ಆತ್ಮ ಸುತ್ತ ಈಗಾಗಲೇ ಸಾಕಷ್ಟು ಸಿನಿಮಾಗಳು ಬಂದಿವೆ. ಆತ್ಮವನ್ನು ಬೇರೆ ಬೇರೆ ರೀತಿಯಲ್ಲಿ ವ್ಯಾಖ್ಯಾನಿಸುವ ಪ್ರಯತ್ನ ಮಾಡಿವೆ. ಈಗ ಹೊಸಬರ ತಂಡವೊಂದು ಆತ್ಮವನ್ನೇ ನಂಬಿಕೊಂಡು ಸಿನಿಮಾ ಮಾಡುತ್ತಿದೆ.ಕಥೆಯ ಹೈಲೈಟ್ ಆತ್ಮ. ಇತ್ತೀಚೆಗೆ ಹೊಸಬರ ಚಿತ್ರ ಸೆಟ್ಟೇರಿದ್ದು, ಹಿರಿಯ ನಿರ್ದೇಶಕ ಎಸ್.ನಾರಾಯಣ್ ಮುಹೂರ್ತ ಸಮಾರಂಭಕ್ಕೆ ಆಗಮಿಸಿ, ತಂಡಕ್ಕೆ
ಶುಭಕೋರಿದರು. ಚಿತ್ರದುರ್ಗದ ಅರ್ಜುನ್ ರಣಾವತ್ ಸೇನಾಕತೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ.
ಆತ್ಮ ಅಂದರೆ ಅದು ತೊಂದರೆ ಕೊಡುತ್ತದೆ, ಹಿಂಸಿಸುತ್ತದೆ ಎಂಬುದಾಗಿ ಭಾವಿಸಿರುತ್ತಾರೆ. ಆದರೆ ಅದಕ್ಕೂ ಪ್ರೀತಿ ಇರುತ್ತದೆಂದು ಚಿತ್ರದಲ್ಲಿ ತೋರಿಸುವ ಪ್ರಯತ್ನ ಮಾಡಲಾಗುತ್ತದೆ. ಆತ್ಮವಾಗಲುಕಾರಣಗಳೇನು? ಅದರಲ್ಲಿ ಏನಿದೆ. ರಕ್ತಪಾತಕ್ಕಿಂತ ಹೆಚ್ಚಾಗಿ
ಪ್ರೇಮ ಅನ್ನೋದು ಇದೆ. ಆತ್ಮಕ್ಕೂ ಪ್ರೀತಿಸುವ ಹೃದಯ ಇರಲಿದ್ದು, ನಾವುಗಳು ಅನುಸರಿಸಿಕೊಂಡು ಹೋಗಬೇಕು. ಪುಣೆ ನಗರದಲ್ಲಿ 1982ರಂದು ನಡೆದ ಘಟನೆಯನ್ನು ಚಿತ್ರರೂಪಕ್ಕೆ ತರಲಾಗುತ್ತಿದೆ. ಲವ್‌ದಲ್ಲಿ ಬಿದ್ದು ಹುಚ್ಚನಾಗಿದ್ದ ಆತ, ಮುಂದೆ
ಕನ್ನಡ ಜನತೆಗೆ ತಾನು ಏನೆಂದು ತೋರಿಸಿ ಕೊಡ್ತಾನೆ ಎಂಬುದು ನಿರ್ದೇಶಕರ ಮಾತು.
ಮುಖ್ಯ ಪಾತ್ರದಲ್ಲಿ ರಣಧೀರ್ ಮತ್ತು ಸೀನು ನಟಿಸುತ್ತಿದ್ದಾರೆ. ಮಂಡ್ಯದ ರಮ್ಯ ಶೆಟ್ಟಿ ನಾಯಕಿಯಾಗಿ ನಟಿಸುತ್ತಿದ್ದು, ಕಾಲೇಜು ಹುಡುಗಿ ಹಾಗೂ ಪ್ರೇತದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದಂತೆ ಚಿತ್ರದ ತಾರಾಬಳಗದಲ್ಲಿ ಗಿರೀಶ್, ಬಿಂದು, ಸರಸ್ವತಿ, ಸ್ಮಿತಾ, ಮಂಜುಶ್ರೀ, ಖುಷಿ ಮುಂತಾದವರು ಅಭಿನಯಿಸುತ್ತಿದ್ದಾರೆ. ಶಿವಲಿಂಗ ಸಾಹಿತ್ಯದ ಆರು ಹಾಡುಗಳಿಗೆ ಎ.ಟಿ.ರವೀಶ್ ಸಂಗೀತ, ಮಧು ಛಾಯಾ ಗ್ರಹಣ, ಶೇಖರ್ ಸಂಕಲನ, ಸಾಹಸ ರಮೇಶ್, ನೃತ್ಯ ಮದನ್ ಕುಮಾರ್ ಅವರದಾಗಿದೆ. ಬೆಂಗಳೂರು, ಮಂಗಳೂರು, ಸಕಲೇಶಪುರ, ಚಿಕ್ಕಮಗಳೂರುಕಡೆಗಳಲ್ಲಿ ಒಂದೇ ಹಂತದಲ್ಲಿ ಮೂವತ್ತು ದಿನಗಳಕಾಲ ಚಿತ್ರೀಕರಣ ನಡೆಸಲು ಯೋಜನೆ ಚಿತ್ರತಂಡದ್ದು.ಶ್ರೀ ಚಾಮುಂಡೇಶ್ವರಿ ಮೂವೀ ಮೇಕರ್ ಬ್ಯಾನರ್ ಅಡಿಯಲ್ಲಿ ಚಿತ್ರ ನಿರ್ಮಾಣವಾಗುತ್ತಿದೆ.