂ ಮಾಡಿಕೊಂಡಿಲ್ಲ. ಆದ್ರೆ, ಕೆಲವು ವರ್ಷಗಳಿಂದ ಬರೆಯುವುದನ್ನ ನಿಲ್ಲಿಸಿದ್ದೆ. ನಾನು ತುಂಬ ಟ್ರಾವೆಲ್‌ ಮಾಡೋದ್ರಿಂದ, ಅದರ ಅನುಭವಗಳನ್ನು ಈ ಹೊಸವರ್ಷದಲ್ಲಿ ಬರೆದಿಟ್ಟು ಕೊಳ್ಳಬೇಕು ಅಂಥ ಅಂದುಕೊಂಡಿದ್ದೇನೆ.

ನಿಶ್ವಿ‌ಕಾ ನಾಯ್ಡು, ನಟಿ

ಪ್ರತಿವರ್ಷ ಫ್ರೆಂಡ್ಸ್‌ ಮತ್ತು ಫ್ಯಾಮಿಲಿ ಜೊತೆ ನ್ಯೂ ಇಯರ್‌ ಸೆಲೆಬ್ರೆಶನ್ಸ್‌ ಮಾಡುತ್ತಿದ್ದೆ. ಆದ್ರೆ ಈ ವರ್ಷ ನೈಟ್‌ ಕರ್ಫ್ಯೂ ಇರೋದ್ರಿಂದ ಹೊರಗಡೆ ಎಲ್ಲೂ ಹೋಗುತ್ತಿಲ್ಲ. ಏನೇ ಸೆಲೆಬ್ರೆಶನ್‌ ಮಾಡಿದ್ರೂ, ಅದು ಮನೆಯಲ್ಲಿ. ಸದ್ಯಕ್ಕೆ ನನ್ನ ಒಂದಷ್ಟು ಸಿನಿಮಾಗಳು ರಿಲೀಸ್‌ಗೆ ರೆಡಿಯಾಗಿವೆ. ಇನ್ನೊಂದಷ್ಟು ಸಿನಿಮಾಗಳು ಶೂಟಿಂಗ್‌ ಮಾಡಬೇಕಾಗಿದೆ. ಹೊಸ ವರ್ಷದಲ್ಲಿ ಒಪ್ಪಿಕೊಂಡಿರುವ ಸಿನಿಮಾಗಳನ್ನು ಚೆನ್ನಾಗಿ ಮಾಡಬೇಕು ಅನ್ನೋದನ್ನ ಬಿಟ್ಟು ಹೊಸ ರೆಸಲ್ಯೂಶನ್ಸ್‌ ಅಂತೇನೂ ಅಂದುಕೊಂಡಿಲ್ಲ.

ಮೇಘನಾ ಗಾಂವ್ಕರ್‌

ಸದ್ಯಕ್ಕೆ ನಾನು ಎರಡು ಸಿನಿಮಾದ ಶೂಟಿಂಗ್‌ನಲ್ಲಿದ್ದೇನೆ. ಈ ವರ್ಷದ ಕೊನೆ ಮತ್ತು ಹೊಸ ವರ್ಷದ ಆರಂಭ, ಎರಡೂ ದಿನ ಸಿನಿಮಾದ ಶೂಟಿಂಗ್‌ನಲ್ಲಿಯೇ ಇರುತ್ತೇನೆ. ನ್ಯೂ ಇಯರ್‌ ಸೆಲೆಬ್ರೆಶನ್‌ ಏನೇ ಇದ್ರೂ ಅದು ಸಿನಿಮಾ ಟೀಮ್‌ ಜೊತೆಗೆ. ಇನ್ನು ನ್ಯೂ ಇಯರ್‌ ರೆಸಲ್ಯೂಶನ್‌ ಅಂತೇನೂ ಮಾಡಿಕೊಂಡಿಲ್ಲ. ಸುಮಾರು ಒಂದೂವರೆ ವರ್ಷದಿಂದ ಕೋವಿಡ್‌ ಭಯದಿಂದ, ಮಾಡಬೇಕಾದ ಎಷ್ಟೋ ಕೆಲಸಗಳು ಅರ್ಧಕ್ಕೆ ನಿಂತಿವೆ. ಹೀಗಾಗಿ ನ್ಯೂ ಇಯರ್‌ನಲ್ಲಿ ಇನ್ನಷ್ಟು ಎಂಗೇಜ್‌ ಆಗಿರಬೇಕು ಅಂದುಕೊಂಡಿದ್ದೇನೆ. ನ್ಯೂ ಇಯರ್‌ ನಲ್ಲಿ ನನ್ನ 2-3 ಹೊಸ ಸಿನಿಮಾಗಳು ಬಿಡುಗಡೆಯಾಗಲಿದ್ದು, ಕನಿಷ್ಟ 3-4 ಹೊಸ ಸಿನಿಮಾಗಳಾದ್ರೂ ಮಾಡಬೇಕು ಅಂದುಕೊಂಡಿದೆ

Advertisement

Udayavani is now on Telegram. Click here to join our channel and stay updated with the latest news.

Next