Advertisement

ಉದಯವಾಣಿ ಕಚೇರಿಗೆ ಸ್ಯಾಂಡಲ್ ವುಡ್ ನಟರಾದ ರಿಷಬ್ ಶೆಟ್ಟಿ, ಪ್ರಮೋದ್ ಶೆಟ್ಟಿ ಭೇಟಿ

06:08 PM Mar 16, 2021 | Team Udayavani |

ಮಣಿಪಾಲ: ಸ್ಯಾಂಡಲ್ ವುಡ್ ನ ನಟ, ನಿರ್ದೇಶಕ ರಿಷಬ್ ಶೆಟ್ಟಿ ಹಾಗೂ ನಟ ಪ್ರಮೋದ್ ಶೆಟ್ಟಿ ಮಂಗಳವಾರ ಉದಯವಾಣಿ ಕೇಂದ್ರ ಕಚೇರಿಗೆ ಭೇಟಿ ನೀಡಿ, ತಮ್ಮ ಸಿನಿ ಪಯಣ, ನಿರ್ದೇಶನದ ಕುರಿತು ಉದಯವಾಣಿ ಆನ್ ಲೈನ್ ಫೇಸ್ ಬುಕ್ ಲೈವ್ ನಲ್ಲಿ ಹಂಚಿಕೊಂಡರು.

Advertisement

ಇದನ್ನೂ ಓದಿ:ರಿಷಬ್-ಪ್ರಮೋದ್ ಸಂದರ್ಶನ: ”ಹೀರೋ” ಸಿನಿಮಾದ ತೆರೆಯ ಹಿಂದಿನ ಕಥೆ

ಉದಯವಾಣಿ ಕಚೇರಿಗೆ ಆಗಮಿಸಿದ ನಟರಾದ ರಿಷಬ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಅವರನ್ನು ಮಣಿಪಾಲ ಮೀಡಿಯಾ ನೆಟ್ ವರ್ಕ್ ಲಿಮಿಟೆಡ್ (ಎಂಎಂಎನ್ ಎಲ್)ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ( ಸಿಇಒ) ವಿನೋದ್ ಕುಮಾರ್ ಅವರು ಹೂಗುಚ್ಛ ನೀಡಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಹೀರೋ ಸಿನಿಮಾದ ನಿರ್ದೇಶಕ ಭರತ್ ರಾಜ್, ಎಂಡಿಎನ್ ಎಲ್ ಮುಖ್ಯಸ್ಥ ಹರೀಶ್ ಭಟ್, ಉದಯವಾಣಿ ಮಾರುಕಟ್ಟೆ ವಿಭಾಗದ ಮುಖ್ಯಸ್ಥ ರಾಮಚಂದ್ರ ಮಿಜಾರು, ಪ್ರಸರಣಾ ವಿಭಾಗದ ಸತೀಶ್ ಶೆಣೈ, ಡಿಜಿಟಲ್ ವಿಭಾಗದ ಅವಿನಾಶ್ ಕಾಮತ್ ಹಾಜರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು ಉತ್ತಮ ಸಂದೇಶದ ಸಿನಿಮಾವಾಗಿದೆ. ನಿಮ್ಮ ಪರಿಶ್ರಮದಿಂದಲೇ ಚಿತ್ರರಂಗದಲ್ಲಿ ಯಶಸ್ಸಿನ ಉತ್ತುಂಗಕ್ಕೇರಿದ್ದೀರಿ. ಸಿನಿಮಾ ಹಾಗೂ ನಿರ್ದೇಶನದ ಮೂಲಕ ಕನ್ನಡ ಚಿತ್ರರಂಗದಲ್ಲಿ ಜನಪ್ರಿಯರಾಗಿದ್ದು, ಇನ್ನಷ್ಟು ಉತ್ತಮ ಸಿನಿಮಾಗಳು ಮೂಡಿ ಬರಲಿ ಎಂದು ಶುಭ ಹಾರೈಸಿದರು.

Advertisement

ನಂತರ ಉದಯವಾಣಿ ಡಾಟ್ ಕಾಮ್ ನ “ತೆರೆದಿದೆ ಮನೆ ಬಾ ಅತಿಥಿ” ಎಂಬ ಫೇಸ್ ಬುಕ್ ಲೈವ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನಟ ರಿಷಬ್ ಶೆಟ್ಟಿ ಮತ್ತು ಪ್ರಮೋದ್ ಶೆಟ್ಟಿ ಹಲವಾರು ಮಂದಿ ಅಭಿಮಾನಿಗಳ ಪ್ರಶ್ನೆಗೂ ಉತ್ತರಿಸಿದರು.

ಉದಯವಾಣಿ ಅಚ್ಚುಮೆಚ್ಚು:

ನಾವು ಊರು ಬಿಟ್ಟು ಬೆಂಗಳೂರಿನಲ್ಲಿ ನೆಲೆಸಿದರೂ ಕೂಡಾ ಇಂದಿಗೂ ನಮಗೆ ಅಚ್ಚುಮೆಚ್ಚಿನ ಪತ್ರಿಕೆ ಅಂದರೆ ಅದು ಉದಯವಾಣಿ. ಚಿಕ್ಕವರಿದ್ದಾಗಲೂ ಉದಯವಾಣಿಯನ್ನೇ ಓದುತ್ತಿದ್ದೇವು.  ಉದಯವಾಣಿ ಜತೆ ನಮಗೊಂದು ಭಾವನಾತ್ಮಕ ಸಂಬಂಧವಿದೆ ಎಂದು ನಟ ಪ್ರಮೋದ್ ಶೆಟ್ಟಿ ಪತ್ರಿಕೆ ಬಗ್ಗೆ ತಮ್ಮ ಅಭಿಮಾನವನ್ನು ಹಂಚಿಕೊಂಡರು.

ನಾನು ಯಾವತ್ತೂ ಶುಕ್ರವಾರದ ಪತ್ರಿಕೆ ಓದುವುದನ್ನು ತಪ್ಪಿಸುತ್ತಿರಲಿಲ್ಲ. ಯಾಕೆಂದರೆ ಅದರಲ್ಲಿ ಕನ್ನಡ ಚಿತ್ರರಂಗದ ಎಲ್ಲಾ ಸ್ಟಾರ್ ನಟರು ಸೇರಿದಂತೆ ಹೊಸಬರ ಸಂದರ್ಶನ , ಸಿನಿಮಾ ವಿಮರ್ಶೆ ಇರುತ್ತಿತ್ತು. ಸಿನಿಮಾ ಹಿಟ್ ಅಥವಾ ಪ್ಲಾಪ್ ಅನ್ನೋದನ್ನು ಉದಯವಾಣಿ ಪತ್ರಿಕೆಯಲ್ಲಿ ಬರುತ್ತಿದ್ದ ಜಾಹಿರಾತನ್ನು ನೋಡಿಯೇ ನಿರ್ಧರಿಸುತ್ತಿದ್ದೇವು ಎಂದು ನಟ, ನಿರ್ದೇಶಕ ರಿಷಬ್ ಶೆಟ್ಟಿ ತಮ್ಮ ಅನಿಸಿಕೆಯನ್ನು ಬಿಚ್ಚಿಟ್ಟರು.

 

Advertisement

Udayavani is now on Telegram. Click here to join our channel and stay updated with the latest news.

Next